Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / ಯುಎಇ, ಒಮಾನ್‍ನಲ್ಲಿ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ರಿಲೀಸ್‍ಗೆ ಕ್ಷಣಗಣನೆ

ಯುಎಇ, ಒಮಾನ್‍ನಲ್ಲಿ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ರಿಲೀಸ್‍ಗೆ ಕ್ಷಣಗಣನೆ

ದುಬೈ : ಹಿರಿಯ ನಟ ಅನಂತ್‍ನಾಗ್ ಮತ್ತು ರಾಧಿಕಾ ಚೇತನ್ ಅಭಿನಯದ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಈಗ ಸಂಯುಕ್ತ ಅರಬ್ ರಾಷ್ಟ್ರ ಮತ್ತು ಒಮಾನ್‍ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಜೂನ್ 28ಕ್ಕೆ ಈ ಚಿತ್ರ ಯುಎಇ ಮತ್ತು ಒಮಾನ್‍ನಲ್ಲಿ ರಿಲೀಸ್ ಆಗಲಿದೆ. ದುಬೈಯ ಶಾರ್ಜಾ ನೋವಾ ಸಿನೆಮಾ, ವಾಕ್ಸ್ ಸಿನೆಮಾ, ಅಬುಧಾಬಿಯ ಸ್ಟಾರ್ ಸಿನೆಮಾ, ಆಸ್ಕರ್ ಸಿನೆಮಾ ಹಾಗೂ ಒಮಾನಿನ ಸ್ಟಾರ್ ಸಿನೆಮಾದಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ.

ಕನಕದಾಸರ ರಚನೆಯ ಹಾಡಿನ ಸಾಲೇ ಟೈಟಲ್ ಆಗಿರುವ ಈ ಚಿತ್ರವನ್ನು ಕಲರ್ಸ್ ಆಫ್ ಆನೇಕಲ್ ಸುದರ್ಶನ್ ಜಿ, ರಾಮಮೂರ್ತಿ ಎಚ್.ಆರ್ ಹಾಗೂ ಅಕ್ಮೆ ಮೂವೀಸ್ ಬ್ಯಾನರ್‍ನಡಿ ಹರೀಶ್ ಶೇರಿಗಾರ್ ನಿರ್ಮಾಣ ಮಾಡಿದ್ದಾರೆ. ದುಬೈನಲ್ಲೂ ಈ ಚಿತ್ರದ ಶೂಟಿಂಗ್ ನಡೆದಿತ್ತು. ನರೇಂದ್ರ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!