Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / ಬಾರ್ಸಿಲೋನಿಯಾದ ರೋಡ್‍ನಲ್ಲಿ ಕುಳಿತು ಮಕ್ಕಳೊಂದಿಗೆ ಶಾರೂಕ್ ಪೋಸ್

ಬಾರ್ಸಿಲೋನಿಯಾದ ರೋಡ್‍ನಲ್ಲಿ ಕುಳಿತು ಮಕ್ಕಳೊಂದಿಗೆ ಶಾರೂಕ್ ಪೋಸ್

ಮುಂಬೈ : ಬಾಲಿವುಡ್‍ನಲ್ಲಿ ಫ್ಯಾಮಿಲಿ ಮ್ಯಾನ್ ಇಮೇಜ್ ಇರುವ ಸೆಲೆಬ್ರಿಟಿಗಳಲ್ಲಿ ಶಾರೂಖ್ ಕೂಡಾ ಒಬ್ಬರು. ಎಷ್ಟೇ ಬ್ಯುಸಿಯಾಗಿದ್ದರೂ ಶಾರೂಖ್ ತನ್ನ ಕುಟುಂಬದೊಂದಿಗೆ ಒಂದಷ್ಟು ಹೊತ್ತು ಕಳೆದೇ ಕಳೆಯುತ್ತಾರೆ. ಜೊತೆಗೆ, ಮಕ್ಕಳೊಂದಿಗೆ ವಿದೇಶ ಸುತ್ತುವುದು ಕೂಡಾ ಶಾರೂಖ್ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಇನ್ನೊಂದ್ಕಡೆ, ಶಾರೂಖ್ ಪತ್ನಿ ಗೌರಿ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್. ಹೀಗಾಗಿ, ತಮ್ಮ ಕುಟುಂಬದ ವಿವಿಧ ಅಪ್‍ಡೇಟ್‍ಗಳನ್ನು ಗೌರಿ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಾರೆ.
ಇದೀಗ ಗೌರಿ ಇಂತಹದ್ದೇ ಒಂದು ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಫೋಟೋದಲ್ಲಿ ಶಾರೂಖ್ ತನ್ನಿಬ್ಬರು ಮಕ್ಕಳಾದ ಆರ್ಯನ್ ಮತ್ತು ಅಬ್‍ರಾಮ್ ಜೊತೆ ಬ್ಯಾಸಿರ್ಲೋನಿಯಾದ ರಸ್ತೆಯಲ್ಲಿ ಕುಳಿತು ಪೋಸ್ ಕೊಟ್ಟಿದ್ದಾರೆ. ಬೆಂಝ್ ಕಾರಿನ ಮುಂದೆ ಶಾರೂಖ್ ಮತ್ತು ಪುತ್ರರಿಬ್ಬರು ಸಖತ್ ಆಗಿಯೇ ಪೋಸ್ ನೀಡಿದ್ದು ಗೌರಿ ಆ ಕ್ಷಣವನ್ನು ಕ್ಲಿಕ್ಕಿಸಿದ್ದಾರೆ. ಈ ಸುಂದರ ಕ್ಷಣಗಳನ್ನು ಗೌರಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಲೈಕ್ಸ್, ಕಮೆಂಟ್ಸ್ ಪಡೆದಿದ್ದಾರೆ.

Best a woman can get… soaking the sun with my boys in Barcelona

A post shared by Gauri Khan (@gaurikhan) on

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!