Friday , September 21 2018
ಕೇಳ್ರಪ್ಪೋ ಕೇಳಿ
Home / Interval / ಸೋನಾಲಿ ಬೇಂದ್ರೆಗೆ ಕ್ಯಾನ್ಸರ್… : ಇಲ್ಲಿದೆ ಸಲ್ಲು, ಶಾರೂಖ್, ದೀಪಿಕಾ… ಸೆಲೆಬ್ರಿಟಿಗಳ ಆರೋಗ್ಯದ ಸಮಸ್ಯೆಯ ಪಕ್ಷಿ ನೋಟ…

ಸೋನಾಲಿ ಬೇಂದ್ರೆಗೆ ಕ್ಯಾನ್ಸರ್… : ಇಲ್ಲಿದೆ ಸಲ್ಲು, ಶಾರೂಖ್, ದೀಪಿಕಾ… ಸೆಲೆಬ್ರಿಟಿಗಳ ಆರೋಗ್ಯದ ಸಮಸ್ಯೆಯ ಪಕ್ಷಿ ನೋಟ…

ಮುಂಬೈ : ಒಂದು ಕಾಲದಲ್ಲಿ ಯುವಕರ ನಿದ್ದೆ ಕದ್ದಿದ್ದ ಚೋರಿ ಸೋನಾಲಿ ಬೇಂದ್ರೆ ಈಗ ಮಾರಕ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ಸ್ವತಃ ಸೋನಾಲಿ ಅವರೇ ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Sometimes, when you least expect it, life throws you a curveball. I have recently been diagnosed with a high grade cancer that has metastised, which we frankly did not see coming. A niggling pain led to some tests, which led to this unexpected diagnosis. My family and close friends have rallied around me, providing the best support system that anyone can ask for. I am very blessed and thankful for each of them. There is no better way to tackle this, than to take swift and immediate action. And so, as advised by my doctors, I am currently undergoing a course of treatment in New York. We remain optimistic and I am determined to fight every step of the way. What has helped has been the immense outpouring of love and support I’ve received over the past few days, for which I am very grateful. I’m taking this battle head on, knowing I have the strength of my family and friends behind me.

