Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಆಲಿಯಾ ಮನೆಯಲ್ಲಿ ರಣಬೀರ್…! : ನಡೆಯುತ್ತಿದೆಯಾ ಮದುವೆ ಮಾತುಕತೆ…?

ಆಲಿಯಾ ಮನೆಯಲ್ಲಿ ರಣಬೀರ್…! : ನಡೆಯುತ್ತಿದೆಯಾ ಮದುವೆ ಮಾತುಕತೆ…?

ಮುಂಬೈ : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸದ್ಯ ಬಾಲಿವುಡ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಜೋಡಿ. ಇವರಿಬ್ಬರು ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿ ಬಹಳ ದಿನ ಆಯ್ತು. ಇದೀಗ, ಇವರಿಬ್ಬರ ಸಂಬಂಧ ಇನ್ನೊಂದು ಘಟ್ಟಕ್ಕೆ ಸಾಗುವ ಹಾದಿಯಲ್ಲಿದೆ. ಅದು ಮದುವೆ… ಹೌದು, ಇಬ್ಬರು ಶೀಘ್ರದಲ್ಲೇ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಣಬೀರ್ ಅಲಿಯಾ ಭಟ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭೇಟಿಯ ಫೋಟೋಗಳು ಈಗ ಸಖತ್ ಕುತೂಹಲ ಮೂಡಿಸಿದೆ. ಈ ಫೋಟೋದಲ್ಲಿ ಆಲಿಯಾ ತಂದೆ ಮಹೇಶ್ ಭಟ್ ಕೂಡಾ ಇದ್ದಾರೆ. ಹೀಗಾಗಿ, ರಣಬೀರ್ ಮದುವೆ ಸಂಬಂಧವಾಗಿ ಮಾತುಕತೆ ನಡೆಸಲೇ ಇವರ ಮನೆಗೆ ಹೋಗಿದ್ದಾರೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದರೆ, ಇದಿನ್ನು ದೃಢಪಟ್ಟಿಲ್ಲ. ಆದರೆ, ಈ ಫೋಟೋ ಹಲವು ಪ್ರಶ್ನೆ, ಕುತೂಹಲಕ್ಕೆ ಕಾರಣವಾಗಿದ್ದಂತೂ ಸತ್ಯ…..

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!