Sunday , July 22 2018
ಕೇಳ್ರಪ್ಪೋ ಕೇಳಿ
Home / News NOW / ರಂಗಸಮುದ್ರದಲ್ಲಿ ಹುಲಿ ಉಪಟಳ : ಕ್ಯಾಮೆರಾಕ್ಕೆ ವ್ಯಾಘ್ರನ ಚಮಕ್…

ರಂಗಸಮುದ್ರದಲ್ಲಿ ಹುಲಿ ಉಪಟಳ : ಕ್ಯಾಮೆರಾಕ್ಕೆ ವ್ಯಾಘ್ರನ ಚಮಕ್…

ಮಡಿಕೇರಿ : ರಂಗಸಮುದ್ರ ಸಮೀಪದ ಈಗ ಹುಲಿ ಉಪಟಳ ಜಾಸ್ತಿಯಾಗಿದೆ. ಕುಟ್ಟನಹಳ್ಳಿಯಲ್ಲಿ ಹುಲಿ ಹಸುವನ್ನು ಬಲಿ ಪಡೆದಿದೆ. ಜೊತೆಗೆ, ನಡುರಾತ್ರಿಯಲ್ಲಿ ಹಸುವನ್ನು ತಿಂದು ಇನ್ನರ್ಧ ಭಾಗವನ್ನು ಅರಣ್ಯಕ್ಕೆ ಹೊತ್ತೊಯ್ದಿದಿದೆ. ಈ ದೃಶ್ಯ ಹುಲಿಗಾಗಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೂನ್ 30ರಂದು ಕುಟ್ಟನಹಳ್ಳಿಯಲ್ಲಿ ತಳೂರು ನಾಗರಾಜ್ ಎಂಬುವವರ ಹಸುವನ್ನು ಹುಲಿ ಹಾಡಹಗಲೇ ಬಲಿ ಪಡೆದಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಮೃತಪಟ್ಟ ಹಸುವಿನ ಬಳಿ ಮೂರು ಕ್ಯಾಮೆರಾ ಟ್ರ್ಯಾಪರ್‍ಗಳನ್ನು ಅಳವಡಿಸಿತ್ತು. ಅಂದು ರಾತ್ರಿ 12 ಗಂಟೆಗೆ ಮತ್ತೆ ಸತ್ತ ಹಸುವಿನ ಬಳಿ ಬಂದಿದ್ದ ಹುಲಿ 15 ನಿಮಿಷಗಳ ಕಾಲ ಹಸುವನ್ನು ತಿನ್ನುತ್ತಿತ್ತು. ನಂತರ ಹಸುವಿನ ಉಳಿದ ಮಾಂಸವನ್ನು ಅರಣ್ಯಕ್ಕೆ ಹೊತ್ತೊಯ್ದಿದೆ. ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಚಲನವಲನದ ಬಗ್ಗೆ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ.

About sudina

Check Also

ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಮುಂದೆ ಬಂದ ನೂರಾರು ಕಂಪೆನಿಗಳು

ಬೆಂಗಳೂರು : ರಾಜ್ಯದ ಹಲವು ನಗರಗಳಿಗೆ ಸ್ಮಾರ್ಟ್ ಸಿಟಿ ಭಾಗ್ಯ ಸಿಕ್ಕಿದೆ. ಇದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಗಳು, ಕಾಮಗಾರಿಗಳು …

Leave a Reply

Your email address will not be published. Required fields are marked *

error: Content is protected !!