A post shared by Sonali Bendre (@iamsonalibendre) on


ಸೋನಾಲಿ ಅವರಂತೆ ಇತರ ಹಲವು ಸ್ಟಾರ್‍ಗಳಿಗೂ ಇದೇ ರೀತಿಯ ಬೇರೆ ಬೇರೆ ಮಾರಕ ಸಮಸ್ಯೆಗಳು ಕಾಡುತ್ತಿವೆ. ಅದರಲ್ಲೂ ಇತ್ತೀಚೆಗಷ್ಟೇ ನಟ ಇರ್ಫಾನ್ ಖಾನ್ ಅವರೂ ಕ್ಯಾನ್ಸರ್ ನ ಕಾರಣಕ್ಕೆ ಸುದ್ದಿಯಾಗಿದ್ದು, ಇವರೂ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.. ಸಲ್ಲೂಗೂ ಇತ್ತು ದೊಡ್ಡ ಸಮಸ್ಯೆ…! : ಸೂಪರ್ ಸ್ಟಾರ್ ಸಲ್ಮಾನ್ ಖಾನ್ರಂತೆ ಸುಂದರ ಜೀವನ ನಡೆಸಲು ಎಲ್ಲಾ ಅಭಿಮಾನಿಗಳು ಇಷ್ಟ ಪಡುತ್ತಾರೆ… ಯಾಕೆಂದರೆ, ಸಲ್ಲೂ ಬಿಟೌನ್‍ನ ಬಲು ಬೇಡಿಕೆಯ ಸ್ಟಾರ್.. ವಯಸ್ಸು 50 ದಾಟಿದರೂ ಸಲ್ಲು ಈಗಲೂ ಫಿಟ್ ಆಂಡ್ ಫೈನ್.. ಸಲ್ಲೂ ದೇಹ ಸಿರಿಯೇ ಅವರ ಬಂಡವಾಳ… ಬಣ್ಣದ ಲೋಕದಲ್ಲಿ ಸಲ್ಮಾನ್ ಏರಿದ ಎತ್ತರಕ್ಕೆ ಸಾಮಾನ್ಯವಾಗಿ ಸದ್ಯ ಯಾರಿಗೂ ಮುಟ್ಟಲು ಸಾಧ್ಯ ಇಲ್ಲ. ಸಲ್ಲೂ ಚಿತ್ರ ಎಂದರೆ ಅದು ನಿರ್ಮಾಪಕರ ಥೈಲಿ ತುಂಬಿಸುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಅನೇಕ ನಿರ್ಮಾಪಕರ ಬಲವಾದ ನಂಬಿಕೆ… ಈ ಬಲವಾದ ನಂಬಿಕೆಗೆ ಕಾರಣ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸಿರುವ ಸಲ್ಲೂ ಚಿತ್ರಗಳು… ಅನೇಕ ಸ್ಟಾರ್ ಡೈರೆಕ್ಟರ್ಗಳು ಸಲ್ಲೂ ಜೊತೆ ಕೆಲಸ ಮಾಡಲು ಕಾಯುತ್ತಿರುತ್ತಾರೆ… ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಈಗಲೂ ಹುಡುಗಿಯರ ಚಿತ್ತ ಕದ್ದ ಚೋರನಾಗಿಯೇ ಇದ್ದಾರೆ… ಮೈನೇ ಪ್ಯಾರ್ ಕಿಯಾ ಎಂಬ ಸೂಪರ್ ಹಿಟ್ ಚಿತ್ರದಿಂದ ಸಲ್ಲೂ ಸಿನಿ ಜರ್ನಿ ಶುರುವಾಗಿತ್ತು… ಆಗಿನಿಂದ ಈಗಿನವರೆಗೂ ಸಲ್ಲೂ ಸ್ಟಾರ್ ಆಗಿಯೇ ಇದ್ದಾರೆ… ನಡುವೆ, ಕೆಲವೊಂದು ಚಿತ್ರಗಳು ತೊಪೆದ್ದು ಹೋದರೋ ಸಲ್ಮಾನ್ ಫಿನಿಕ್ಸ್ನಂತೆ ಎದ್ದು ಬಂದದ್ದು ಮಾತ್ರ ಈಗ ಇತಿಹಾಸ… ಇಷ್ಟಿದ್ದರೂ ಸಲ್ಮಾನ್ ಸುಖಿ ಅಲ್ಲ… ಮಾನಸಿಕ ನೆಮ್ಮದಿಯೂ ಇವರಿಗಿಲ್ಲ… ಕ್ಷಣಕ್ಷಣಕ್ಕೂ ಇವರನ್ನು ಕಾಡುತ್ತಿದೆ ಆ ಸಮಸ್ಯೆ… ಚಿತ್ರರಂಗದಲ್ಲಿ ದೊಡ್ಡ ಹೆಸರು, ದೇಶ ವಿದೇಶದಲ್ಲಿ ಅಭಿಮಾನಿಗಳ ದಂಡು ಸಲ್ಲೂಗೆ ಇದೆ… ಐಷಾರಾಮಿ ಸೌಲಭ್ಯಗಳಿವೆ… ಇಷ್ಟಿದ್ದರೂ ಸಲ್ಮಾನ್ ಸುಖಿ ಅಲ್ಲ…! ಎಷ್ಟು ಸೌಲಭ್ಯ, ಹಣ, ಐಶ್ವರ್ಯ ಇದ್ದರೇನಂತೆ… ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಇವೆಲ್ಲ ಇದ್ದರೂ ಇಲ್ಲದಂತೆ… ಎಲ್ಲವೂ ಶೂನ್ಯ…
ನಿಮಗೆ ಅಚ್ಚರಿ ಆಗಬಹುದು ಸಲ್ಮಾನ್‍ಗೆ ಈ ಸ್ಟಾರ್ ಬಹುದೊಡ್ಡ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ… ಇದು ಗುಣಮುಖವಾಗುವಂತಹ ಖಾಯಿಲೆಯೇ ಅಲ್ಲ…! ವೈದ್ಯಕೀಯ ಭಾಷೆಯಲ್ಲಿ ಇದನ್ನು ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂದು ಕರೆಯುತ್ತಾರೆ… ಈ ಖಾಯಿಲೆಗೆ ಇನ್ನೊಂದು ಹೆಸರೂ ಇದೆ… ಅದೇನೆಂದರೆ ಆತ್ಮಹತ್ಯಾ ರೋಗ ಅಥವಾ ಸುಸೈಡ್ ಡಿಸೀಸ್…! ಅಂದರೆ ಈ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಸಹಿಸಲಸಾಧ್ಯ ನೋವನ್ನು ಅನುಭವಿಸುತ್ತಾರಂತೆ… ಇಂತಹ ನೋವಿನ ಸಂದರ್ಭದಲ್ಲಿ ಹಲವು ರೋಗಿಗಳು ಆತ್ಮಹತ್ಯೆಯ ನಿರ್ಧಾರವನ್ನೂ ತೆಗೆದುಕೊಳ್ಳುತ್ತಾರಂತೆ…!

