Friday , September 21 2018
ಕೇಳ್ರಪ್ಪೋ ಕೇಳಿ
Home / Sudina Special / 96 ರ ಅಜ್ಜಿಯ ಓದುವ ಆಸೆ… : ನೂರು ವರ್ಷ ಆಗುವುದರೊಳಗೆ 10ನೇ ಕ್ಲಾಸ್ ಪೂರೈಸುವ ಹೆಬ್ಬಯಕೆ…!

96 ರ ಅಜ್ಜಿಯ ಓದುವ ಆಸೆ… : ನೂರು ವರ್ಷ ಆಗುವುದರೊಳಗೆ 10ನೇ ಕ್ಲಾಸ್ ಪೂರೈಸುವ ಹೆಬ್ಬಯಕೆ…!

ಅಳಪುಳಾ (ಕೇರಳ) : ದೇವರನಾಡು ಕೇರಳದಲ್ಲಿ ಈಗ ಅಜ್ಜಿಯೊಬ್ಬರು ಗಮನ ಸೆಳೆದಿದ್ದಾರೆ. ತಮ್ಮ ಓದುವ ಬಯಕೆಯಿಂದಲೇ ಇವರು ಸುದ್ದಿಯಾಗಿದ್ದಾರೆ…! ಇವರ ಹೆಸರು ಕಾತ್ಯಾಯಿನಿ. ವಯಸ್ಸು ಬರೋಬ್ಬರಿ 96. ಆದ್ರೆ, ಚಿಕ್ಕಂದಿನಲ್ಲಿ ಇವರಿಗೆ ಓದುವ ಆಸೆ ಇದ್ದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಈ ಅಜ್ಜಿ ಈಗ ಶಿಕ್ಷಣ ಕಲಿಯುತ್ತಿದ್ದಾರೆ…!

ರಾಜ್ಯ ಸಾಕ್ಷರತಾ ಮಿಷನ್​ನ ಬೋಧಕರಾದ ಕೆ.ಸತಿ ಅವರ ಮುಂದೆ ಕಾತ್ಯಾಯಿನಿ ಅಮ್ಮ ತಮ್ಮ ಬಯಕೆಯನ್ನು ಬಿಚ್ಚಿಟ್ಟಾಗಿ ಅವರೂ ಒಮ್ಮೆ ಅಚ್ಚರಿಗೊಳಗಾಗಿದ್ದರು. ಕಾತ್ಯಾಯಿನಿ ಅಮ್ಮನ ಈ ದೃಢ ನಿರ್ಧಾರ ಕಂಡ ಸತಿ ಅವ್ರು ಇವರನ್ನು ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸೇರಿಸಿದರು. ಈಗ ಈ ಅಜ್ಜಿ ಪೆನ್ನು, ಪೆನ್ಸಿಲ್ ಹಿಡಿದು ಮಲಯಾಲಂ ಬರೆಯಲು ಕಲಿಯುತ್ತಿದ್ದಾರೆ. ರಾಜ್ಯ ಸಾಕ್ಷರತಾ ಮಿಷನ್​ನಡಿ ದಾಖಲಾದ ಅತೀ ಹಿರಿಯ ವಿದ್ಯಾರ್ಥಿ ಎಂದು ಈಗ ಕಾತ್ಯಾಯಿನಿ ಅಮ್ಮ ಗುರುತಿಸಿಕೊಂಡಿದ್ದಾರೆ.

‘ಸತಿ ಟೀಚರ್ ಬೆಳಗ್ಗೆ ಮತ್ತು ಸಂಜೆ ನನಗೆ ಪಾಠ ಕಲಿಸಲು ಬರುತ್ತಾರೆ. ಮಕ್ಕಳು ಕೆಳಗೆ ಕುಳಿತು ಪಾಠ ಕೇಳುವಾಗ ನಾನು ಕೂಡಾ ಅವರೊಂದಿಗೆ ಸೇರಿಕೊಳ್ಳುತ್ತೇನೆ. ನನ್ನ ತಂದೆ ಹಿಂದೆ ಬೋಧಕರಾಗಿದ್ದರು. ನಾನು ಚಿಕ್ಕದಿರುವಾಗ ಅವರು ನನಗೆ ಪಾಠ ಹೇಳಿಕೊಡುತ್ತಿದ್ದರು. ಆದರೆ, ಆಗಿನ ಸಂದರ್ಭವೇ ಬೇರೆ ಇತ್ತು. ಹೀಗಾಗಿ, ಈ ಮನೆಪಾಠ ಜಾಸ್ತಿ ದೂರ ಸಾಗಲಿಲ್ಲ.’ ಎಂದು ಕಾತ್ಯಾಯಿನಿ ಅಮ್ಮ ಹೇಳ್ತಾರೆ.

