Friday , October 19 2018
ಕೇಳ್ರಪ್ಪೋ ಕೇಳಿ
Home / Film News / ಕೋಸ್ಟಲ್‍ವುಡ್ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ ಬಂಧನ

ಕೋಸ್ಟಲ್‍ವುಡ್ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ ಬಂಧನ

ಮಂಗಳೂರು : ಕೋಸ್ಟಲ್‍ವುಡ್ ಸುರೇಂದ್ರ ಬಂಟ್ವಾಳ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 11 ರಂದು ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಲಾಂಗ್ ಹಿಡಿದು ಗುಂಪಿನ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಸುರೇಂದ್ರ ಶೆಟ್ಟಿ ಮತ್ತು ಇನ್ನಿಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಸುರೇಂದ್ರ ಮತ್ತು ಸತೀಶ್ ಕುಲಾಲ್ ಮಂಗಳೂರಿನ ಪಚ್ಚಿನಡ್ಕದಲ್ಲಿ ಸಿಕ್ಕಿಬಿದ್ದಿದ್ದು, ಇನ್ನೋರ್ವ ಆರೋಪಿ ಪೃಥ್ವಿರಾಜ್ ಶೆಟ್ಟಿಗೆ ಕುಂಬ್ಳೆಯಲ್ಲಿ ಪೊಲೀಸರು ಕೋಳ ತೊಡಿಸಿದ್ದಾರೆ.

ಜೂನ್ 11 ರಂದು ನಡೆದಿದ್ದ ಈ ಹಲ್ಲೆ ವೀಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಈ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೀಪಕ್, ಪವನ್, ಶೈಲೇಶ್ ಮತ್ತು ರಂಜೀತ್ ಎಂಬುವವರನ್ನು ಬಂಧಿಸಲಾಗಿತ್ತು. ಇನ್ನು, ಇತರ ಆರೋಪಿಗಳಾದ ತಿಲಕ್, ಮನೋಹರ್ ಮತ್ತು ಪ್ರದೀಪ್ ತಲೆಮರೆಸಿಕೊಂಡಿದ್ದು, ಪೊಲೀಸ್ರು ಬಲೆ ಬೀಸಿದ್ದಾರೆ. ಇನ್ನು, ಬಂಧಿತ ಸುರೇಂದ್ರ ಶೆಟ್ಟಿ ತುಳುವಿನ `ಚಾಲಿ ಪೋಲಿಲು’ ಸೇರಿದಂತೆ ಇನ್ನಿತರ ಚಿತ್ರಗಳಲ್ಲಿ ನಟಿಸಿರುವುದಾಗಿ ತಿಳಿದು ಬಂದಿದೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!