Saturday , February 16 2019
ಕೇಳ್ರಪ್ಪೋ ಕೇಳಿ
Home / Film News / `ಸಂಜು’ ಚಿತ್ರಕ್ಕೆ ದತ್ ಮೊದಲ ಪುತ್ರಿ ಅಸಮಾಧಾನ…?

`ಸಂಜು’ ಚಿತ್ರಕ್ಕೆ ದತ್ ಮೊದಲ ಪುತ್ರಿ ಅಸಮಾಧಾನ…?

ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಜೀವನಕತೆಯಾದ `ಸಂಜು’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಚಿಂದಿ ಉಡಾಯಿಸ್ತಿದೆ. ಎಲ್ಲಾ ಕಡೆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ರಣಬೀರ್ ನಟನೆಗೂ ಎಲ್ಲರೂ ಫಿದಾ ಆಗಿದ್ದಾರೆ. ಆದರೆ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರದ ಬಗ್ಗೆ ಸಂಜಯ್ ದತ್ ಮೊದಲ ಪತ್ನಿ ಪುತ್ರಿ ತ್ರಿಶಾಲಾ ಅಸಮಾಧಾನಗೊಂಡಿದ್ದಾರಂತೆ.

ಸಾಮಾನ್ಯವಾಗಿ ತ್ರಿಶಾಲಾ ತಂದೆಯ ಎಲ್ಲಾ ಖುಷಿಯಲ್ಲಿ ಜೊತೆಯಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಎಲ್ಲಾ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಆದ್ರೆ, ಸಂಜು ಬಗ್ಗೆ ತ್ರಿಶಾಲಾ ತಮ್ಮ ಅಭಿಪ್ರಾಯವನ್ನು ಇನ್ನೂ ವ್ಯಕ್ತಪಡಿಸಿಯೇ ಇಲ್ಲ. ಸಂಜು ಚಿತ್ರದ ಬಗ್ಗೆ ತ್ರಿಶಾಲಾಗೆ ಇರುವ ಬೇಸರವೇ ಇದಕ್ಕೆ ಕಾರಣವಂತೆ. ತ್ರಿಶಾಲಾರ ತಾಯಿ ರೀಚ ಶರ್ಮಾ ಸಂಜಯ್ ಅವರ ಮೊದಲ ಪತ್ನಿ. ಸಂಜೂ ಬದುಕಿನಲ್ಲಿ ಇವರ ಪಾತ್ರ ತುಂಬಾ ದೊಡ್ಡದು. ಆದರೆ, ಮದುವೆಯಾಗಿ ಐದು ವರ್ಷದ ಬಳಿಕ ರೀಚ ಕ್ಯಾನ್ಸರ್‍ನಿಂದ ಸಾವನ್ನಪ್ಪಿದ್ದರು. ಆದರೆ, ಸಂಜು ಚಿತ್ರದಲ್ಲಿ ರೀಚ ಶರ್ಮಾ ಅಥವಾ ತ್ರಿಶಾಲಾರ ಉಲ್ಲೇಖವೇ ಇಲ್ಲವಂತೆ. ಇದು ತ್ರಿಶಾಲಾ ಬೇಸರಕ್ಕೆ ಕಾರಣ.

ಸಂಜಯ್ ಅವರ ಮಾಜಿ ಪ್ರಿಯತಮೆಯರ ಬಗ್ಗೆಯೇ ಚಿತ್ರದಲ್ಲಿ ಇದೆ. ಆದರೆ, ಅವರ ಬದುಕಿನ ಪ್ರಮುಖ ಭಾಗವಾಗಿದ್ದ, ದತ್ ಸೋಲು ಗೆಲುವಿನಲ್ಲಿ ಜೊತೆಯಾಗಿದ್ದ ರೀಚ ಅವರನ್ನೇ ತೋರಿಸಿಲ್ಲ ಎನ್ನುವ ನೋವು ತ್ರಿಶಾಲಾರದ್ದು. ಆದರೆ, ದತ್ ಅವರ ಮೂರನೇ ಪತ್ನಿ ಮಾನ್ಯತಾ ಹಾಗೂ ಮಕ್ಕಳ ಬಗ್ಗೆ ಚಿತ್ರ ಹೇಳುತ್ತೆ. ಈ ಪಾತ್ರಗಳಿಗೆ ದೊಡ್ಡ ಸ್ಥಾನವನ್ನೇ ಕೊಡಲಾಗಿದೆ. ಆದರೆ, ದತ್ ಇನ್ನಿಬ್ಬರು ಪತ್ನಿಯರಾದ ರೀಚ ಹಾಗೂ ರೀಹಾ ಪಿಳ್ಳೈ ಬಗ್ಗೆ ಚಿತ್ರ ಮಾತನಾಡುವುದೇ ಇಲ್ಲವಂತೆ.. ಇದೇ ಕಾರಣಕ್ಕೆ ತ್ರಿಶಾಲಾ ಬೇಜರಾಗಿದ್ದು ಎಲ್ಲೂ ಚಿತ್ರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಹೀಗೆ ಹರಡಿರುವ ಸುದ್ದಿ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದಕ್ಕೆ ಸ್ವತಃ ತ್ರಿಶಾಲಾ ಅವರೇ ಉತ್ತರಿಸಬೇಕಾಗಿದೆ..

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!