Tuesday , November 13 2018
ಕೇಳ್ರಪ್ಪೋ ಕೇಳಿ
Home / Sudina Special / 6 ಲಕ್ಷ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ ಸಾಧಕಿ : ಏರ್ ಫೋರ್ಸ್ ಟೀಂ ಸೇರಿದ ಟೀ ವ್ಯಾಪಾರಿಯ ಮಗಳು

6 ಲಕ್ಷ ವಿದ್ಯಾರ್ಥಿಗಳನ್ನು ಹಿಂದಿಕ್ಕಿದ ಸಾಧಕಿ : ಏರ್ ಫೋರ್ಸ್ ಟೀಂ ಸೇರಿದ ಟೀ ವ್ಯಾಪಾರಿಯ ಮಗಳು

ಸಾಧಿಸುವ ಛಲವೊಂದಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಯುವತಿ ಸಾಕ್ಷಿ… ಮನೆಯಲ್ಲಿ ಬಡತನ ಇತ್ತು. ತಂದೆಯ ಟೀ ವ್ಯಾಪಾರದಿಂದಲೇ ಬದುಕು ಸಾಗಬೇಕಿತ್ತು. ಆದರೂ ಆ ಹುಡುಗಿ ಸಾಧನೆಯ ಕನಸು ಕಂಡಿದ್ದರು. ಸತತ ಪ್ರಯತ್ನ ಮಾಡಿದರು. ಶೃದ್ಧೆಯಿಂದ ಓದಿದರು. ಇದೇ ಶೃದ್ಧೆ ಈಗ ಆಕೆಯನ್ನು ಗುರಿ ಮುಟ್ಟಿಸಿದೆ. ಆರು ಲಕ್ಷ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಸಾಧನೆಗೆ ಮುತ್ತಿಕ್ಕುವ ಸಂತಸ ತಂದಿದೆ…!

ಇವರೇ ಈ ಸ್ಟೋರಿಯ ನಾಯಕಿ. ಹೆಸರು ಅಂಚಲ್ ಗ್ಯಾಂಗ್‍ವಾಲ್. ಇಡೀ ಮಧ್ಯಪ್ರದೇಶ ಇವರನ್ನು ಈಗ ಕೊಂಡಾಡುತ್ತಿದೆ. ಕಾರಣ ಅಂಚಲ್ ಸಾಧನೆ. 24 ವರ್ಷದ ಈ ಯುವತಿ ಈಗ ಭಾರತೀಯ ವಾಯುಸೇನೆ ಸೇರಿದ್ದಾರೆ. ಏರ್‍ಫೋರ್ಸ್‍ನ ಫ್ಲೈಯಿಂಗ್ ಬ್ರ್ಯಾಂಚ್ ಸೇರಿರುವ ಅಂಚಲ್ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ರಾಜ್ಯದಲ್ಲಿ ಸುಮಾರು 6 ಲಕ್ಷದಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಆದರೆ, ಅದರಲ್ಲಿ ಅಂಚಲ್ ಸಾಧನೆ ಮಾಡಿ ದೇಶ ಸೇವೆಗೆ ಹೊರಟ್ಟಿದ್ದಾರೆ. ಫೈಟರ್ ಪೈಲಟ್ ಆಗಿ ಅಂಚಲ್ ಆಯ್ಕೆಯಾಗಿದ್ದಾರೆ.


`ವಾಯುಸೇನೆಗೆ ಸೇರುವುದು ನನ್ನ ಕನಸಾಗಿತ್ತು. ನಾನು 12 ತರಗತಿ ಇರುವಾಗ ಉತ್ತರಾಖಂಡ್‍ಗೆ ಪ್ರವಾಹ ಬಂದಿತ್ತು. ಈ ವೇಳೆ, ಪ್ರವಾಹ ಪ್ರದೇಶಗಳ ಪರಿಹಾರ ಕಾರ್ಯಕ್ಕೆ ಬಂದ ಸೈನಿಕರು ಜನರನ್ನು ರಕ್ಷಣೆ ಮಾಡುವುದನ್ನು ಕಣ್ಣಾರೆ ಕಂಡಿದೆ. ಆಗಲೇ ನಾನು ಸೈನ್ಯಕ್ಕೆ ಸೇರಬೇಕೆಂಬ ನಿರ್ಧಾರ ಮಾಡಿದ್ದೆ. ಆದರೆ, ಮನೆಯ ಬಡತನ ನನಗೆ ನನ್ನ ಕನಸು ಪೂರೈಸಲು ಅಡ್ಡಿಯಾಗಿತ್ತು. ಹೀಗಾಗಿ, ಆಗ ನನಗೆ ಸೈನ್ಯ ಸೇರುವ ಪ್ರಯತ್ನ ಮಾಡಲು ಸಾಧ್ಯವಾಗಿರಲಿಲ್ಲ’ ಎಂದು ಅಂಚಲ್ ಹೇಳಿದ್ದಾರೆ.

ಬಡತನ ಇದ್ದರೂ ಅಂಚಲ್ ಓದಿನಲ್ಲಿ ಮುಂದಿದ್ದರು. ಕ್ಲಾಸ್‍ಗೇ ಪ್ರಥಮ ಬರುತ್ತಿದ್ದರು. ಹೀಗೆ ಹಲವು ಕೆಲಸಕ್ಕೂ ಪ್ರಯತ್ನಿಸಿದ್ದರು. ಛಾನ್ಸ್ ಕೂಡಾ ಸಿಕ್ಕಿತ್ತು. ಆದರೂ ಸೇನೆಗೆ ಸೇರಬೇಕೆಂಬ ಆಸೆ ಕಡಿಮೆಯಾಗಿರಲಿಲ್ಲ. ಹೀಗಾಗಿ, ವಾಯುಸೇನೆಗೆ ಸೇರುವ ತಯಾರಿ ನಡೆಸಿದ್ದರು. ಐದು ಬಾರಿ ಪರೀಕ್ಷೆ ಕೂಡಾ ಬರೆದಿದ್ದರು. ಆದರೂ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಇವರು ಪ್ರಯತ್ನ ಬಿಡಲಿಲ್ಲ. ಮತ್ತೊಮ್ಮೆ ಪರೀಕ್ಷೆ ಬರೆದರು. ಈ ಪರೀಕ್ಷೆಯಲ್ಲಿ ಇವರ ಭಾಗ್ಯದ ಬಾಗಿಲು ತೆರೆದಿತ್ತು. ಆರನೇ ಪ್ರಯತ್ನದಲ್ಲಿ ಅಂಚಲ್ ತನ್ನ ಗುರಿ ಮುಟ್ಟಿದರು. ದೇಶದಲ್ಲಿ ಆಯ್ಕೆಯಾದ ಒಟ್ಟು 22 ಜನರಲ್ಲಿ ಈ ಅಂಚಲ್ ಕೂಡಾ ಒಬ್ಬರು. ಅಂಚಲ್ ಸಾಧನೆಯನ್ನು ಈಗ ಇಡೀ ದೇಶ ಕೊಂಡಾಡುತ್ತಿದೆ. ಜೊತೆಗೆ, ಇವರ ಸಾಧನೆ ಎಲ್ಲರಿಗೂ ಮಾದರಿ ಕೂಡಾ ಆಗಿದೆ.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!