Saturday , December 15 2018
ಕೇಳ್ರಪ್ಪೋ ಕೇಳಿ
Home / Film News / ಸ್ಯಾಂಡಲ್‍ವುಡ್ ಬ್ಯೂಟಿ ಇನ್ನು ಕ್ರಿಕೆಟ್ ಆಟಗಾರ್ತಿ…

ಸ್ಯಾಂಡಲ್‍ವುಡ್ ಬ್ಯೂಟಿ ಇನ್ನು ಕ್ರಿಕೆಟ್ ಆಟಗಾರ್ತಿ…

ಹೈದರಾಬಾದ್ : ಸ್ಯಾಂಡಲ್‍ವುಡ್‍ನಲ್ಲಿ ಖ್ಯಾತಿ ಗಳಿಸಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‍ನಲ್ಲೂ ಸಖತ್ ಹೆಸರು ಮಾಡುತ್ತಿದ್ದಾರೆ. ಟಾಲಿವುಡ್ ಆಡಿಯನ್ಸ್ ಮನಗೆಲ್ಲುವಲ್ಲಿ ಕೊಡಗಿನ ಈ ಕುವರಿ ಯಶಸ್ವಿಯಾಗಿದ್ದಾರೆ. ತನ್ನ ನಗುವಿನಿಂದಲೇ ಅಭಿಮಾನಿಗಳ ಚಿತ್ತ ಕದ್ದಿರುವ ರಶ್ಮಿಕಾ ಈಗ ಟಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ನಾಗ ಶೌರ್ಯರ `ಚಲೋ’ ಚಿತ್ರದ ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಮೊದಲ ಪ್ರಯತ್ನದಲ್ಲೇ ಟಾಲಿವುಡ್‍ನಲ್ಲಿ ಯಶಸ್ಸು ಗಳಿಸಿದ್ದರು. ಇದಾದ ಬಳಿಕ ಟಾಲಿವುಡ್‍ನಲ್ಲಿ ರಶ್ಮಿಕಾ ಭಾಗ್ಯದ ಬಾಗಿಲು ತೆರೆದಿದೆ. ಸದ್ಯ ಮತ್ತೊಂದು ಚಿತ್ರವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮಂದಣ್ಣ ಕ್ರಿಕೆಟ್ ಆಟಗಾರ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ` ಡಿಯರ್ ಕಾರ್ಮೇಡ್’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದು ಇದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಕ್ರಿಕೆಟ್ ಆಟದ ವಿವಿಧ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಇದಕ್ಕಾಗಿ ತರಬೇತಿ ಕೂಡಾ ಪಡೆಯುತ್ತಿದ್ದಾರೆ. ಕಮ್ಮ ಭರತ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!