Monday , July 23 2018
ಕೇಳ್ರಪ್ಪೋ ಕೇಳಿ
Home / Interval / ಮಲಗಿದ್ದ ಸಂಜಯ್ ದತ್ ಎದ್ದಿದ್ದು ಎರಡು ದಿನಗಳ ನಂತರ…! : ಯಾಕೆ ಹೀಗೆ ಗೊತ್ತಾ…?

ಮಲಗಿದ್ದ ಸಂಜಯ್ ದತ್ ಎದ್ದಿದ್ದು ಎರಡು ದಿನಗಳ ನಂತರ…! : ಯಾಕೆ ಹೀಗೆ ಗೊತ್ತಾ…?

ಬಾಲಿವುಡ್ ನಟ ಸಂಜಯ್ ದತ್ ಲೈಫ್ ಯಾವುದೇ ಸಿನೆಮಾಕ್ಕಿಂತ ಕಡ್ಮೆ ಇಲ್ಲ. ಹಲವು ಅಫೇರ್ಸ್, ಡ್ರಗ್ ಅಡಿಕ್ಷನ್, ಜೈಲು ಜೀವನ, ಅಂಡರ್​ವರ್ಲ್ಡ್ ಲಿಂಕ್ ಹೀಗೆ ಸಂಜೂ ಜೀವನದಲ್ಲಿ ನಡೆದ ಘಟನೆಗಳು ಹಲವು. ಇವುಗಳ ಬಗ್ಗೆ ಸಂಜೂ ಯಾವತ್ತೂ ಮುಚ್ಚುಮರೆ ಮಾಡಿದವರೇ ಅಲ್ಲ… ಹೀಗೆ ತನ್ನ ಬದುಕಿನ ವಿಚಿತ್ರ ಘಟನೆಗಳ ಬಗ್ಗೆ ಸಂಜಯ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ಹಳೇ ವೀಡಿಯೋವನ್ನು ನೋಡಿದಾಗ ಎಲ್ಲರಿಗೂ ಒಂದು ಸಲ ಶಾಕ್ ಆಗುತ್ತೆ…

ಅದು ನಟಿ ಮತ್ತು ನಿರೂಪಕಿ ಸಿಮಿ ಗೆರ್ವಾಲ್ ನಡೆಸಿಕೊಟ್ಟ ಸಂದರ್ಶನ. ಈ ಸಂದರ್ಶನದಲ್ಲಿ ಸಂಜಯ್ ತನ್ನ ಬದುಕಿನ ಬಗ್ಗೆ ಮಾತನಾಡುತ್ತಾ ಡ್ರಗ್ಸ್ ಚಟದ ಬಗೆಯೂ ಬಿಚ್ಚಿಟ್ಟಿದ್ದರು… ಒಂದು ದಿನ ಸಂಜೂ ಸರಿಯಾಗಿ ಡ್ರಗ್ಸ್ ಸೇವಿಸಿ ಕೋಣೆಗೆ ಹೋಗಿ ಮಲಗಿದ್ದರು. ನಂತರ ಮುಂಜಾನೆ ಎದ್ದ ಸಂಜಯ್ ಜೋರು ಹಸಿವಿನಿಂದ ಬೆಡ್​ನಲ್ಲಿ ಕುಳಿತೇ ಕೆಲಸದಾಳು ಏನಾದರೂ ತಿನ್ನಲು ಬೇಗ ತಗೊಂಡು ಬಾ ಎಂದು ಹೇಳಿದ್ದರು. ಈ ಮಾತನ್ನು ಕೇಳಿ ಆ ಕೆಲಸದಾಳು ಜೋರು ಅಳೋದಕ್ಕೆ ಆರಂಭಿಸಿದ್ದ. ಆಗ ಸಂಜಯ್ ತಬ್ಬಿಬ್ಬು. ಯಾಕಯ್ಯ ಅಳುತ್ತಿದ್ದಿಯಾ ಎಂದು ಕೇಳಿದಾಗ ಆ ಆಳು ಕೊಟ್ಟ ಉತ್ತರಕ್ಕೆ ಸಂಜಯ್ ಕೂಡಾ ಶಾಕ್ ಆಗಿದ್ದರು. ಯಾಕೆಂದರೆ, ಮಲಗಿದ್ದ ಸಂಜಯ್ ಎದ್ದಿದ್ದೇ ಎರಡು ದಿನಗಳ ನಂತರ… ಇದು ಸಂಜೂಗೆ ಗೊತ್ತಾಗಿದ್ದೇ ಈ ಕೆಲಸಗಾರನಿಂದ…! ಹೌದು, ಡ್ರಗ್ ಸೇವಿಸಿ ಮಲಗಿದ್ದ ಸಂಜಯ್ ಅನ್ನ ಆಹಾರ ಇಲ್ಲದೆ ನಶೆಯಲ್ಲಿ ಎರಡು ದಿನ ಮಲಗಿದ್ದರು. ಇದು ಇಡೀ ಕುಟುಂಬಕ್ಕೆ ಆತಂಕ ತಂದಿತ್ತು. ಹೀಗಾಗಿಯೇ, ಸಂಜಯ್ ಎದ್ದು ಕುಳಿತಾಗ ಕುಟುಂಬದವರಿಗೆ ಮಾತೇ ಬಾರದಾಗಿತ್ತು.