ಟ್ರಿಗ್ನೇಮಿನಲ್ ನ್ಯೂರಾಜ್ಜಿಯಾ ಎಂದರೆ ನರ ಸಂಬಂಧಿ ಸಮಸ್ಯೆ… ಮುಖದಲ್ಲಿರುವ ಪ್ರಮುಖ ನರವ್ಯೂಹದಲ್ಲಿ ಈ ಸಮಸ್ಯೆ ಕಾಣಲಾರಂಭಿಸುತ್ತದೆ. ಮುಖದಲ್ಲಿನ ಈ ನರವ್ಯೂಹದಲ್ಲಿ ಕಾಣಿಸಿಕೊಳ್ಳುವ ವಿಪರೀತ ಉರಿ ನೋವಿಗೂ ಕಾರಣವಾಗುತ್ತದೆ… ಇಂತಹ ಸಂದರ್ಭದಲ್ಲಿ ಮುಖವನ್ನು ಸಣ್ಣದಾಗಿ ಅಲುಗಾಡಿಸಿದರೂ ಅಸಾಧ್ಯ ನೋವನ್ನು ಅನುಭವಿಸಬೇಕಾಗುತ್ತದೆ… ಈ ನೋವು ಹೆಚ್ಚಾಗುತ್ತಿದ್ದಂತೆಯೇ ರೋಗಿಗಳು ಖಿನ್ನತೆಯಿಂದ ಬಳಲುತ್ತಾರೆ. ಈ ಖಿನ್ನತೆ ಹೆಚ್ಚಾಗುತ್ತಿದ್ದಂತೆಯೇ ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಾರೆ… ಆದರೆ, ಈ ರೋಗ ಬರಲು ನಿಖರ ಕಾರಣ ಏನು ಎಂಬುದು ಇನ್ನೂ ಗೊತ್ತಿಲ್ಲ. ಸದ್ಯದ ಪ್ರಕಾರ ರಕ್ತಕಣಗಳು ಅಥವಾ ಮುಖದಲ್ಲಿ ಇರುವ ಗಡ್ಡೆಗಳ ಕಾರಣದಿಂದ ಈ ಸಮಸ್ಯೆ ಕಂಡು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ… ಈ ಸಮಸ್ಯೆಯ ಲಕ್ಷಣ ಎಂದರೆ ಮುಖದ ಒಂದು ಭಾಗದಲ್ಲಿ ಮೊದಲು ನೋವು ಕಾಣಿಸಿಕೊಳ್ಳುತ್ತದೆ. ಹಲ್ಲುಜ್ಜುವಾಗ, ಮುಖ ತೊಳೆಯುವಾಗ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಮುಖದ ಬಹುಭಾಗದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಈ ನೋವು ಎಷ್ಟಿರುತ್ತದೆ ಎಂದರೆ ಮೊದಲೇ ಹೇಳಿದ ಹಾಗೆ ರೋಗಿಗಳು ಆತ್ಮಹತ್ಯೆಗೂ ಮುಂದಾಗುತ್ತಾರೆ… ಆದರೆ, ಯಾವ ಸಂದರ್ಭದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯ ಇಲ್ಲ. ಯಾವಾಗ ಬೇಕಾದರೂ ಈ ನೋವು ಕಾಣಿಸಿಕೊಳ್ಳಬಹುದು.

