Saturday , October 20 2018
ಕೇಳ್ರಪ್ಪೋ ಕೇಳಿ
Home / Film News / ನ್ಯೂಯಾರ್ಕ್‍ನ ರಸ್ತೆಯಲ್ಲಿ ಪ್ರಣಯ ಪತಂಗಗಳ ಸೈಕಲ್ ಸವಾರಿ…

ನ್ಯೂಯಾರ್ಕ್‍ನ ರಸ್ತೆಯಲ್ಲಿ ಪ್ರಣಯ ಪತಂಗಗಳ ಸೈಕಲ್ ಸವಾರಿ…

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪಾಪ್ ಸಿಂಗರ್ ನಿಕ್ ಜೊಹಾನ್ಸ್ ನಡುವಣ ಪ್ರೀತಿ ಪ್ರೇಮದ ವಿಚಾರ ಈ ಬಿಟೌನ್‍ನಲ್ಲಿ ಹಾಟ್ ಸಬ್ಜೆಕ್ಟ್. ಶೀಘ್ರದಲ್ಲೇ ಇವರಿಬ್ಬರು ದಾಂಪತ್ಯಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ, ಮುಂಬೈಯಲ್ಲಿ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದು, ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದರು. ಪ್ರಿಯಾಂಕಾ ಮನೆಯ ಸಂಭ್ರಮದಲ್ಲಿ ನಿಕ್ ಭಾಗಿಯಾಗಿದ್ದರು. ಹೀಗಾಗಿ, ಇವರಿಬ್ಬರ ಪ್ರೇಮದ ವಿಚಾರ ಈಗ ಸಖತ್ ಆಗಿಯೇ ಸುಳಿದಾಡುತ್ತಿದೆ. ಆದರೆ, ಇವರಿಬ್ಬರು ಈ ಪ್ರೀತಿಯ ಬಗ್ಗೆ ಬಾಯಿ ಬಿಡದಿದ್ದರೂ ಈ ಸುದ್ದಿಗೆ ಇವರಿಬ್ಬರೇ ಬಗೆಬಗೆಯಾಗಿ ರೆಕ್ಕೆ ಪುಕ್ಕ ಬರುವಂತೆ ಮಾಡುತ್ತಿರುವುದೂ ಸತ್ಯ…!  ಇದು ಕೂಡಾ ಅಂತಹದ್ದೇ ಚಿತ್ರ. ಪ್ರಿಯಾಂಕಾ ಮತ್ತು ನಿಕ್ ಅಮೇರಿಕಾದ ಬೀದಿಯಲ್ಲಿ ಸೈಕಲ್ ಸವಾರಿ ಮಾಡುತ್ತಾ ವಿಹರಿಸಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ. ಇವರಿಬ್ಬರ ಸ್ನೇಹಿತರೂ ಇವರನ್ನು ಸರಿಯಾಗಿ ಕಿಚಾಯಿಸುತ್ತಲೂ ಇದ್ದಾರೆ. ಭಾರತದಲ್ಲಿ ಹೀಗೆ ಸುತ್ತಾಡಲು ಸಾಧ್ಯವಿಲ್ಲ. ಆದರೆ, ಅಮೇರಿಕಾದಲ್ಲಿ ಈ ಇಬ್ಬರು ಸೆಲೆಬ್ರಿಟಿಗಳಿಗೆ ಹೀಗೆ ಸೈಕಲ್‍ನಲ್ಲಿ ಸುತ್ತಾಡುವುದು ಕಷ್ಟವಲ್ಲ. ಹೀಗಾಗಿಯೇ, ಅಮೇರಿಕಾದಲ್ಲಿ ಈ ಜೋಡಿ ತಮ್ಮ ಪ್ರೇಮ ಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದೆ…

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!