ಇನ್ನು, ಇವರು ಪರೀಕ್ಷೆ ಬರೆಯುವುದಕ್ಕೂ ಉತ್ಸುಕರಾಗಿದ್ದರು. ಈ ಬಗ್ಗೆ ಸಿದ್ಧತೆ ನಡೆಸುತ್ತಿದ್ದಾರೆ. ಜುಲೈ 22ಕ್ಕೆ ಕಾತ್ಯಾಯಿನಿ ಅಮ್ಮ ಪರೀಕ್ಷೆ ಬರೆಯಲಿದ್ದಾರೆ. ‘ಈ ಪರೀಕ್ಷೆಯಲ್ಲಿ ನಾನು ಪಾಸ್ ಆದರೆ ನನ್ನನ್ನು ಮುಂದಿನ ಬಾರಿ ನಾಲ್ಕನೇ ತರಗತಿಗೆ ಹಾಕುತ್ತಾರೆ. ನಾಲ್ಕನೇ ತರಗತಿ ಬಳಿಕ ಏಳನೇ ಕ್ಲಾಸ್​ಗೆ ಹೋಗುವ ಪರೀಕ್ಷೆ ನಡೆಯುತ್ತಿದೆ. ಹೀಗೆ, ನನಗೆ 100 ವರ್ಷ ಆದಾಗ ನಾನು 10ನೇ ಕ್ಲಾಸ್ ಪರೀಕ್ಷೆ ಬರೆಯಬೇಕು’ ಎನ್ನುವುದು ಈ ಅಮ್ಮನ ದೃಢ ವಿಶ್ವಾಸ.

ಕಾತ್ಯಾಯಿನಿ ಅಮ್ಮನಿಗೆ ಇತ್ತೀಚೆಗಷ್ಟೇ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಆದರೂ ಅವರು ಓದಲು, ಬರೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು, ಇವರ ಆರೋಗ್ಯದ ಬಗ್ಗೆ ಮಗಳು ಅಮಿನಿ ಕಾಳಜಿ ವಹಿಸಿದ್ದಾರೆ. ಅದೂ ಅಲ್ಲದೆ, ಈ ಅಮಿನಿ ಕಳೆದ ವರ್ಷ ಎಸ್​ಎಸ್​ಎಲ್​ಸಿ ಸಮಾನವಾದ ಪರೀಕ್ಷೆ ಬರೆದು ಪಾಸ್ ಆಗಿದ್ದರು. ಇದರಿಂದ ಕಾತ್ಯಾಯಿನಿ ಅಮ್ಮ ಕೂಡಾ ಸ್ಫೂರ್ತಿ ಪಡೆದಿದ್ದರು. ‘ಅವರ ಬದುಕಿನುದ್ದಕ್ಕೂ ನಮಗೋಸ್ಕರ ಅಮ್ಮ ಕಷ್ಟಪಟ್ಟಿದ್ದರು. ಈಗ ಶಿಕ್ಷಣದ ವಿಚಾರದಲ್ಲಿ ಅವರು ಪಡುವ ಸಂತೋಷವನ್ನು ನೋಡಿದಾಗ ನಮಗೆ ಹೃದಯ ತುಂಬಿ ಬರುತ್ತಿದೆ’ ಎನ್ನುವುದು ಮಗಳ ಮಾತು.

photo courtesy : internet

About sudina

Check Also

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ …

Leave a Reply

Your email address will not be published. Required fields are marked *

error: Content is protected !!