Sunday , July 22 2018
ಕೇಳ್ರಪ್ಪೋ ಕೇಳಿ
Home / Film News / ತಣ್ಣಗಾಗದ `ಬಾಸ್’ ವಿವಾದ…

ತಣ್ಣಗಾಗದ `ಬಾಸ್’ ವಿವಾದ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ `ಬಾಸ್’ ಯಾರು…? ಹೀಗೊಂದು ಪ್ರಶ್ನೆಗೆ ಒಬ್ಬೊಬ್ಬ ನಟರ ಅಭಿಮಾನಿಗಳದ್ದೂ ಒಂದೊಂದು ಉತ್ತರ… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಭಿಮಾನಿಗಳು `ಬಾಸ್’ ಅಂತ ಕರೆಯುತ್ತಿದ್ದರು. ಇದರ ನಡುವೆ, ಕನ್ನಡದ ಬೇರೆ ಬೇರೆ ನಟರನ್ನೂ ಇದೇ ರೀತಿ ಕರೆಯಲು ಆರಂಭಿಸಿದ್ದು ದರ್ಶನ್ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಇದಕ್ಕೆ ಸರಿಯಾಗಿ ಇತ್ತೀಚೆಗೆ ಯಶ್ ಅವರು ಕೂಡಾ `ಬಾಸ್’ ಎಂದು ಸೂಚಿಸುವ ರೀತಿಯ ನಂಬರ್ ಇರುವ ಕಾರನ್ನು ಖರೀದಿಸಿ ಸುದ್ದಿಯಾಗಿದ್ದರು. ಹೀಗೆ, ಕಳೆದ ಒಂದಷ್ಟು ದಿನಗಳಿಂದ ಸ್ಯಾಂಡಲ್‍ವುಡ್‍ನಲ್ಲಿ ಇಂತಹದೊಂದು ಚರ್ಚೆ ನಡೆಯುತ್ತಲೇ ಇದೆ.

ಇನ್ನು, ಮೊನ್ನೆಯಷ್ಟೇ ದರ್ಶನ್ ಅವರು ಕೂಡಾ ಬಾಸ್ ಎಂಬ ನಂಬರ್ ಇರುವ ಬೈಕ್ ಓಡಿಸಿದ್ದರು. ಇದರ ನಡುವೆ, ದರ್ಶನ್ ಅಭಿಮಾನಿಗಳು ಅವರ ಮನೆ ಮುಂದೆಯ ರಸ್ತೆಯಲ್ಲಿ ಹೂವಿನಿಂದ `ಸ್ಯಾಂಡಲ್‍ವುಡ್ ಬಾಸ್’ ಎಂದು ಬರೆದು ತಮ್ಮ ಅಭಿಮಾನ, ಪ್ರೀತಿ ತೋರಿಸಿದ್ದಾರೆ. ಜೊತೆಗೆ, ಈ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೂ ಹಾಕಿದ್ದಾರೆ. ಹೀಗಾಗಿ, ಕನ್ನಡ ಸಿನಿಲೋಕದಲ್ಲಿ ಈ `ಬಾಸ್’ ವಿಚಾರ ಮತ್ತೆ ಮತ್ತೆ ಪ್ರತಿಧ್ವನಿಸುತ್ತಲೇ ಇದೆ…

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!