Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಒಂದೇ ಚಿತ್ರದಲ್ಲಿ ರಾಮ್​ ಚರಣ್ ಮತ್ತು ಜ್ಯೂನಿಯರ್ ಎನ್​ಟಿಆರ್

ಒಂದೇ ಚಿತ್ರದಲ್ಲಿ ರಾಮ್​ ಚರಣ್ ಮತ್ತು ಜ್ಯೂನಿಯರ್ ಎನ್​ಟಿಆರ್

ಹೈದರಾಬಾದ್ : ಟಾಲಿವುಡ್ ಜಕ್ಕಣ್ಣ ರಾಜಮೌಳಿ ಅವರ ಮಲ್ಟಿ ಸ್ಟಾರರ್ ಸಿನೆಮಾ ಈಗ ಬಹಳ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್​ಟಿಆರ್ ನಟಿಸುತ್ತಿದ್ದಾರೆ. ಈ ಸುದ್ದಿಯೇ ಎಲ್ಲರ ಕಿವಿ ನೆಟ್ಟಗಾಗುವಂತೆ ಮಾಡಿದ್ದು, ಚಿತ್ರದ ಬಗ್ಗೆ ಕುತೂಹಲವೂ ಹೆಚ್ಚಿದೆ. ಸೂಪರ್ ಡೂಪರ್ ಹಿಟ್ ಬಾಹುಬಲಿ ಬಳಿಕ ರಾಜಮೌಳಿ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದರಿಂದ ಸಹಜವಾಗಿಯೇ ದೇಶಾದ್ಯಂತ ಕುತೂಹಲ ಇಮ್ಮಡಿಯಾಗಿಸಿದೆ.

ನವೆಂಬರ್ ನಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆಯಂತೆ. ಡಿಸೆಂಬರ್​ನಲ್ಲಿ ರಾಜಮೌಳಿ ರಾಮ್​ಚರಣ್ ಮತ್ತು ಎನ್​ಟಿಆರ್ ಅವರ ಹೈವೋಲ್ಟೇಜ್ ಫೈಟ್ ಸೀನ್ ಅನ್ನು ಶೂಟ್ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯದ ಮಾಹಿತಿ ಪ್ರಕಾರ ಎನ್​ಟಿಆರ್ ಗ್ಯಾಂಗ್​ಸ್ಟಾರ್ ಪಾತ್ರ ನಿರ್ವಹಿಸಿದ್ರೆ, ರಾಮ್ ಚರಣ್ ಪೊಲೀಸ್ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪೂಜಾ ಹೆಗ್ಡೆ, ಕೈರಾ ಅಡ್ವಾನಿ ಮತ್ತು ಕೀರ್ತಿ ಸುರೇಶ್ ಈ ಚಿತ್ರದ ಲೀಡ್ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!