ಪಾಟ್ನರ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಮೊದಲ ಬಾರಿಗೆ ಸಲಾನ್‍ಗೆ ಈ ರೋಗದ ಲಕ್ಷಣ ಕಂಡು ಬಂದಿತ್ತು… ಹೀಗಾಗಿ, ಅಂದು ಶೂಟಿಂಗ್ ಅನ್ನು ನಿಲ್ಲಿಸಲಾಗಿತ್ತು… ಬಳಿಕ ಈ ಶೂಟಿಂಗ್ ಶುರುವಾಗಲು ತುಂಬಾ ದಿನಗಳೇ ಆಗಿದ್ದವು… ಪಾಟ್ನರ್ ಟೈಮ್ನಲ್ಲಿ ಅದೇಗೋ ಸುಧಾರಿಸಿಕೊಂಡು ಸಲ್ಲು ಮತ್ತೆ ಸಿನಿಲೋಕದಲ್ಲಿ ಬ್ಯುಸಿ ಆಗುತ್ತಾ ಹೋದರು… ಆದರೆ, 2011ರಲ್ಲಿ ವೀರ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು… ವೀರ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಸಲ್ಮಾನ್ ಅದೆಷ್ಟು ಗಂಭೀರ ಸ್ಥಿತಿಗೆ ತಲುಪಿದ್ದರು ಎಂದರೆ ತಕ್ಷಣ ಅವರು ಚಿಕಿತ್ಸೆಗಾಗಿ ಅಮೇರಿಕಾಕಕ್ಕೆ ಹಾರಬೇಕಾಯ್ತು… ಈ ಚಿಕಿತ್ಸೆ ಸಂದರ್ಭದಲ್ಲಿ ಸಲ್ಮಾನ್ ಜೊತೆ ಅವರ ಇಡೀ ಕುಟುಂಬವೇ ಆತಂಕದಲ್ಲಿ ಇತ್ತು… ಮೊದಲೇ ಅಮೇರಿಕಾದಲ್ಲಿ ಟ್ರೀಟ್ಮೆಂಟ್ ತೆಗೆದುಕೊಂಡಿದ್ದರೆ ಸಲ್ಮಾನ್ ಇಷ್ಟು ಕಷ್ಟಪಡುತ್ತಿರಲಿಲ್ಲವೇನೋ…? ಆದರೆ, ಬ್ಯುಸಿ ಕೆಲಸ, ಆ ಕೇಸ್, ಈ ಕೇಸು ಅಂತ ಕೋಟ್ರ್ನಲ್ಲಿ ಅಲೆದಾಟ.. ಹೀಗಾಗಿ, ಸಲ್ಲು ಚಿಕಿತ್ಸೆ ಕಡೆ ಗಮನವನ್ನೇ ಕೊಟ್ಟಿರಲಿಲ್ಲ… ಇದರಿಂದ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು… ಇದನ್ನು ಹಾಗೆಯೇ ಬಿಟ್ಟಿದ್ದರೆ ಸಲ್ಲು ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆಯೂ ಇತ್ತು…! ಅಮೇರಿಕಾದಲ್ಲಿ ಚಿಕಿತ್ಸೆ ಬಳಿಕ ನೋವು ಶಮನವಾಗಿತ್ತು… ಸಲ್ಮಾನ್ ಬಿ ಟೌನ್ನಲ್ಲಿ ಮತ್ತೆ ಹಿಂದಿನಂತೆ ಬ್ಯುಸಿ ಆಗಿದ್ದರು… ಆದರೂ, ಆಗೊಮ್ಮೆ ಈಗೊಮ್ಮೆ ಈ ನೋವು ಈ ಸುಲ್ತಾನ್ ಸ್ಟಾರ್ ಅನ್ನು ಕಾಡುತ್ತಲೇ ಇತ್ತು…

