Monday , February 18 2019
ಕೇಳ್ರಪ್ಪೋ ಕೇಳಿ
Home / Film News / ಪೊಲೀಸ್ ಡ್ರೆಸ್ ನಲ್ಲಿದ್ದ ನಟಿಯನ್ನು ಬಂಧಿಸಿದ ರಿಯಲ್ ಖಾಕಿ…!

ಪೊಲೀಸ್ ಡ್ರೆಸ್ ನಲ್ಲಿದ್ದ ನಟಿಯನ್ನು ಬಂಧಿಸಿದ ರಿಯಲ್ ಖಾಕಿ…!

ಚೆನ್ನೈ : ತಮಿಳಿನ ಕಿರುತೆರೆಯ ನಟ ನಿಲಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿರುದ್ಧ ವೀಡಿಯೋ ಹೇಳಿಕೆ ರಿಲೀಸ್ ಮಾಡಿದ್ದರ ವಿರುದ್ಧ ನಿಲಾನಿ ಮೇಲೆ ಪ್ರಕರಣ ದಾಖಲಾಗಿತ್ತು.

ಮೇ 22 ರಂದು ತೂತುಕುಡಿಯಲ್ಲಿ ಪ್ರತಿಭಟನೆ ವೇಳೆ ಪೊಲೀಸ್ ಫೈರಿಂಗ್ ನಿಂದ 13 ಜನ ಸಾವನ್ನಪ್ಪಿದ್ದರು. ಈ ಕ್ಷಣದ ವರೆಗೂ ಈ ಬಗ್ಗೆ ಚರ್ಚೆ, ಖಂಡನೆಗಳು ವ್ಯಕ್ತವಾಗ್ತಿವೆ. ಇತ್ತ, ಈ ನಟಿ ನಿಲಾನಿ ಪೊಲೀಸರ ನಡೆಯನ್ನು ಖಂಡಿಸಿ ವೀಡಿಯೋ ಹೇಳಿಕೆ ರಿಲೀಸ್ ಮಾಡಿದ್ದರು. ಇದರಲ್ಲಿ ಪೊಲೀಸರ ವರ್ತನೆಯನ್ನು ಶ್ರೀಲಂಕಾ ಸೇನೆ ತಮಿಳರ ಮೇಲೆ ಮಾಡುತ್ತಿದ್ದ ದಾಳಿಯಂತಿದೆ ಎಂದು ಹೋಲಿಸಿದ್ದರು. ಇದು ಪೊಲೀಸರ ಕಣ್ಣು ಕೆಂಪಗಾಗಿಸಿತ್ತು. ಹೀಗಾಗಿ. ನಿಲಾನಿ ವಿರುದ್ಧ ಪ್ರಕಾರಣ ದಾಖಲಾಗಿತ್ತು.

ನಿಲಾನಿ ಧಾರವಾಹಿ ಶೂಟಿಂಗ್ ಸೆಟ್ ನಲ್ಲಿ ಪೊಲೀಸ್ ಅಸಿಸ್ಟೆಂಟ್ ಕಮಿಷನರ್ ಸಮವಸ್ತ ಧರಿಸಿ ಶೂಟಿಂಗ್ ನಲ್ಲಿ ತೊಡಗಿದ್ದರು. ಇಲ್ಲಿಗೆ ಬಂದಿದ್ದ ಖಾಕಿ ಟೀಮ್ ನಿಲಾನಿ ಅವರನ್ನು ಬಂಧಿಸಿದೆ. ಇವರ ವಿರುದ್ಧ ನಾಲ್ಕು ಸೆಕ್ಷನ್ ಅಡಿ ಕೇಸ್ ದಾಖಲಾಗಿದ್ದು, ಬಂಧನ ವಾರೆಂಟ್ ಕೂಡಾ ಜಾರಿಯಾಗಿತ್ತು.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!