Monday , July 23 2018
ಕೇಳ್ರಪ್ಪೋ ಕೇಳಿ
Home / News NOW / ಓಮ್ನಿ ಮೇಲೆ ಕಾಡಾನೆ ದಾಳಿ : ಕಾರು ಜಖಂ, ಓರ್ವ ಗಂಭೀರ

ಓಮ್ನಿ ಮೇಲೆ ಕಾಡಾನೆ ದಾಳಿ : ಕಾರು ಜಖಂ, ಓರ್ವ ಗಂಭೀರ

ಸುಳ್ಯ : ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಯೊಂದು ಪ್ರಯಾಣಿಕರಿದ್ದ ಓಮ್ನಿ ಕಾರಿನ ಮೇಲೆ ದಾಳಿ ಮಾಡಿದೆ. ಪರಿಣಾಮ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳೆನೆಲೆ ಬಳಿ ಈ ಘಟನೆ ನಡೆದಿದ್ದು, ಚಿಕ್ಕಮಗಳೂರಿನ ಗಿರೀಶ್ ಎಂಬವರು ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಆನೆ ಓಮ್ನಿ ಮೇಲೆ ದಾಳಿ ಮಾಡಿದೆ. ಇದರಲ್ಲಿದ್ದ ಆರು ಮಂದಿಗೆ ಸಣ್ಣಪುಟ್ಟು ಗಾಯವಾಗಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಬಿಳಿನೆಲ ಸಿ.ಪಿ.ಸಿ.ಆರ್.ಐ ಸಮೀಪ ಕಾಡಾನೆಯೊಂದು ರಸ್ತೆಯನ್ನು ಹಾದುಹೋಗುತ್ತಿದ್ದ ವೇಳೆ ಕಾರಿನ ಚಾಲಕ ಆನೆಯ ಸಮೀಪ ಕಾರನ್ನು ನಿಲ್ಲಿಸಿದ್ದ. ಈ ವೇಳೆ ಆನೆ ಹಠಾತ್ ದಾಳಿ ಮಾಡಿದೆ. ಇದೇ ವೇಳೆ ಬಸ್ ಜೋರಾಗಿ ಹಾರ್ನ್ ಮಾಡಿಕೊಂಡು ಬಂದ ಕಾರಣ ಆನೆ ಹೆದರಿ ಓಡಿಹೋಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!