ಸುಲ್ತಾನ್ ಶೂಟಿಂಗ್ ಟೈಮ್ನಲ್ಲೂ ಸಲ್ಲೂ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಇನ್ನು, ಭಜರಂಗಿ ಭಾಯಿಜಾನ್ ಸಂದರ್ಭದಲ್ಲೂ ಈ ಸಮಸ್ಯೆ ಸಲ್ಲೂಗೆ ಕಾಟ ಕೊಟ್ಟಿತ್ತು… ಇಂತಹ ಸಂದರ್ಭದಲ್ಲೂ ಸಲ್ಮಾನ್ ಪರಿಸ್ಥಿತಿಯನ್ನು ನಿಭಾಯಿಸಿದ ಪರಿ ಇದ್ಯಲ್ವಾ ಅದನ್ನು ಮೆಚ್ಚಬೇಕು… ಯಾಕೆಂದರೆ, ನೋವಿನ ನಡುವೆಯೂ ಸಲ್ಮಾನ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಾ ಬಂದಿದ್ದರು… ವೈದ್ಯರ ಪ್ರಕಾರ, ಸಲ್ಮಾನ್‍ರನ್ನು ಕಾಡುತ್ತಿರುವ ಈ ಸಮಸ್ಯೆ ಒಂದೊಮ್ಮೆ ಬಡವರಿಗೆ ಬಂದಿದ್ದರೆ ರೋಗಿ ಇಷ್ಟೊತ್ತಿಗಾಗಲೇ ವಿಧಿವಶನಾಗುತ್ತಿದ್ದ…! ಅಷ್ಟು ತೀವ್ರವಾದ ಸಮಸ್ಯೆ ಇದು…! ಒಂದು ಸಂಶೋಧನೆ ಪ್ರಕಾರ ಒಂದು ಅಥವಾ ಎರಡು ಸಾವಿರ ಜನರಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆಯಂತೆ. ಸದ್ಯ ಸಲ್ಮಾನ್‍ರನ್ನು ಈ ಸಮಸ್ಯೆ ಅಷ್ಟಾಗಿ ಕಾಡದೇ ಇದ್ದರೂ ಆಗೊಮ್ಮೆ ಈಗೊಮ್ಮೆ ನೋವು ಕೊಡುತ್ತಲೇ ಇದೆ… ಆದರೆ, ಈ ನೋವನ್ನೂ ಮೆಟ್ಟಿ ನಿಂತು ಸಲ್ಲೂ ಬದುಕು ನಡೆಸುತ್ತಿದ್ದಾರೆ… ಆದರೆ, ಇದರಿಂದಾಗಿ ಬೇರೆ ಬೇರೆ ಸಮಸ್ಯೆಯನ್ನು ಮಾತ್ರ ಸಲ್ಲು ಎದುರಿಸುತ್ತಿದ್ದಾರೆ… ಇದು ಅವರ ವೈಯಕ್ತಿಕ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ…

ಸ್ನೇಹಾ ಉಳ್ಳಾಲ್ : ಸಲ್ಮಾನ್ ಖಾನ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ್ದ ನಟಿ ಸ್ನೇಹಾ ಉಲ್ಲಾಳ್ ಕೂಡಾ ಬಹುದೊಡ್ಡ ಸಮಸ್ಯೆಯಿಂದ ಬಳಲುತ್ತಿದ್ದರು. ನಾಲ್ಕು ವರ್ಷದಿಂದ ಈ ಲಕ್ಕಿ ಸ್ಟಾರ್ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಇವರಷ್ಟೇ ಅಲ್ಲದೆ, ಬಾಲಿವುಡ್ ಲೋಕದ ಹಲವು ಸ್ಟಾರ್ಗಳು ಈ ರೀತಿ ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ…

