Tuesday , April 23 2019
ಕೇಳ್ರಪ್ಪೋ ಕೇಳಿ
Home / Earth / RIP : ಮಾತನಾಡುತ್ತಿದ್ದ ಗೊರಿಲ್ಲಾ ಇನ್ನಿಲ್ಲ…! : ಕೋಕೋ ಇನ್ನು ನೆನಪು ಮಾತ್ರ…!

RIP : ಮಾತನಾಡುತ್ತಿದ್ದ ಗೊರಿಲ್ಲಾ ಇನ್ನಿಲ್ಲ…! : ಕೋಕೋ ಇನ್ನು ನೆನಪು ಮಾತ್ರ…!

ಕೋಕೋ… ಅವಳು ಬರೀ ಗೊರಿಲ್ಲಾ ಅಲ್ಲ… ಇಡೀ ಗೊರಿಲ್ಲಾ ಸಂತತಿಯ ಪಾಲಿಗೆ ಇದ್ದ ಒಬ್ಬಳೇ ಒಬ್ಬಳು ರಾಯಭಾರಿ…! ಯಾಕೆಂದರೆ, ಈ ಕೋಕೋ ಮನುಷ್ಯನೊಂದಿಗೆ ಸುಲಭವಾಗಿ ಸಂವಹನ ಮಾಡ್ತಿದ್ದಳು. ಬರೋಬ್ಬರಿ 2000 ಕ್ಕೂ ಅಧಿಕ ಪದಗಳನ್ನು ಇವಳು ಅರ್ಥ ಮಾಡಿಕೊಳ್ಳುತ್ತಿದ್ದಳು ಮತ್ತು ಸುಲಭವಾಗಿ ಈ ಪದಗಳನ್ನು ಜನರೊಂದಿಗೆ ಸನ್ನೆಯ ಮೂಲಕ ಮಾತನಾಡಲು ಬಳಸುತ್ತಿದ್ದಳು. ಜೊತೆಗೆ, ಮಕ್ಕಳೊಂದಿಗೆ ಇರುವಾಗ ನಗುವ ರೀತಿಯ ಸನ್ನೆಯನ್ನೂ ಇವಳು ಕಲಿತ್ತಿದ್ದಳು. ಜನರೊಂದಿಗೆ ಬೆರೆಯುವಾಗ ಕೋಕೊ ಪ್ರಪಂಚವೇ ಬೇರೆಯಾಗಿತ್ತು… ಅವಳೂ ಖುಷಿಯ ಅಲೆಯಲ್ಲೇ ತೇಲುತ್ತಿದ್ದಳು.

ಇಂತಹ ಮುದ್ದಿನ ಕೋಕೋ ಇನ್ನಿಲ್ಲ. ಇವಳಿಗೆ ಸುಮಾರು 46 ವರ್ಷ ವಯಸ್ಸಾಗಿತ್ತು. ಈಕೆಯ ಅಗಲಿಕೆಯ ಬಗ್ಗೆ ಗೊರಿಲ್ಲಾ ಫೌಂಡೇಷನ್ ಹೇಳಿಕೆ ಬಿಡುಗಡೆ ಮಾಡಿದೆ. ಅದೆಷ್ಟೋ ಹೃದಯಗಳಲ್ಲಿ ಸ್ಥಾನ ಪಡೆದಿದ್ದ ಕೋಕೋ ನಮ್ಮನ್ನು ಅಗಲಿದ್ದಾಳೆ ಎಂಬ ನೋವಿನ ಹೇಳಿಕೆಯನ್ನೇ ಗೊರಿಲ್ಲಾ ಫೌಂಡೇಷನ್ ರಿಲೀಸ್ ಮಾಡಿದೆ.


ಹಾಲಿವುಡ್​ನ ಖ್ಯಾತ ನಟ ರಾಬಿನ್ ವಿಲಿಯಮ್ಸ್ ಅಂದ್ರೆ ಕೋಕೋಗೆ ಬಹಳ ಇಷ್ಟ. ವಿಲಿಯಮ್ಸ್ ಗೂ ಕೋಕೋ ಕಂಡರೆ ಅಷ್ಟೇ ಪ್ರೀತಿ… ಕೋಕೋ ವಿಲಿಯಮ್ಸ್ ಜೊತೆ ತುಂಬಾ ಆತ್ಮೀಯವಾಗಿ ಬೆರೆಯುತ್ತಿದ್ದಳು. ಆಡುತ್ತಿದ್ದಳು, ಕಚಗುಳಿ ಇಡುತ್ತಿದ್ದಳು… 2014ರಲ್ಲಿ ಮಿಲಿಯಮ್ಸ್ ನಿಧನರಾದಾಗ ಕೋಕೋ ತುಂಬಾ ದುಃಖಿತಳಾಗಿದ್ದಳು. ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡೆ ಎಂದು ಸನ್ನಿ ಮೂಲಕವೇ ಹೇಳಿದ್ದಳು…

ಕೋಕೋ 1971ರ ಜುಲೈ 4 ರಂದು ಸ್ಯಾನ್​ಫ್ರಾನ್ಸಿಸ್ಕೋದ ಝೂನಲ್ಲಿ ಜನಿಸಿದ್ದಳು. ತನ್ನ ಜೀವಿತಾವಧಿಯ ಬಹುತೇಕ ಸಮಯವನ್ನು ಕೋಕೋ ಕ್ಯಾಲಿಫೋರ್ನಿಯಾದ ಗೊರಿಲ್ಲಾ ಫೌಂಡೇಷನ್​ನಲ್ಲಿ ಕಳೆದಿದ್ದಳು.. ಇಂತಹ ಕೋಕೋವನ್ನು ನೆನೆದಾಗಲೇ ದುಃಖವಾಗುತ್ತದೆ…

About sudina

Check Also

ಮಾವುತ ಬಾರದ ನೋವು… ನೋವಲ್ಲೇ ಪ್ರಾಣ ತ್ಯಜಿಸಿದ ಆನೆ ಮರಿ…!

ಶಿವಮೊಗ್ಗ : ಇದು ಮೂಕ ಜೀವವೊಂದರ ಮನಕಲಕುವ ಸುದ್ದಿ… ನೋವಲ್ಲಿ ಪ್ರಾಣ ತ್ಯಜಿಸಿದ ಅಮಾಯಕ ಮರಿಯ ನೋವು…! ಇದು ನಡೆದದ್ದು …

Leave a Reply

Your email address will not be published. Required fields are marked *

error: Content is protected !!