Sunday , July 22 2018
ಕೇಳ್ರಪ್ಪೋ ಕೇಳಿ
Home / Gossip / ಬಾಯ್ ಫ್ರೆಂಡ್​ಗಾಗಿ ನಿರ್ಮಾಪಕಿಯಾಗ್ತಿದ್ದಾರಂತೆ ನಯನಾತಾರಾ…!

ಬಾಯ್ ಫ್ರೆಂಡ್​ಗಾಗಿ ನಿರ್ಮಾಪಕಿಯಾಗ್ತಿದ್ದಾರಂತೆ ನಯನಾತಾರಾ…!

ಚೆನ್ನೈ : ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನಾತಾರಾ ತಮ್ಮ ಪರ್ಸನಲ್ ಲೈಫ್​ನ ಕೆಲವೊಂದು ಇನ್​​ಫಾರ್ಮೇಷನ್​ ಅನ್ನು ಸಾಧ್ಯವಾದಷ್ಟು ಮುಚ್ಚಿಡೋದಕ್ಕೆ ಯತ್ನಿಸ್ತಾರೆ. ಆದ್ರೆ, ಎಷ್ಟೇ ಮುಚ್ಚಿಟ್ಟರು ಕೆಲವೊಂದು ವಿಷಯಗಳು ಹೊರಗೆ ಬರುತ್ತಲೇ ಇರುತ್ತವೆ. ಈಗ ಕೂಡಾ ಅದೇ ಆಗಿದೆ. ಸದ್ಯದ ಮಟ್ಟಿಗೆ ನಯನಾ ತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪರಸ್ಪರ ಪ್ರೀತಿಸುತ್ತಾರೆ ಎಂಬ ಸುದ್ದಿ ದಟ್ಟವಾಗಿಯೇ ಇದೆ. ಇದಕ್ಕೆ ಸರಿಯಾಗಿ ಇವರಿಬ್ಬರು ಒಂದಾಗಿ ಕಾಣಿಸಿಕೊಳ್ಳುವ ಮೂಲಕ ಈ ಸುದ್ದಿಗೆ ಇನ್ನಷ್ಟು ರೆಕ್ಕೆ ಪುಕ್ಕ ತರುತ್ತಿದ್ದಾರೆ. ಜೊತೆಗೆ, ಶೀಘ್ರದಲ್ಲೇ ಇವರಿಬ್ಬರು ಮದ್ವೆ ಕೂಡಾ ಆಗಲಿದ್ದಾರೆ ಅಂತಾನೂ ಹೇಳಲಾಗುತ್ತಿದೆ…

ಈ ನಡುವೆ, ನಯನಾ ತಾರಾ ನಿರ್ಮಾಪಕಿಯಾಗೋದಕ್ಕೆ ಮನಸ್ಸು ಮಾಡಿದ್ದಾರಂತೆ. ಅದೂ ತಮ್ಮ ಬಾಯ್ ಫ್ರೆಂಡ್​ಗೋಸ್ಕರ. ವಿಘ್ನೇಶ್ ಶಿವನ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಕಾಸು ಹಾಕೋದಕ್ಕೆ ನಯನಾ ಸಿದ್ಧವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಯುವ ನಟ ಅಥರ್ವ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

ವಿಘ್ನೇಶ್ ಈ ವರ್ಷ ಸೂರ್ಯ ಅಭಿನಯದ ತನ್ನ ಸಿರಂದ ಕೂಟಂ ಮತ್ತು ಗ್ಯಾಂಗ್ ಅನ್ನೋ ಚಿತ್ರ ನಿರ್ದೇಶಿಸಿದ್ದರು. ಸಂಕ್ರಾಂತಿ ವೇಳೆಗೆ ರಿಲೀಸ್ ಆಗಿದ್ದ ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಾಣದೇ ಇದ್ದರೂ ಹಬ್ಬದ ವೇಳೆ ಒಳ್ಳೆಯ ದುಡ್ಡು ಮಾಡಿತ್ತು.

About sudina

Check Also

ಬಾಲಿವುಡ್ ನಟಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಡೇಟಿಂಗ್…?

ಮುಂಬೈ : ಕ್ರಿಕೆಟಿಗರು ಹಾಗೂ ಸಿನೆಮಾ ನಟಿಯರ ನಡುವೆ ಪ್ರೇಮಾಂಕುರವಾಗುವುದು ಹೊಸದಲ್ಲ. ವಿರಾಟ್ ಅನುಷ್ಕಾ, ಯುವರಾಜ್ ಹಜೆಲ್, ಜಾಹೀರ್ ಖಾನ್ …

Leave a Reply

Your email address will not be published. Required fields are marked *

error: Content is protected !!