ಸ್ನೇಹಾ ಉಳ್ಳಾಲ್.. ಬೆಕ್ಕಿನ ಕಣ್ಣಿನ ಬೆಡಗಿ… ಕರಾವಳಿಯ ಕುವರಿಗೆ ಬಾಲಿವುಡ್‍ಗೆ ರಹದಾರಿ ನೀಡಿದ್ದು ಇದೇ ಸಲ್ಮಾನ್ ಖಾನ್… ಐಶ್ವರ್ಯ ತರ ಇರೋದು ಸ್ನೇಹ ಪ್ಲಸ್ ಪಾಯಿಂಟ್.. ಜ್ಯೂನಿಯರ್ ಐಶ್ವರ್ಯ ಎಂದೇ ಇವರು ಖ್ಯಾತಿ… ಆ ಟೈಮ್ನಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ಲವ್ ಸ್ಟೋರಿ ಸಖತ್ ಫೇಮಸ್… ಆದರೆ, ಅದ್ಯಾಕೋ ಬಳಿಕ ಈ ಜೋಡಿ ದೂರವಾಗಿತ್ತು… ಇದೇ ಕೋಪದಲ್ಲಿ ಸಲ್ಮಾನ್ ಐಶ್ವರ್ಯದಂತೆ ಇರುವ ಸ್ನೇಹಾರನ್ನು ಹುಡುಕಿ ತನ್ನ `ಲಕ್ಕಿ ನೋ ಟೈಮ್ ಫಾರ್ ಲವ್’ ಚಿತ್ರದ ನಾಯಕಿಯ ಪಟ್ಟ ನೀಡಿದ್ದರು… ಆದರೆ, ಬಾಲಿವುಡ್ನಲ್ಲಿ ಒಳ್ಳೆಯ ಅವಕಾಶ ಸಿಕ್ಕರೂ ಸ್ನೇಹಾಗೆ ಐಶ್ ರೀತಿ ಮಿಂಚಲು ಸಾಧ್ಯವಾಗಲಿಲ್ಲ. ಅದೂ ಅಲ್ಲದೆ, ಈ ಚಿತ್ರ ಕೂಡಾ ಬಾಕ್ಸ್ ಆಫೀಸ್ನಲ್ಲಿ ಅಂತಹದ್ದೇನು ದೊಡ್ಡ ಸಾಧನೆಯನ್ನು ಮಾಡಿರಲಿಲ್ಲ…

ಇದಾದ ಬಳಿಕ ಅಲ್ಲೊಂದು ಇಲ್ಲೊಂದು ಪಾತ್ರ ಮಾಡುತ್ತಿದ್ದ ಸ್ನೇಹಾ 2015ರಿಂದ ಸಂಪೂರ್ಣವಾಗಿ ನಾಪತ್ತೆಯೇ ಆಗಿ ಹೋಗಿದ್ದರು… ಆದರೆ, ಸ್ನೇಹಾ ಈ ರೀತಿ ನಾಪತ್ತೆ ಆಗುವುದಕ್ಕೆ ಕಾರಣ ಏನು ಅಂತ ಇತ್ತೀಚೆಗಷ್ಟೇ ಗೊತ್ತಾಗಿದೆ… ಯಾಕೆಂದರೆ, ಸ್ನೇಹಾರನ್ನು ಮಾರಕ ರೋಗವೊಂದು ಬಾಧಿಸುತ್ತಿತ್ತು… ಅಟೋ ಇಮ್ಯುನಿ ಡಿಸಾರ್ಡರ್ ಎಂಬ ಸಮಸ್ಯೆಯಿಂದ ಸ್ನೇಹಾ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ತೆಳ್ಳಗಾಗುತ್ತಿದ್ದ ಸ್ನೇಹ ಸಂಪೂರ್ಣ ನಿಶಕ್ತರೇ ಆಗಿ ಹೋಗಿದ್ದರು. ಒಂದು ಅರ್ಧ ಗಂಟೆಯೂ ನಿಲ್ಲಲಾರದ ಸ್ಥಿತಿಗೆ ಸ್ನೇಹ ತಲುಪಿದ್ದರು…! ಅಂದರೆ, ಅಷ್ಟು ಪ್ರಮಾಣದಲ್ಲಿ ಸ್ನೇಹಾ ಮೂಳೆ ಸವೆಯಲು ಆರಂಭವಾಗಿತ್ತು… ಈ ಸಮಸ್ಯೆ ಇದ್ದ ಇಷ್ಟು ಅವಧಿ ಅವರು ಕಷ್ಟ ಪಾಡು ಅವರಿಗೇ ಗೊತ್ತು… ಇದೀಗ ಬಳಿಕ ಕಳೆದ ವರ್ಷವಷ್ಟೇ ಸ್ನೇಹಾ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದು…

