ಬಂಟ್ವಾಳ : ವಿಶ್ವ ಯೋಗದಿನದಂದು ದೇಶದೆಲ್ಲೆಡೆ ಎಲ್ಲರೂ ಯೋಗ ಮಾಡಿ ಯೋಗದ ಬಗೆಗಿನ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆದಿದೆ. ಬಂಟ್ವಾಳದಲ್ಲೂ ಯೋಗ ದಿನವನ್ನು ಶೃದ್ಧೆಯಿಂದಲೇ ಆಚರಿಸಲಾಯ್ತು. ಪತಂಜಲಿ ಯೋಗ ಪ್ರತಿಷ್ಠಾನ, ರೋಟರಿ ಕ್ಲಬ್ ಬಂಟ್ವಾಳ್ ಟೌನ್ ಮತ್ತು ರೋಟರಿಕ್ಲಬ್ ಬಂಟ್ವಾಳ ಇದರ ಸಹಯೋಗದೊಂದಿಗೆ ಬಿ.ಸಿ.ರೋಡ್ನ ಗೀತಾಂಜಲಿ ಕಲ್ಯಾಣ ಪಂಟಪದಲ್ಲಿ ಯೋಗ ಪ್ರದರ್ಶನ ನಡೆಯಿತು. ರೋ ಶಾಂತರಾಜ್ ಮತ್ತು ಮಂಜುಳಾ ಶಾಂತರಾಜ್ ಯೋಗಾಸನ ಪ್ರದರ್ಶಿಸಿದರು. ಕ್ಲಬ್ ವತಿಯಿಂದ ಉಮೇಶ್ ನಿರ್ಮಲ್, ಜಯರಾಜ್ ಎಸ್ ಬಂಗೇರ, ಸವಿತಾ ನಿರ್ಮಲ್ ಭೂಮಿಕಾ ಮತ್ತು ನಾರಾಯಣ ಪೆರ್ನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
