Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಯುನೆಸ್ಕೋ ಮಹಾಸಭೆಯಲ್ಲಿ ಬಂಟ್ವಾಳದ ಕುವರಿ…

ಯುನೆಸ್ಕೋ ಮಹಾಸಭೆಯಲ್ಲಿ ಬಂಟ್ವಾಳದ ಕುವರಿ…

ಬೆಹರೀನ್ : ವಿಶ್ವಸಂಸ್ಥೆಯ ಯುನೆಸ್ಕೋ ವತಿಯಿಂದ ವಿಶ್ವ ಪರಂಪರಿಕ ಪಟ್ಟಿಗೆ ವಿವಿಧ ರಾಷ್ಟ್ರಗಳ ಐತಿಹಾಸಿಕ ಸ್ಥಳಗಳನ್ನು ಸೇರಿಸುವ ಮಹಾಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಕುವರಿಯೊಬ್ಬರು ಪಾಲ್ಗೊಂಡಿದ್ದಾರೆ. ಬೆಹರೀನ್​ನ ಮನಾಮದಲ್ಲಿ ಈ ಕಾನ್ಫರೆನ್ಸ್ ನಡೆಯುತ್ತಿದ್ದು, ಬಂಟ್ವಾಳದ ಸಿಂಧೂರ ಟಿ.ಪಿ ಭಾಗವಹಿಸಿದ್ದಾರೆ. ಜರ್ಮನಿಯ ಕೊಟ್ಬಾಸ್ ಬಿಟಿಯು ವಿಶ್ವವಿದ್ಯಾನಿಲಯವನ್ನು ಸಿಂಧೂರ ಪ್ರತಿನಿಧಿಸುತ್ತಿದ್ದಾರೆ.

ಸಿಂದೂರ ಅವರು ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದ ಪ್ರೊ.ತುಕಾರಾಮ್ ಪೂಜಾರಿ ಮತ್ತು ಡಾ. ಆಶಾಲತಾ ಸುವರ್ಣರ ಪುತ್ರಿ. ಈ ಕಾನ್ಫರೆನ್ಸ್ ಹತ್ತು ದಿನಗಳ ಕಾಲ ನಡೆಯಲಿದೆ. ಸಿಂಧೂರರ ಈ ಪಾಲ್ಗೊಳ್ಳುವಿಕೆ ಬಂಟ್ವಾಳದ ಹೆಮ್ಮೆಗೆ ಮತ್ತೊಂದು ಗರಿಯಂತಾಗಿದೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!