Monday , July 23 2018
ಕೇಳ್ರಪ್ಪೋ ಕೇಳಿ
Home / Film News / ಮುಗಿಯುವ ಹಂತದಲ್ಲಿ ಸಮಂತಾ `ಯೂ ಟರ್ನ್’

ಮುಗಿಯುವ ಹಂತದಲ್ಲಿ ಸಮಂತಾ `ಯೂ ಟರ್ನ್’

ಹೈದರಬಾದ್ : 2016ರ ಕನ್ನಡದ ಸೂಪರ್ ಹಿಟ್ ಚಿತ್ರ `ಯೂ ಟರ್ನ್’ ತಮಿಳು ಮತ್ತು ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ ಎಂಬುದು ಹಳೇ ಸುದ್ದಿ. ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಬೆಂಗಳೂರಿನ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮತ್ತು ಅದರಿಂದ ಆಗುವ ನಿಗೂಢ ಸಾವಿನ ಕತೆಯನ್ನು ಇಟ್ಟುಕೊಂಡು ನಿರ್ಮಾಣವಾಗಿತ್ತು, ಕನ್ನಡದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದ ಈ ಚಿತ್ರ ಈ ಟಾಲಿವುಡ್, ಕಾಲಿವುಡ್‍ಗೂ ಹಾರಿತ್ತು. ಸಮಂತಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದ ವಿಷಯ ಏನಪ್ಪಾ ಅಂದರೆ ಈ ಚಿತ್ರದ ಶೂಟಿಂಗ್ ಈಗ ಮುಗಿಯುವ ಹಂತಕ್ಕೆ ಬಂದಿದ್ದು, ಅಕ್ಟೋಬರ್ ವೇಳೆಗೆ ಈ ಚಿತ್ರವನ್ನು ರಿಲೀಸ್ ಮಾಡೋದಕ್ಕೆ ಚಿತ್ರತಂಡ ನಿರ್ಧರಿಸಿದೆ.

ಕನ್ನಡದಲ್ಲಿ ಶೃದ್ಧಾ ಶ್ರೀನಾಥ್ ನಿರ್ವಹಿಸಿದ್ದ ಪಾತ್ರವನ್ನು ಸಮಂತಾ ಮಾಡುತ್ತಿದ್ದಾರೆ. ಸಮಂತಾರದ್ದು ಇಲ್ಲಿ ಪತ್ರಕರ್ತೆಯ ಪಾತ್ರ. ಶೂಟಿಂಗ್ ಈಗ ಭರದಿಂದ ಸಾಗಿದ್ದು, ಕೊನೆ ಕ್ಷಣದ ಕೆಲವೊಂದು ದೃಶ್ಯಗಳಷ್ಟೇ ಚಿತ್ರೀಕರಣಕ್ಕೆ ಬಾಕಿ ಇದೆ ಎಂದು ಗೊತ್ತಾಗಿದೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!