Sunday , July 22 2018
ಕೇಳ್ರಪ್ಪೋ ಕೇಳಿ
Home / Film News / ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆಟಪ್​ನಲ್ಲಿ ಅನುಪಮ್ ಖೇರ್ : ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆಟಪ್​ನಲ್ಲಿ ಅನುಪಮ್ ಖೇರ್ : ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮುಂಬೈ : ಖ್ಯಾತ ನಟ ಅನುಪಮ್ ಖೇರ್ ಈ ಸಲ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗೆಟಪ್​ನಲ್ಲಿ ಮಿಂಚುತ್ತಿದ್ದಾರೆ. ‘ದಿ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಚಿತ್ರದಲ್ಲಿ ಖೇರ್ ಮನಮೋಹನ್ ಸಿಂಗ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇನ್ನು, ನಟಿ ದಿವ್ಯಾ ಸೇತ್ ಮನಮೋಹನ್ ಸಿಂಗ್ ಪತ್ನಿ ಗುರ್​ಶರಣ್ ಕೌರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಅನುಪಮ್ ಖೇರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತೆ ಖೇರ್ ನಡೆಯುವ ದೃಶ್ಯವೂ ವೈರಲ್ ಆಗಿದೆ. ಇದು ಯುಕೆಯಲ್ಲಿ ಫಿಲಂ ಸೆಟ್​ನಲ್ಲಿ ನಡೆದ ಈ ಶೂಟಿಂಗ್​ನ ವೀಡಿಯೋವನ್ನು ಖೇರ್ ಹಂಚಿಕೊಂಡಿದ್ದಾರೆ.

The Actor…. The Character…. #TheAccidentalPrimeMinister 🙏

A post shared by Anupam Kher (@anupampkher) on


‘ದಿ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಚಿತ್ರವನ್ನು ರಾಷ್ಟ್ರೀಯ ಪ್ರಶಸ್ತಿ ಪಡೆದ ಫಿಲಂಮೇಕರ್ ಹಂಸಲ್ ಮೆಹ್ತಾ ಬರೆದಿದ್ದು, ವಿಜಯ್ ರತನ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಕೂಡಾ ನಟಿಸಿದ್ದು, ಫಿಲಂ ಡಿಸೆಂಬರ್ 21ಕ್ಕೆ ರಿಲೀಸ್ ಆಗಲಿದೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!