Saturday , September 22 2018
ಕೇಳ್ರಪ್ಪೋ ಕೇಳಿ
Home / News NOW / ಹೆಲಿಕಾಪ್ಟರ್​ನಲ್ಲಿ ಜೈಲಿಂದ ತಪ್ಪಿಸಿಕೊಂಡ ಮೋಸ್ಟ್ ವಾಂಟೆಡ್ ಕ್ರಿಮಿನಲ್…!

ಹೆಲಿಕಾಪ್ಟರ್​ನಲ್ಲಿ ಜೈಲಿಂದ ತಪ್ಪಿಸಿಕೊಂಡ ಮೋಸ್ಟ್ ವಾಂಟೆಡ್ ಕ್ರಿಮಿನಲ್…!

ಪ್ಯಾರಿಸ್ : ಇದೊಂದು ಬಹುದೊಡ್ಡ ಎಸ್ಕೇಪ್ ಪ್ರಕರಣ. ತುಂಬಾ ಭದ್ರತೆಯಲ್ಲಿದ್ದ ಪ್ಯಾರಿಸ್ ಜೈಲಿಂದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬ ಅನಾಯಸವಾಗಿ ತಪ್ಪಿಸಿಕೊಂಡಿದ್ದಾನೆ. ಅದೂ ಹೆಲಿಕಾಪ್ಟರ್ ಮೂಲಕ…!

46 ವರ್ಷದ ರಿಡೋಯಿನೇ ಫಾಯಿದ್ ತಪ್ಪಿಸಿಕೊಂಡ ಕೈದಿ. ರಿಯಾವ್ ಪ್ರದೇಶದಲ್ಲಿರುವ ಬಿಗಿ ಭದ್ರತೆಯ ಜೈಲಿನಿಂದ ಇವ್ನು ಎಸ್ಕೇಪ್ ಆಗಿದ್ದಾನೆ. ಶಸ್ತ್ರಾಸ್ತ್ರಧಾರಿಗಳಾಗಿ ಬಂದ ಇವನ ಸಹಚರರು ತಂದಿದ್ದ ಹೆಲಿಕಾಪ್ಟರ್​ನಲ್ಲಿ ಈ ಖತರ್ನಾಕ್ ದರೋಡೆಕೋರ ಎಸ್ಕೇಪ್ ಆಗಿದ್ದಾನೆ. 2010ರಲ್ಲಿ ನಡೆದಿದ್ದ ಬಹುದೊಡ್ಡ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 25 ವರ್ಷಗಳ ಶಿಕ್ಷೆ ಪ್ರಕಟಿಸಿದ ಬೆನ್ನಲ್ಲೇ ಈತ ಪರಾರಿಯಾಗಿದ್ದಾನೆ. ಈ ರಾಬರಿ ವೇಳೆ ಓರ್ವ ಪೊಲೀಸ್ ಕೂಡಾ ಸಾವನ್ನಪ್ಪಿದ್ದರು.

ಬಹಳ ಖತರ್ನಾಕ್ ಚೋರ ಈತ. ಇಂತಹ ಚೋರ ಭಾನುವಾರ ತನ್ನ ಮೂವರು ಸಹಚರರೊಂದಿಗೆ ಎಸ್ಕೇಪ್ ಆಗಿದ್ದಾನೆ. ಇದಾದ ಬಳಿಕ ಈತ ಎಸ್ಕೇಪ್ ಆದ ಹೆಲಿಕಾಪ್ಟರ್ ನಗರವೊಂದರ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಸದ್ಯ ಈತನಿಗೆ ಇಡೀ ಫ್ರಾನ್ಸ್​ನಾದ್ಯಂತ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದು ಈತ ಎರಡನೇ ಸಲ ಜೈಲಿನಿಂದ ಪರಾರಿಯಾಗುತ್ತಿರುವುದು. 2013ರಲ್ಲಿ ಜೈಲಿನಲ್ಲಿ ಡೈನಮೈಟ್ ಇಟ್ಟು ಈತ ಕಾಲ್ಕಿತ್ತಿದ್ದ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!