Saturday , September 22 2018
ಕೇಳ್ರಪ್ಪೋ ಕೇಳಿ
Home / News NOW / ಅಬುದಾಭಿಯಲ್ಲಿ 8,000 ವರ್ಷ ಹಿಂದಿನ ಗ್ರಾಮ ಪತ್ತೆ…!

ಅಬುದಾಭಿಯಲ್ಲಿ 8,000 ವರ್ಷ ಹಿಂದಿನ ಗ್ರಾಮ ಪತ್ತೆ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರಗಳ ಇತಿಹಾಸ ಅಧ್ಯಯನಕ್ಕೆ ಈಗ ಮತ್ತೊಂದು ಪ್ರಮುಖ ಆಕರ ಸಿಕ್ಕಿದೆ. ಅಬುದಾಭಿಯಲ್ಲಿ 8000 ವರ್ಷದಷ್ಟು ಹಳೆಯ ಗ್ರಾಮವೊಂದು ಪತ್ತೆಯಾಗಿದೆ…! ಮರಾಹ್ ದ್ವೀಪದಲ್ಲಿ ಅಬು ದುಬೈ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ನಡೆಸಿದ ಉತ್ಖನನ ಕಾರ್ಯದ ವೇಳೆ ಪುರಾತನ ಗ್ರಾಮದ ಕುರುಹುಗಳು ಪತ್ತೆಯಾಗಿವೆ. ಈ ಗ್ರಾಮ ಯಾವ ಕಾಲಮಾನಕ್ಕೆ ಸೇರಿದ್ದು ಎಂಬ ವಿಚಾರ ಮಾಡಿದ್ದಾಗ ಇದು 8000 ವರ್ಷಗಳ ಹಿಂದಿನ ‘ನವಶಿಲಾಯುಗ’ ಕಾಲದ ಗ್ರಾಮ ಇದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ಒಂದಷ್ಟು ಮನೆಗಳು ಪತ್ತೆಯಾಗಿದ್ದು, ಇವೆಲ್ಲವನ್ನು ನೂರಾರು ವರ್ಷಗಳ ಕಾಲ ಬಳಸಲಾಗಿತ್ತು ಎಂದು ಅಂದಾಜಿಸಲಾಗಿದೆ. ಈ ಮನೆಗಳ ವಿನ್ಯಾಸವೂ ವಿಭಿನ್ನವಾಗಿದೆ. ಮನೆಯಲ್ಲಿ ಹಲವಾರು ಕೋಣೆಗಳಿದ್ದು, ಮನೆಯ ಹೊರಗೆ ಪ್ರಾಣಿಗಳನ್ನು ಕಟ್ಟಿ ಹಾಕಲು ಮತ್ತು ಅಡುಗೆ ಮಾಡಲು ವಿಸ್ತಾರವಾದ ಜಾಗವನ್ನೂ ಬಿಡಲಾಗಿತ್ತು. ಈ ಗ್ರಾಮದಲ್ಲಿ ಸುಮಾರು 10 ಮನೆಗಳು ಇತ್ತು ಎಂದು ಅಂದಾಜಿಸಲಾಗಿದೆ. ಜೊತೆಗೆ, ಇವುಗಳ ನಿರ್ಮಾಣದ ವಿಚಾರದಲ್ಲೂ ಸಾಮ್ಯತೆ ಇದೆ. ಹೀಗಾಗಿ, ಅಂದಿನ ಸ್ಥಿತಿಗತಿಯನ್ನು ಅರಿಯಲು ಈ ಗ್ರಾಮವನ್ನು ತಂತ್ರಜ್ಞಾನದಲ್ಲಿ ಮರುಸೃಷ್ಟಿ (ಡಿಜಿಟಲೀ ರೀಕ್ರಿಯೇಟ್)ಮಾಡಲು ತಜ್ಞರು ನಿರ್ಧರಿಸಿದ್ದಾರೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!