Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಕಾನೂನು ಹೋರಾಟದಲ್ಲಿ ಕಾಜಲ್‍ಗೆ ಹಿನ್ನಡೆ…

ಕಾನೂನು ಹೋರಾಟದಲ್ಲಿ ಕಾಜಲ್‍ಗೆ ಹಿನ್ನಡೆ…

ಚೆನ್ನೈ : ನಟಿ ಕಾಜಲ್ ಅಗರ್‍ವಾಲ್ ತನ್ನ ಕಾನೂನು ಹೋರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಜಾಹೀರಾತಿನ ರಾಯಲ್ಟಿ ವಿಚಾರದಲ್ಲಿ ಕಾಜಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಕಾಜಲ್ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿದೆ. ಜೊತೆಗೆ, ಕಾಜಲ್ ಅವರ ಅರ್ಜಿಯನ್ನು ವಜಾ ಮಾಡಿದೆ. ಜಸ್ಟೀಸ್ ಎಂಎಂ ಸುಂದ್ರೇಶ್ ಮತ್ತು ಜಸ್ಟೀಸ್ ಆನಂದ್ ವೆಂಕಟೇಶ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ತೆಂಗಿನ ಎಣ್ಣೆ ಕಂಪನಿಯೊಂದು ಒಪ್ಪಂದ ಮುಗಿದರೂ ತಾನಿರುವ ಜಾಹೀರಾತನ್ನು ಬಳಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಯಲ್ಟಿಯನ್ನು ನೀಡಬೇಕೆಂದು ಕಾಜಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಕಾಜಲ್ ಮನವಿಯನ್ನು ತಿರಸ್ಕರಿಸಿದೆ. ಕಾಪಿ ರೈಟ್ ಕಾಯ್ದೆಯ ಸೆಕ್ಷನ್ 26ರ ಪ್ರಕಾರ, ಯಾವುದೇ ಕಾಪಿ ರೈಟ್ ನ ಅವಧಿ 60 ವರ್ಷದ ತನಕ ಇರುತ್ತದೆ. ಹೀಗಾಗಿ, ಒಂದು ವರ್ಷದ ಒಪ್ಪಂದ ಮುಗಿದ ಮಾತ್ರಕ್ಕೆ ಜಾಹೀರಾತನ್ನು ಬಳಸುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!