ದೀಪಿಕಾ ಪಡುಕೋಣೆ : ಹೆಚ್ಚಿನವರಿಗೆ ಗೊತ್ತಿದೆಯೋ ಇಲ್ವೋ… ಬಾಲಿವುಡ್‍ನ ಈಗಿನ ಟಾಪ್ ಹೀರೋಯಿನ್ ದೀಪಿಕಾ ಪಡುಕೋಣೆ ಕೂಡಾ ಖಿನ್ನತೆಯಿಂದ ಬಳಲುತ್ತಿದ್ದರು…!
ಬಾಲಿವುಡ್‍ನ ಖ್ಯಾತಿಯ ಉತ್ತುಂಗದಲ್ಲಿ ಇರುವಾಗಲೇ ದೀಪಿಕಾ ಖಿನ್ನತೆಗೊಳಗಾಗಿದ್ದರು. ಆದರೆ, ತಮ್ಮ ಸಮಸ್ಯೆಯನ್ನು ಅರಿತಿದ್ದ ದೀಪಿಕಾ ಈ ನೋವಿನಿಂದ ಹೊರಬರುವಲ್ಲಿ ಯಶಸ್ವಿಯೂ ಆಗಿದ್ದರು…

ಮನೀಷಾ ಕೊಯಿರಾಲ

ಮನಿಷಾ ಕೊಯಿರಾಲ : ಇನ್ನು, ಮನಿಷಾ ಕೊಯಿರಾಲ… ಇವರು ಹೀಗೆಯೇ ಒಂದು ಕಾಲದಲ್ಲಿ ಬಾಲಿವುಡ್ ಲೋಕದಲ್ಲಿ ಮಿಂಚಿದ್ದ ಬೆಡಗಿ…ಆದರೆ, ಈ ಮನಿಷಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. 2012ರಲ್ಲಿ ಮನಿಷಾಗೆ ಗರ್ಭಕೋಶದ ಕ್ಯಾನ್ಸರ್ ಇರೋದು ಗೊತ್ತಾಗಿತ್ತು. ಇದಾದ ಬಳಿಕ ಶಸ್ತ್ತಚಿಕಿತ್ಸೆಯನ್ನು ಮಾಡಿಕೊಂಡ ಮನಿಷಾ, ಮಾರಕ ರೋಗದ ವಿರುದ್ಧವೇ ಹೋರಾಟ ನಡೆಸಿ ಜಯಿಸಿದರು. ಕಳೆದ ಎರಡು ವರ್ಷದಿಂದ ಎಲ್ಲಾ ಕಷ್ಟದಿಂದ ಪಾರಾಗಿರುವ ಮನಿಷಾ ಚಿತ್ರರಂಗದಲ್ಲೂ ಈಗೀಗ ಸಕ್ರಿಯರಾಗಿದ್ದಾರೆ… ಮೊನ್ನೆ ರಿಲೀಸ್ ಆದ ಸಂಜು ಚಿತ್ರದಲ್ಲೂ ಮನಿಶಾ ನಟಿಸಿದ್ದಾರೆ.

