Tuesday , November 13 2018
ಕೇಳ್ರಪ್ಪೋ ಕೇಳಿ
Home / Sudina Special / ಬೆಳುವಾಯಿಯ ಕೀರ್ತಿ ಪತಾಕೆ ಹಾರಿಸಿದ ಸಮ್ಮಿಲನ್ ಶೆಟ್ಟಿ : ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ `ಚಿಟ್ಟೆ ಪಾರ್ಕ್’

ಬೆಳುವಾಯಿಯ ಕೀರ್ತಿ ಪತಾಕೆ ಹಾರಿಸಿದ ಸಮ್ಮಿಲನ್ ಶೆಟ್ಟಿ : ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ `ಚಿಟ್ಟೆ ಪಾರ್ಕ್’

ಮಂಗಳೂರು : ದಕ್ಷಿಣ ಕನ್ನಡದ ಮೂಡಬಿದಿರೆ ಸಮೀಪದ ಬೆಳುವಾಯಿ ಹೆಸರು ಈಗ ವಿಶ್ವಮಟ್ಟದಲ್ಲಿ ಅನುರಣಿಸಿದೆ. ಯುವ ಸಾಹಸಿ ಸಮ್ಮಿಲನ್ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಬೆಳುವಾಯಿ ಹೆಸರು ಬೆಳಗುತ್ತಿದೆ. ಇದಕ್ಕೆ ಕಾರಣ ಬೆಳುವಾಯಿಯಲ್ಲಿರುವ `ಸಮ್ಮಿಲನ್ ಶೆಟ್ಟೀಸ್ ಬಟರ್ ಫ್ಲೈ ಪಾರ್ಕ್’. ಈ ಪಾರ್ಕ್ ಈಗ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ  ಸ್ಥಾನ ಪಡೆದಿದೆ.

ಪರಿಸರ ಸಂರಕ್ಷಣೆ ಮತ್ತು ಪರಿಸರ ಕಾಳಜಿಯ ಕಾರಣಕ್ಕೆ ಚಿಟ್ಟೆ ಪಾರ್ಕ್ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಸುಮಾರು 7 ಎಕರೆ ವಿಸ್ತೀರ್ಣ ಚಾಚಿರುವ ಹಸಿರ ತಾಣದಲ್ಲಿ ಈ ಸುಂದರ ಚಿಟ್ಟೆಗಳ ಲೋಕ ಇದೆ. 2013ರ ಆಗಸ್ಟ್ ನಲ್ಲಿ ಈ ಪಾರ್ಕ್ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಇಲ್ಲಿ ಹಲವು ಪ್ರಬೇಧದ ಚಿಟ್ಟೆಗಳನ್ನು ಕಾಣಬಹುದಾಗಿದೆ. ಜೊತೆಗೆ, ಈ ಪಾರ್ಕ್ ಮೂಲಕ ಹಲವರು ಪರಿಸರ ಸಂರಕ್ಷಣೆಯ ಪಾಠವನ್ನೂ ಕಲಿತಿದ್ದಾರೆ. ತಮ್ಮ ಈ ಪರಿಸರ ಪ್ರೇಮದ ಕಾರಣಕ್ಕೇ ಸಮ್ಮಿಲನ್ ರಾಷ್ಟ್ರೀಯ ಮಾಧ್ಯಮಗಳಲ್ಲೂ ಬೆಳುವಾಯಿಯ ಹೆಸರು ಪ್ರಜ್ವಲಿಸುವಂತೆ ಮಾಡಿದ್ದರು. ಇಂತಹ ಸಮ್ಮಿಲನ್ ಪ್ರಯತ್ನಕ್ಕೆ ಈಗ ಮತ್ತೊಂದು ಗರಿ ಸಂದಿದ್ದು, ಸಮ್ಮಿಲನ್ ಅವರ ಸಾಧನೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ…

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!