Saturday , September 22 2018
ಕೇಳ್ರಪ್ಪೋ ಕೇಳಿ
Home / Film News / ಅತ್ಯಾಚಾರ ಆರೋಪ : ಮಿಥುನ್ ಚಕ್ರವರ್ತಿ ಪುತ್ರ, ಪತ್ನಿಗೆ ಇಲ್ಲ ರಿಲೀಫ್

ಅತ್ಯಾಚಾರ ಆರೋಪ : ಮಿಥುನ್ ಚಕ್ರವರ್ತಿ ಪುತ್ರ, ಪತ್ನಿಗೆ ಇಲ್ಲ ರಿಲೀಫ್

ಮುಂಬೈ : ಬಾಲಿವುಡ್‍ನ ಖ್ಯಾತ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿಗೆ ಸದ್ಯಕ್ಕೆ ರಿಲೀಫ್ ಇಲ್ಲ. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಹಾಕ್ಷಯ್‍ಗೆ ಬಂಧನಕ್ಕೆ ತಡೆ ನೀಡಲು ಮುಂಬೈ ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ, ಮಿಥುನ್ ಪತ್ನಿ ಮಹಾಕ್ಷಯ್ ತಾಯಿ ಯೋಗಿತಾ ಬಾಲಿ ಕೂಡಾ ಇದೇ ಪ್ರಕರಣದ ಆರೋಪಿಯಾಗಿದ್ದು, ಇವರಿಗೂ ರಿಲೀಫ್ ಸಿಕ್ಕಿಲ್ಲ.

ಮೊನ್ನೆಯಷ್ಟೇ ಯುವತಿಯೊಬ್ಬಳು ಮಹಾಕ್ಷಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಳು. ಮದುವೆಯಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಮಹಾಕ್ಷಯ್ ತನಗೆ ಗರ್ಭಪಾತ ಮಾಡಿಸಿದ್ದು, ಈಗ ಬೇರೊಬ್ಬಾಕೆಯೊಂದಿಗೆ ಮದುವೆಗೆ ಮುಂದಾಗಿದ್ದಾನೆ ಎಂದು ದೂರಿದ್ದಳು. ಈ ದೂರು ಸ್ವೀಕರಿಸಿದ್ದ ದೆಹಲಿಯ ಕೋರ್ಟ್ ಮಹಾಕ್ಷಯ್ ವಿರುದ್ಧ ಅತ್ಯಾಚಾರ ಪ್ರಕರಣ ಹಾಗೂ ಆತನ ತಾಯಿ ಯೋಗಿತಾ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತ್ತು. ಹೀಗಾಗಿ, ಬಂಧನದಿಂದ ಪಾರಾಗಲು ಇವರಿಬ್ಬರು ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದರು. ದೆಹಲಿಯ ಕೋರ್ಟ್‍ಗೆ ಜಾಮೀನಿಗೆ ಅರ್ಜಿ ಸಲ್ಲಿಸುವ ತನಕ ನಮ್ಮನ್ನು ಬಂಧನ ಮಾಡದಂತೆ ಆದೇಶ ನೀಡಬೇಕೆಂದು ಇವರಿಬ್ಬರು ಮನವಿ ಮಾಡಿಕೊಂಡಿದ್ದರು. ಆದರೆ, ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಸಂಬಂಧಪಟ್ಟ ನ್ಯಾಯಾಲಯಕ್ಕೇ ಮನವಿ ಮಾಡುವಂತೆ ನಿರ್ದೇಶನ ನೀಡಿದೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!