ಇದೇ ಸೆಲೆಬ್ರಿಟಿಗಳ ಲಿಸ್ಟ್ನಲ್ಲಿ ನಾವು ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನೂ ಸೇರಿಸಬಹುದು… ಯುವಿ ಕೂಡಾ ಕಾಡುವ ಕ್ಯಾನ್ಸರ್ ವಿರುದ್ಧವೇ ಹೋರಾಟ ಮಾಡಿದ್ದ ಆಟಗಾರ… ಲೀ ಸಾ ರೇ ಹೆಸರು ನೀವು ಕೇಳಿರಬಹುದು… ಕನ್ನಡದಲ್ಲೂ ಶಿವರಾಜ್‍ಕುಮಾರ್ ಜೊತೆ ಅಭಿನಯಿಸಿದ್ದ ಈ ನಟಿಗೂ ಕ್ಯಾನ್ಸರ್ ಕಾಡಿತ್ತು… ಲೀಸಾ ಕೂಡಾ ಕ್ಯಾನ್ಸರ್‍ನಿಂದ ಗುಣಮುಖರಾಗಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ… ಅಲ್ಲದೆ, ತಮ್ಮ ಮಾಡೆಲಿಂಗ್ ಲೋಕದಲ್ಲಿ ಮುಂದುವರಿದಿದ್ದಾರೆ…

ಬಿಗ್ ಬಿ ಅಮಿತಾಭ್ ಅವರಂತೂ ಸಹಿಸಲಸಾಧ್ಯ ಹೊಟ್ಟೆ ನೋವಿನಿಂದ ಬಳಲುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಇದಕ್ಕೆ ಕಾರಣ 1982ರಲ್ಲಿ ಬೆಂಗಳೂರಿನಲ್ಲಿ ಕೂಲಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆದ ಏಟು… ಈ ಸಂದರ್ಭದಲ್ಲಿ ವೈದ್ಯರು ಕೂಡಾ ಅಮಿತಾಭ್ ಆಸೆ ಬಿಟ್ಟಿದ್ದರು. ಬಚ್ಚನ್ ಬದುಕುವುದೇ ಕಷ್ಟ ಎಂಬಂತಹ ಸ್ಥಿತಿ ಆಗ ನಿರ್ಮಾಣವಾಗಿತ್ತು. ಆದರೆ, ಪವಾಡ ಸದೃಶ್ಯ ರೀತಿಯಲ್ಲಿ ಬಿಗ್ ಬಿ ಬದುಕಿ ಬಂದಿದ್ದರು. ಆದರೆ, ಈ ನೋವು ಮಾತ್ರ ಅಮಿತಾಭ್ರನ್ನು ಈಗಲೂ ಕಾಡುತ್ತಲೇ ಇದೆ…

ಇವಷ್ಟಲ್ಲದೆ, ಸೈಫ್ ಅಲಿ ಖಾನ್‍ಗೆ ಹಾರ್ಟ್‍ನ ಸಮಸ್ಯೆ ಇದೆ, ಹೃತಿಕ್ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, ನಿರ್ದೇಶಕ ಅನುರಾಗ್ ಬಸುಗೆ ಬ್ಲಡ್ ಕ್ಯಾನ್ಸರ್ ಇದೆ, ಶಾರೂಖ್ ಖಾನ್‍ಗೆ 8 ಆಪರೇಷನ್ ಆಗಿದೆ, ಹಿರಿಯ ನಟ ಧರ್ಮೇಂದ್ರ ಖಿನ್ನತೆಯಿಂದ ಬಳಲುತ್ತಿದ್ದುದ್ದು… ಹೀಗೆ, ಸಿನಿಲೋಕದಲ್ಲೂ ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸ್ಟಾರ್‍ಗಳಿದ್ದಾರೆ…. ಅಂದರೆ, ಈ ಎಲ್ಲಾ ಸಮಸ್ಯೆಯ ಹೊರತಾಗಿಯೂ ಇವರೆಲ್ಲಾ ಸಿನಿಲೋಕದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ… ದೈಹಿಕವಾಗಿ ಅದೆಷ್ಟು ಕಷ್ಟ ಇದ್ದರೂ ಸಾಧಿಸಬೇಕು ಎಂದು ಹೊರಟರೆ ಇವೆಲ್ಲವನ್ನೂ ಮರೆತು ಈ ಎಲ್ಲರೂ ಮುನ್ನುಗ್ಗಿದ್ದಾರೆ. ಅದರಲ್ಲಿ ಯಶಸ್ಸು ಕೂಡಾ ಆಗಿದ್ದಾರೆ…

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!