ಹೈದರಾಬಾದ್ : ಟ್ರಾಫಿಕ್ ಸಿಗ್ನಲ್ ನಲ್ಲಿ ಕೆಂಪು ಮತ್ತು ಹಸಿರು ಲೈಟ್ ಏಕಕಾಲದಲ್ಲಿ ಆನ್ ಆಗಿರೋದನ್ನು ನೋಡಿದ್ದೀರಾ…? ಬಹುಶಃ ಇರಲಿಕ್ಕಿಲ್ಲ. ಈ ಲೈಟ್ ನೋಡಿದಾಗ ನಿಲ್ಲುವುದಾ? ಅಥವಾ ವಾಹನ ಚಲಾಯಿಸೋದಾ ಎಂಬ ಕನ್ಫ್ಯೂಷನ್ ಆಗೋದು ಸಾಮಾನ್ಯ. ಈಗ ಇಂತಹ ಫೋಟೋವನ್ನು ತೆಲುಗು ನಟ ನವದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅಲ್ಲದೆ, ಬದುಕಿಗೂ ಸಿಗ್ನಲ್ಗೂ ಹೋಲಿಸಿ ಒಂದು ಕಮೆಂಟ್ ಹಾಕಿದ್ದಾರೆ. ಈ ಫೋಟೋ ಈಗ ವೈರಲ್ ಆಗ್ತಿದೆ…!