Saturday , February 16 2019
ಕೇಳ್ರಪ್ಪೋ ಕೇಳಿ
Home / Sudina Special / ಸಾರ್… ಪ್ಲೀಸ್ ಹೋಗ್ಬೇಡಿ… : ಶಿಕ್ಷಕನ ವರ್ಗಾವಣೆಗೆ ಮಕ್ಕಳ ಕಣ್ಣೀರು, ಹೋಗದಂತೆ ತಡೆ…!

ಸಾರ್… ಪ್ಲೀಸ್ ಹೋಗ್ಬೇಡಿ… : ಶಿಕ್ಷಕನ ವರ್ಗಾವಣೆಗೆ ಮಕ್ಕಳ ಕಣ್ಣೀರು, ಹೋಗದಂತೆ ತಡೆ…!

ಚೆನ್ನೈ : ಇದೊಂದು ಭಾವನಾತ್ಮಕ ಸುದ್ದಿ.. ಆ ಶಿಕ್ಷಕ ಮಕ್ಕಳ ಪಾಲಿಗೆ ಮೆಚ್ಚಿನ ಸಾರ್… ಎಲ್ಲಾ ವಿದ್ಯಾರ್ಥಿಗಳಿಗೂ ಅವರೆಂದರೆ ಬಲು ಪ್ರೀತಿ, ಗೌರವ… ಆದರೆ, ಈಗ ಇದೇ ಮಕ್ಕಳ ಹೃದಯವೇ ಭಾರವಾಗಿದೆ. ಅಂತಹ ಸುದ್ದಿ ಅವರಿಗೆ ಬಂದಿದೆ. ಅದು ಈ ಶಿಕ್ಷಕನ ವರ್ಗಾವಣೆ. ಈ ಸುದ್ದಿ ಕೇಳಿದ ಆ ಪುಟ್ಟ ಮಕ್ಕಳ ಹೃದಯವೇ ಒಡೆದಂತಾಗಿತ್ತು. ಹೀಗಾಗಿ, ಅಳೋದಕ್ಕೆ ಆರಂಭಿಸಿದ್ದರು ಮಕ್ಕಳು… ‘ಸಾರ್ ಹೋಗ್ಬೇಡಿ’ ಅಂತ ಶರ್ಟ್ ಹಿಡಿದು ತಡೆದರು. ದಾರಿಗೆ ಅಡ್ಡವಾಗಿ ನಿಂತರು… ಈ ದೃಶ್ಯ ನೋಡುವಾಗಲೇ ಕಣ್ಣೀರು ಬರುವಂತಿದೆ…!

ಇಷ್ಟಕ್ಕೂ ಈ ಘಟನೆ ನಡೆದಿರೋದು ತಮಿಳುನಾಡಿನಲ್ಲಿ. ಇಲ್ಲಿನ ತಿರುವಲ್ಲುವರ್​ನ ವಲಿಯಗ್ರಾಮಮ್ ನ ಸರ್ಕಾರಿ ಶಾಲೆಯ ಇಂಗ್ಲೀಷ್ ಶಿಕ್ಷಕ ಜಿ ಭಗವಾನ್ ಈ ಶಾಲಾ ಮಕ್ಕಳ ಪಾಲಿನ ಹೀರೋ. ಮೆಚ್ಚಿನ ಮೇಷ್ಟ್ರು… ಆದ್ರೆ, ಈ ಭಗವಾನ್​ಗೆ ಅಲ್ಲೇ ಪಕ್ಕದ ತಿರುತನಿಯ ಅರುನ್​ಗುಲಮ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆಗಿತ್ತು. ವರ್ಗಾವಣೆ ಆದೇಶ ಬಂದ ಕೂಡಲೇ ಭಗವಾನ್ ಆ ಶಾಲೆಗೆ ಹೊರಟು ನಿಂತಿದ್ದರು. ಅವರಿಗೂ ದುಃಖ ಆಗಿತ್ತು. ಆದ್ರೆ, ಆದೇಶ ಪಾಲಿಸಲೇಬೇಕು. ಇತ್ತ, ಈ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಮಕ್ಕಳಂತೂ ಕಣ್ಣೀರೇ ಹಾಕಿದ್ರು… ಒಬ್ಬ ಹುಡುಗನಂತೂ ಸಾಯ್ತೀನಿ ಅಂತ ಬೆದರಿಕೆ ಕೂಡಾ ಹಾಕಿದ್ದ… ಕಾಲಿಗೆ ಅಡ್ಡಬಿದ್ದು ಹೋಗದಂತೆ ಕೇಳಿದ್ರು… ಈ ಸ್ಥಿತಿ ನೋಡಿ ಆ ಶಿಕ್ಷಕ ಭಗವಾನ್ ಕೂಡಾ ಅಕ್ಷರಶಃ ಮಗುವಿನಂತೆ ಕಣ್ಣೀರಿಟ್ಟಿದ್ದರು.

ಇಲ್ಲಿ ಬರೀ ವಿದ್ಯಾರ್ಥಿಗಳು ಮಾತ್ರ ಪ್ರತಿಭಟನೆ ಮಾಡಿಲ್ಲ. ಮಕ್ಕಳ ಪೋಷಕರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದರು. ಭಗವಾನ್​ರನ್ನು ಬಿಟ್ಟುಕೊಡಲು ನಾವು ತಯಾರಿಲ್ಲ ಎಂದು ಪೋಷಕರೂ ಹೇಳ್ತಿದ್ರು… ಅಲ್ಲದೆ, ಮಕ್ಕಳು ನಾವು ಶಾಲೆಯ ಒಳಗೆ ಹೋಗುವುದಿಲ್ಲ ಎಂದೂ ಪಟ್ಟು ಹಿಡಿದಿದ್ದರು… ಈ ಎಲ್ಲಾ ಬೆಳವಣಿಗೆ ಬಳಿಕ ಶಾಲೆಯ ಪ್ರಾಂಶುಪಾಲರು ಕೂಡಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಭಗವಾನ್​ರನ್ನು ಶಾಲೆಯಲ್ಲೇ ಉಳಿಸಿಕೊಳ್ಳುವಂತೆ ಮನವಿ ಕೂಡಾ ಮಾಡಿದ್ದಾರೆ.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!