Tuesday , February 19 2019
ಕೇಳ್ರಪ್ಪೋ ಕೇಳಿ
Home / Film News / ಶೀಘ್ರ ಬಾಕಿ ಪಾವತಿಸಿ : ರಜನಿಕಾಂತ್ ಪತ್ನಿಗೆ ಸುಪ್ರೀಂಕೋರ್ಟ್ ತಾಕೀತು

ಶೀಘ್ರ ಬಾಕಿ ಪಾವತಿಸಿ : ರಜನಿಕಾಂತ್ ಪತ್ನಿಗೆ ಸುಪ್ರೀಂಕೋರ್ಟ್ ತಾಕೀತು

ನವದೆಹಲಿ : ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಆಸ್ತಿ ಮತ್ತು ಹಣದ ವ್ಯವಹಾರವನ್ನು ನೋಡಿಕೊಳ್ಳುವುದೇ ಇಲ್ಲ. ಅದೇನಿದ್ದರೂ ಈ ವ್ಯವಹಾರಗಳ ಜವಾವ್ದಾರಿ ರಜನಿ ಪತ್ನಿ ಲತಾ ಅವರದ್ದೇ… ಹೀಗಾಗಿಯೇ, ರಜನಿ ಕುಟುಂಬದ ಹಣಕಾಸಿನ ವಿಷಯದ ಸಮಸ್ಯೆಗಳು ಬಂದಾಗ ಲತಾ ಅವರ ಹೆಸರೇ ಪ್ರಮುಖವಾಗಿ ಕೇಳಿ ಬರುತ್ತದೆ. ಈಗ ಮತ್ತೆ ರಜನಿ ಅವರ ಪತ್ನಿ ಹಣಕಾಸಿನ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಆಡ್ ಏಜೆನ್ಸಿಗೆ ಹಣ ಬಾಕಿ ಉಳಿಸಿಕೊಂಡಿರುವ ಆರೋಪ ಲತಾ ಮೇಲಿದೆ.

ರಜನಿಕಾಂತ್ ಕೊಚಾಡಿಯನ್ ಎಂಬ ಚಿತ್ರ ಮಾಡಿದ್ದರು. ಇದು ರಜನಿಕಾಂತ್ ಅಭಿನಯಿಸಿದ ಮೊದಲ ಆನಿಮೇಷನ್ ಫಿಲಂ. ರಜನಿ ಪುತ್ರಿ ಸೌಂದರ್ಯ ಈ ಚಿತ್ರ ನಿರ್ದೇಶನ ಮಾಡಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಮಕಾಡೆ ಮಲಗಿತ್ತು. ಆದರೆ, ಈ ಚಿತ್ರಕ್ಕೆ ಪ್ರಚಾರ ಮಾಡಿದ್ದವರು `ಮೀಡಿಯಾ ವನ್ ಆಡ್ ಬ್ಯುರೋ’ ಎಂಬ ಸಂಸ್ಥೆ. ಆದರೆ, ಅಂದಿನ ಪ್ರಚಾರ ಕಾರ್ಯಕ್ಕೆ ಆಗಿದ್ದ ಮಾತುಕತೆಯಲ್ಲಿ 6.5 ಕೋಟಿ ರೂಪಾಯಿಯನ್ನು ಲತಾ ನೀಡಿರಲಿಲ್ಲ. ಈ ಬಗ್ಗೆ ಕಂಪನಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ಸಂಬಂಧ ಫೆಬ್ರವರಿಯಲ್ಲೇ ಹಣ ಹಿಂತಿರುಗಿಸುವಂತೆ ನ್ಯಾಯಾಲಯ ಹೇಳಿತ್ತು. ಆದರೆ, ಯಾರೂ ಹಣ ನೀಡದೇ ಇರುವುದರಿಂದ ಕಂಪನಿ ಮತ್ತೆ ನ್ಯಾಯಾಲಯದ ಕದ ತಟ್ಟಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಶೀಘ್ರ ಹಣ ಪಾವತಿ ಮಾಡುವಂತೆ ತಿಳಿಸಿದೆ. ಅಲ್ಲದೆ, ಯಾವಾಗ ಹಣ ಕೊಡುತ್ತೇವೆ ಎಂದು ಹೇಳಬೇಕೆಂದೂ ಆದೇಶಿಸಿದೆ. ಹೀಗಾಗಿ, ಲತಾ ಅವರ ಉತ್ತರಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!