Saturday , February 16 2019
ಕೇಳ್ರಪ್ಪೋ ಕೇಳಿ
Home / Interval / ಒಂದು ದಿನದ ಫೋಟೋ ಶೂಟ್… : ಅಲ್ಲೇ ಶುರುವಾಯ್ತು ಮಾಧುರಿ, ಜಡೇಜಾ ಲವ್… : ಮುಂದೆ ಆಗಿದ್ದೇ ಟ್ರ್ಯಾಜಿಡಿ…!

ಒಂದು ದಿನದ ಫೋಟೋ ಶೂಟ್… : ಅಲ್ಲೇ ಶುರುವಾಯ್ತು ಮಾಧುರಿ, ಜಡೇಜಾ ಲವ್… : ಮುಂದೆ ಆಗಿದ್ದೇ ಟ್ರ್ಯಾಜಿಡಿ…!

ಡಿಸೆಂಬರ್ 1998… ಫಿಲಂ ಫೇರ್ ಮ್ಯಾಗಝಿನ್ ತನ್ನ ಮುಂದಿನ ಸಂಚಿಕೆಯ ಕವರ್​ಪೇಜ್​ಗಾಗಿ ಸೆಲೆಬ್ರಿಟಿಗಳ ಫೋಟೋ ತೆಗೆದಿತ್ತು. ಈ ಫೋಟೋ ಶೂಟ್​ಗೆ ಬಂದಿದ್ದವರು ಇಬ್ಬರು ಖ್ಯಾತನಾಮರು. ಒಬ್ಬರು ಬಾಲಿವುಡ್​ನ ಮೋಹಕ ಸುಂದರಿ ಮಾಧುರಿ ದೀಕ್ಷಿತ್ ಮತ್ತೊಬ್ಬರು ಭಾರತೀಯ ಕ್ರಿಕೆಟ್ ತಂಡದ ಆಗಿನ ಆಟಗಾರ ಅಜಯ್ ಜಡೇಜಾ. ಇವರಿಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದವರು.
ಅದು ಒಂದು ದಿನ ಶೂಟಿಂಗ್. ಆದರೆ, ಒಂದೇ ದಿನದ ಶೂಟಿಂಗ್​ನಲ್ಲಿ ಅಜಯ್ ಮತ್ತು ಮಾಧುರಿ ದೀಕ್ಷಿತ್ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಮಾಧುರಿ ಅಜಯ್ ಕಾರ್ಯವೈಖರಿಯಿಂದ ಇಂಪ್ರೆಸ್ ಆಗಿದ್ದರು. ಒಂದು ದಿನ ಶೂಟಿಂಗ್ ಮುಗಿದಿತ್ತು. ಆದರೆ, ಬಳಿಕ ಇವರಿಬ್ಬರು ಅಲ್ಲಿ ಇಲ್ಲಿ ಭೇಟಿಯಾಗುತ್ತಿದ್ದರು. ಇವರಿಬ್ಬರ ಸುದ್ದಿ ಆಗಿನ ಕಾಲಕ್ಕೆ ಗಾಸಿಪ್ ಕಾಲಂನಲ್ಲಿ ದೊಡ್ಡದಾಗಿ ಸ್ಥಾನ ಪಡೆಯಿತು. ಕ್ರಿಕೆಟ್ ಮತ್ತು ಸಿನೆಮಾ ಲೋಕದಲ್ಲಿ ಇವರಿಬ್ಬರು ‘ಪ್ರೇಮ್ ಕಹಾನಿ’ ಬಹಳ ಜೋರಾಗಿಯೇ ಸೌಂಡ್ ಮಾಡಲಾರಂಭಿಸಿತ್ತು..
ಆಗಿನ ಕಾಲದಲ್ಲಿ ಬಾಲಿವುಡ್ ಲೋಕದಲ್ಲಿ ಮಾಧುರಿ ಉತ್ತುಂಗದಲ್ಲಿ ಇದ್ದರು. ಅಜಯ್ ಕೂಡಾ ಕ್ರಿಕೆಟ್​ನಲ್ಲಿ ಸಖತ್ ಹೆಸರು ಮಾಡಿದ್ದರು. ಈ ನಡುವೆ, ಮಾಧುರಿ ಸೂಚನೆಯಂತೆ ಒಬ್ಬ ನಿರ್ಮಾಪಕರು ಇಬ್ಬರನ್ನೂ ಹಾಕಿಕೊಂಡು ಸಿನೆಮಾ ತೆಗೆಯುವುದಾಗಿ ಘೋಷಿಸಿದರು. ಇದಾದ ಬಳಿಕ ಮಾಧುರಿ ಮತ್ತು ಅಜಯ್ ಪ್ರೇಮ ಪ್ರಕರಣಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿತ್ತು. ಜೊತೆಗೆ, ಶೀಘ್ರದಲ್ಲೇ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂದೇ ಸುದ್ದಿಯಾಯಿತು. ಇದರಿಂದ ಮಾಧುರಿ ಸಿನಿ ಕೆರಿಯರ್​ಗೆ ಏನೂ ತೊಂದರೆ ಆಗಲಿಲ್ಲ. ಆದರೆ, ಅಜಯ್ ಕ್ರೀಡಾ ಬದುಕಿಗೆ ಹೊಡೆತ ಬೀಳಲಾರಂಭಿಸಿತು. ಈ ನಡುವೆ, ಅಜಯ್ ಮಾಧುರಿಯನ್ನು ವಿವಾಹವಾಗುವುದಕ್ಕೆ ಅವರ ಮನೆಯವರು ಸುತಾರಾಂ ಒಪ್ಪಲಿಲ್ಲ. ಕ್ರಿಕೆಟ್​ನತ್ತ ಇನ್ನಷ್ಟು ಕೇಂದ್ರೀಕರಿಸುವಂತೆ ಕುಟುಂಬ ಅಜಯ್ ಮೇಲೆ ಒತ್ತಡ ಹೇರಲಾರಂಭಿಸಿತು. ಇದು ಈ ಜೋಡಿ ನಡುವೆ ಸ್ವಲ್ಪ ಬಿರುಕಿಗೂ ಕಾರಣವಾಗಿತ್ತು. ಇಷ್ಟಾಗುವಾಗ ಅಜಯ್ ಜಡೇಜಾ ಹೆಸರು ಪಾಕಿಸ್ತಾನದ ವಿರುದ್ಧದ ಮ್ಯಾಚ್​​ ವೇಳೆ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಕೇಳಿ ಬರಲಾರಂಭಿಸಿತು… ಅಲ್ಲಿಗೆ ಮಾಧುರಿ ಅಜಯ್ ಜೀವನದಿಂದ ಸಂಪೂರ್ಣ ದೂರವಾದರು. ಒಂದು ಸುಂದರ ಪ್ರೇಮಕತೆಯೂ ಅಲ್ಲಿಗೆ ಕೊನೆಯಾಯ್ತು…! ಇದಾದ ಬಳಿಕವೇ ಮಾಧುರಿ ಸಂಜಯ್ ದತ್ ಪ್ರೀತಿಗೆ ಬಿದ್ದಿದ್ದು… ಆದ್ರೆ, ಈ ಪ್ರೀತಿಯೂ ಉಳಿಯಲೇ ಇಲ್ಲ…

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!