Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್…!

ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್…!

ಮುಂಬೈ : ಕನ್ನಡದ ‘ಪ್ರೀತ್ಸೆ’ ಸಿನೆಮಾದಲ್ಲಿ ಮಿಂಚಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಈಗ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಸ್ವತಃ ಸೋನಾಲಿ ಅವರೇ ತಮ್ಮ ಇನ್​​ಸ್ಟ್ರಾಗ್ರಾಂನಲ್ಲಿ ಅಭಿಮಾನಿಗಳಿಗೆ ಈ ವಿಷಯ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ನಟ ಇರ್ಫಾನ್ ಖಾನ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸುದ್ದಿಯೇ ಬಾಲಿವುಡ್​ನಲ್ಲಿ ದೊಡ್ಡ ಶಾಕ್ ತಂದಿತ್ತು. ಇಂತಹ ಸಂದರ್ಭದಲ್ಲಿ ಈಗ ಸೋನಾಲಿ ಬೇಂದ್ರೆ ಅವರು ಕೂಡಾ ಈ ಮಾರಕ ರೋಗದಿಂದ ಬಳಲುತ್ತಿರುವುದು ಬಿ ಟೌನ್​ನಲ್ಲಿ ಬೇಸರ ತರಿಸಿದೆ.

Sometimes, when you least expect it, life throws you a curveball. I have recently been diagnosed with a high grade cancer that has metastised, which we frankly did not see coming. A niggling pain led to some tests, which led to this unexpected diagnosis. My family and close friends have rallied around me, providing the best support system that anyone can ask for. I am very blessed and thankful for each of them. There is no better way to tackle this, than to take swift and immediate action. And so, as advised by my doctors, I am currently undergoing a course of treatment in New York. We remain optimistic and I am determined to fight every step of the way. What has helped has been the immense outpouring of love and support I’ve received over the past few days, for which I am very grateful. I’m taking this battle head on, knowing I have the strength of my family and friends behind me.

A post shared by Sonali Bendre (@iamsonalibendre) on


ಸದ್ಯ ಸೋನಾಲಿ ನ್ಯೂಯಾರ್ಕ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಬೇಂದ್ರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ತಮಗೆ ಬೆಂಬಲವಾಗಿರುವ ಕುಟುಂಬಸ್ಥರು, ಸ್ನೇಹಿತರಿಗೂ ಇವರು ಧನ್ಯವಾದ ಹೇಳಿದ್ದಾರೆ. ಅಲ್ಲದೆ, ಈ ಸಮಸ್ಯೆಯಿಂದ ಹೊರಬರುತ್ತೇನೆ ಎಂಬ ವಿಶ್ವಾಸವನ್ನು ಇವರು ವ್ಯಕ್ತಪಡಿಸಿದ್ದಾರೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!