ಇನ್ನು, ಈ ಬಗ್ಗೆ ಮಾತು ಮುಂದುವರಿಸಿದ ಸಂಜಯ್, ನನಗೆ ನನ್ನ ಬದುಕನ್ನು ರಿವೈಂಡ್ ಮಾಡುವ ಮತ್ತು ಇದೇ ಬದುಕನ್ನು ಜೀವಿಸುವ ಅವಕಾಶ ಸಿಕ್ಕಿದರೆ ನನ್ನ ಎಲ್ಲಾ ತಪ್ಪುಗಳನ್ನು ಡಿಲೀಟ್ ಮಾಡಿ ತಪ್ಪೇ ಇಲ್ಲದ ರೀತಿ ಬದುಕುತ್ತೇನೆ ಎಂದಿದ್ದಾರೆ. ಇತ್ತ, ಸಂಜಯ್ ಬದುಕಿನ ಇದೇ ಘಟನೆಯ ಬಳಿಕ ಡ್ರಗ್ಸ್ ಚಟದ ಬಗ್ಗೆ ಸೂಕ್ತ ಚಿಕಿತ್ಸೆ ಕೊಡಿಸದಿದ್ದರೆ ಇವರು ಸತ್ತೇ ಹೋಗುತ್ತಾರೆ ಎಂಬ ಭಯ ಶುರುವಾಗಿದ್ದು ಮತ್ತು ಅಮೇರಿಕಾದಲ್ಲಿ ಚಿಕಿತ್ಸೆ ಕೊಡಿಸಿದ್ದು…
Video credit: SimiGarewalOfficial YouTube page

About sudina

Check Also

ಸೋನಾಲಿ ಬೇಂದ್ರೆಗೆ ಕ್ಯಾನ್ಸರ್… : ಇಲ್ಲಿದೆ ಸಲ್ಲು, ಶಾರೂಖ್, ದೀಪಿಕಾ… ಸೆಲೆಬ್ರಿಟಿಗಳ ಆರೋಗ್ಯದ ಸಮಸ್ಯೆಯ ಪಕ್ಷಿ ನೋಟ…

ಮುಂಬೈ : ಒಂದು ಕಾಲದಲ್ಲಿ ಯುವಕರ ನಿದ್ದೆ ಕದ್ದಿದ್ದ ಚೋರಿ ಸೋನಾಲಿ ಬೇಂದ್ರೆ ಈಗ ಮಾರಕ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ಸ್ವತಃ …

Leave a Reply

Your email address will not be published. Required fields are marked *

error: Content is protected !!