Monday , September 24 2018
ಕೇಳ್ರಪ್ಪೋ ಕೇಳಿ
Home / Interval / ಈ ಚಿತ್ರದಿಂದಲೇ ಮಾಧುರಿ ಸ್ಟಾರ್ ಆಗಿದ್ದು! : ಬೀದಿ ಬದಿಯಲ್ಲಿ ಬಾಲಕನಿಗೆ ಕೊಟ್ಟಿದ್ದೇ ದೀಕ್ಷಿತ್ ಫಸ್ಟ್ ಆಟೋಗ್ರಾಫ್!

ಈ ಚಿತ್ರದಿಂದಲೇ ಮಾಧುರಿ ಸ್ಟಾರ್ ಆಗಿದ್ದು! : ಬೀದಿ ಬದಿಯಲ್ಲಿ ಬಾಲಕನಿಗೆ ಕೊಟ್ಟಿದ್ದೇ ದೀಕ್ಷಿತ್ ಫಸ್ಟ್ ಆಟೋಗ್ರಾಫ್!

ಮಾಧುರಿ ದೀಕ್ಷಿತ್ ಆಗ ಸ್ಟಾರ್ ಆಗಿರಲಿಲ್ಲ. ನಟಿಸಿದ ಏಳೆಂಟು ಚಿತ್ರಗಳೂ ತೋಪೆದ್ದು ಹೋಗಿದ್ದವು. ಆದರೂ ಮಾಧುರಿ ಪ್ರಯತ್ನ ಬಿಟ್ಟಿರಲಿಲ್ಲ. ಹೀಗೆ, ಸಾಲು ಸಾಲು ಸೋಲಿನ ಬಳಿಕ ಮಾಧುರಿ ನಟಿಸಿದ ಚಿತ್ರ ‘ತೇಜಬ್’. ಈ ಚಿತ್ರ ರಿಲೀಸ್ ಆದ ವೇಳೆ ಮಾಧುರಿ ತನ್ನ ಸಹೋದರಿಯ ಮದುವೆಗಾಗಿ ಅಮೇರಿಕಾಕ್ಕೆ ಹೋಗಿದ್ದರು. ಇತ್ತ, ಇಲ್ಲಿ ಭಾರತದಲ್ಲಿ ಈ ಚಿತ್ರ ರಿಲೀಸ್ ಆಯ್ತು. ಬಾಕ್ಸ್ ಆಫೀಸ್​ನಲ್ಲೂ ಸೌಂಡ್ ಮಾಡಿತ್ತು. ಸೂಪರ್ ಡೂಪರ್ ಹಿಟ್​ ಆಗಿ ಮಿಂಚಿತ್ತು. ಆದ್ರೆ, ಅಮೇರಿಕಾದಲ್ಲಿ ಮಾಧುರಿ ಇದ್ದುದರಿಂದ ಈ ಯಶಸ್ಸಿನ ಸುದ್ದಿ ಅವರಿಗೆ ತಿಳಿಯಲಿಲ್ಲ. ಹೀಗಾಗಿ, ಅವರ ಸೆಕ್ರೆಟರಿ ಈ ವಿಷಯವನ್ನು ದೂರವಾಣಿ ಮೂಲಕ ಮಾಧುರಿಗೆ ತಿಳಿಸಿದರು. ಆದರೆ, ಮಾಧುರಿ ಈ ಯಶಸ್ಸನ್ನು ನಂಬಲು ಸಿದ್ಧರಿಲಿಲ್ಲ. ಕಾರಣ, ಈ ಹಿಂದಿನ ಸಾಲು ಸಾಲು ಸೋಲು.

ಮದುವೆ ಎಲ್ಲಾ ಮುಗಿಸಿ ಮಾಧುರಿ ಭಾರತಕ್ಕೆ ಮರಳಿದರು. ಈ ವೇಳೆ, ಏರ್​ ಪೋರ್ಟ್​ನಲ್ಲಿ ಬರುತ್ತಿದ್ದಾಗ ಮಾಧುರಿಯನ್ನು ಜನರೆಲ್ಲಾ ಕುತೂಹಲದಿಂದಲೇ ನೋಡುತ್ತಿದ್ದರು. ಇದನ್ನು ಮಾಧುರಿ ಕೂಡಾ ಗಮನಿಸಿದ್ದರು. ಹೀಗೆ ಜನರನ್ನು ನೋಡುತ್ತಲೇ ಮಾಧುರಿ ಕಾರಿನಲ್ಲಿ ಕುಳಿತರು. ಕಾರು ಮುಂಬೈಯ ರಸ್ತೆಯಲ್ಲಿ ಸಾಗುತ್ತಿದ್ದಂತೆಯೇ ಒಂದು ಕಡೆ ಸಿಗ್ನಲ್​ನಲ್ಲಿ ಕಾರು ನಿಂತಿತ್ತು. ಆಗ ಫುಟ್​ಪಾತ್​ನಲ್ಲಿ ಹೂ ಮಾಡುತ್ತಿದ್ದ ಹುಡುಗನೊಬ್ಬ ಮಾಧುರಿಯನ್ನು ನೋಡಿದ. ಅಚ್ಚರಿಯಿಂದ ಓಡಿ ಬಂದು ಕೇಳಿದ ‘ನೀವು ಮೋಹಿನಿ ಅಲ್ವಾ…?’ ಮಾಧುರಿ ಒಮ್ಮೆ ಆಶ್ಚರ್ಯ ಚಕಿತರಾದರು. ಈ ವೇಳೆ, ಆ ಹುಡುಗ ಒಂದು ಕಾಗದ ತುಂಡನ್ನು ಮಾಧುರಿ ಮುಂದೆ ಚಾಚಿ ಆಟೋಗ್ರಾಫ್ ಕೊಡಿ ಎಂದು ಕೇಳಿದ. ಮಾಧುರಿ ಕೂಡಾ ಖುಷಿಯಿಂದಲೇ ಸಹಿ ಹಾಕಿದರು. ಇದು ಮಾಧುರಿ ದೀಕ್ಷಿತ್ ಅವರ ಮೊದಲ ಆಟೋಗ್ರಾಫ್… ಒಂದೇ ಚಿತ್ರದಲ್ಲಿ ಮಾಧುರಿ ಸ್ಟಾರ್ ಆಗಿ ಬಿಟ್ಟಿದ್ದರು…!

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!