Saturday , September 22 2018
ಕೇಳ್ರಪ್ಪೋ ಕೇಳಿ
Home / Film News / ಮಿಥುನ್ ಚಕ್ರವರ್ತಿ ಮಗನ ವಿರುದ್ಧ ರೇಪ್ ಕೇಸ್…! ಚಕ್ರವರ್ತಿ ಪತ್ನಿಯೂ ಆರೋಪಿ…!

ಮಿಥುನ್ ಚಕ್ರವರ್ತಿ ಮಗನ ವಿರುದ್ಧ ರೇಪ್ ಕೇಸ್…! ಚಕ್ರವರ್ತಿ ಪತ್ನಿಯೂ ಆರೋಪಿ…!

ಮುಂಬೈ : ಬಾಲಿವುಡ್​ನ ಹಿರಿಯ ನಟ ವಿಥುನ್ ಚಕ್ರವರ್ತಿ ಕುಟುಂಬಕ್ಕೆ ಈಗ ಸಂಕಷ್ಟ ಎದುರಾಗಿದೆ. ಮಿಥುನ್ ಪುತ್ರ ಮಹಾಕ್ಷಯ್ ಚಕ್ರವರ್ತಿ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ್ದು, ಎಫ್​ಐಆರ್ ದಾಖಲಿಸುವಂತೆ ರೋಹಿನಿ ಕೋರ್ಟ್ ಆದೇಶ ನೀಡಿದೆ. ಇನ್ನು, ಇದೇ ಪ್ರಕರಣದಲ್ಲಿ ಯುವತಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಮಹಾಕ್ಷಯ್ ತಾಯಿ ಮತ್ತು ಮಿಥುನ್ ಚಕ್ರವರ್ತಿ ಪತ್ನಿ ಯೋಗಿತಾ ಬಾಲಿ ವಿರುದ್ಧವೂ ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ…? : 2015ರ ಏಪ್ರಿಲ್​ನಿಂದ ತಾನು ಮಹಾಕ್ಷಯ್ ಜೊತೆ ಸಂಪರ್ಕದಲ್ಲಿದ್ದೇನೆ. ಇಬ್ಬರೂ ಫೋನ್ ನಲ್ಲಿ ನಿರಂತರ ಸಂಪರ್ಕದಲ್ಲಿದ್ದೆವು. ಒಂದು ಸಲ ಮಹಾಕ್ಷಯ್ ತನ್ನನ್ನು ಫ್ಲ್ಯಾಟ್​ಗೆ ಕರೆದು ತಂಪು ಪಾನೀಯದಲ್ಲಿ ಮದ್ಯ ಬೆರಸಿ ಕೊಟ್ಟಿದ್ದ ಮತ್ತು ಅತ್ಯಾಚಾರವೆಸಗಿದ್ದ. ಇದಾದ ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸಿ ನಾಲ್ಕು ವರ್ಷದಿಂದ ನಿರಂತರ ಅತ್ಯಾಚಾರ ಮಾಡಿದ್ದ. ಹೀಗಾಗಿ, ನಾನು ಗರ್ಭಿಣಿಯಾಗಿದ್ದೆ. ಆದರೆ, ಮಹಾಕ್ಷಯ್ ನನಗೆ ಏನೋ ಔಷಧಿ ನೀಡಿದ್ದರಿಂದ ನನಗೆ ಗರ್ಭಪಾತವಾಗಿತ್ತು. ತನ್ನ ಭವಿಷ್ಯಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಮಹಾಕ್ಷಯ್ ಗರ್ಭಪಾತ ಮಾಡಿಸಿದ್ದ. ಇದಾದ ಬಳಿಕ ಈತನಿಗೆ ಬೇರೆ ಮದುವೆಯಾಗಿದೆ. ಇನ್ನೊಂದು ಕಡೆ, ಯೋಗಿತಾ ಬಾಲಿ ಅವರೂ ನನಗೆ ಬೆದರಿಸಿದ್ದು, ‘ನನ್ನ ಸೊಸೆಯಾಗುವ ಕನಸು ಕಾಣಬೇಡ’ ಎಂದು ಹೆದರಿಸಿದ್ದರು ಎಂದೂ ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಈ ದೂರಿನನ್ವರ ಮಹಾಕ್ಷಯ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಕೇಸ್ ದಾಖಲಾಗಿದೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!