Tuesday , April 23 2019
ಕೇಳ್ರಪ್ಪೋ ಕೇಳಿ
Home / Interval / ಡ್ಯಾನ್ಸ್ ಕಲಿಯಲು 19 ಕಿಲೋ ಮೀಟರ್ ನಡೆಯುತ್ತಿದ್ದರು ಗೋವಿಂದ…!

ಡ್ಯಾನ್ಸ್ ಕಲಿಯಲು 19 ಕಿಲೋ ಮೀಟರ್ ನಡೆಯುತ್ತಿದ್ದರು ಗೋವಿಂದ…!

ಬಾಲಿವುಡ್​ನಲ್ಲಿ ಗೋವಿಂದ ಡ್ಯಾನ್ಸ್ ಮತ್ತು ಡಿಫ್ರೆಂಟ್ ಎಕ್ಸ್​ಪ್ರೆಷನ್​ಗೆ ಫೇಮಸ್. ಎಲ್ಲರೂ ಮೆಚ್ಚುವ ಬಿ ಟೌನ್ ನಟ ಇವರು. ಇಂತಹ ಗೋವಿಂದರಿಗೆ ಡ್ಯಾನ್ಸ್ ಅಂದ್ರೆ ಪಂಚಪ್ರಾಣ. ಇತ್ತೀಚೆಗೆ ನಟಿ ಮಾಧುರಿ ದೀಕ್ಷಿತ್ ಅವರು ನಡೆಸಿಕೊಡುವ ಡ್ಯಾನ್ಸ್ ದಿವಾನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೋವಿಂದ ತಮ್ಮ ಡ್ಯಾನ್ಸ್ ಮೇಲಿನ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕಷ್ಟದ ದಿನಗಳಲ್ಲಿ ತಾನು ಡ್ಯಾನ್ಸ್ ಕಲಿಯಲುಪಟ್ಟ ಪಡಿಪಾಟಲು ಮತ್ತು ತನ್ನ ಡ್ಯಾನ್ಸ್ ಗುರು, ಕೊರಿಯೋಗ್ರಾಫರ್ ಸರೋಜ್ ಖಾನ್ ತನಗೆ ಸಹಾಯ ಮಾಡಿದ್ದನ್ನೂ ಗೋವಿಂದ ಇಲ್ಲಿ ಹೇಳಿಕೊಂಡಿದ್ದಾರೆ.

‘ಡ್ಯಾನ್ಸ್ ಯಾವತ್ತೂ ನನಗೆ ಪಂಚಪ್ರಾಣ. ಇದು ನನಗೆ ಬೇರೆಯದ್ದೇ ಶಕ್ತಿ ತಂದು ಕೊಡುತ್ತಿತ್ತು. ನಾನು ಚಿಕ್ಕದಿರುವಾಗ ಡ್ಯಾನ್ಸ್ ಕ್ಲಾಸ್​ಗೆ 19 ಕಿಲೋ ಮೀಟರ್​ನಷ್ಟು ನಡೆದೇ ಹೋಗುತ್ತಿದ್ದೆ. ಇದು ನನಗೆ ಈಗಲೂ ನೆನಪಿದೆ. ಆಗ ವಾಹನದಲ್ಲಿ ಹೋಗುವಷ್ಟು ಹಣ ನಮ್ಮಲ್ಲಿ ಇರಲಿಲ್ಲ. ಹೀಗಾಗಿ, ನಡೆಯುವುದು ಅನಿವಾರ್ಯವಾಗಿತ್ತು. ಆದರೆ, ಡ್ಯಾನ್ಸ್ ಮೇಲಿನ ಪ್ರೀತಿ ನನ್ನನ್ನು ಇಷ್ಟು ದೂರ ನಡೆಸುತ್ತಿತ್ತು. ನನ್ನ ಈ ಕಷ್ಟ ಮತ್ತು ಆಸಕ್ತಿಯನ್ನು ಕಂಡ ನನ್ನ ಗುರು ಸರೋಜ್ ಖಾನ್ ನನ್ನ ಬಳಿ ಒಂದು ಪೈಸೆಯನ್ನೂ ತೆಗೆದುಕೊಳ್ತಿರಲಿಲ್ಲ’ ಎಂದು ಗೋವಿಂದ ತಮ್ಮ ಹಳೇ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!