Monday , July 23 2018
ಕೇಳ್ರಪ್ಪೋ ಕೇಳಿ
Home / Interval / ಮಿಥುನ್ ಚಕ್ರವರ್ತಿ ವಿರುದ್ಧ ಸುಶ್ಮಿತಾ ಸೇನ್ ಮಾಡಿದ್ದರು ‘ಆ ಘೋರ’ ಆರೋಪ…!

ಮಿಥುನ್ ಚಕ್ರವರ್ತಿ ವಿರುದ್ಧ ಸುಶ್ಮಿತಾ ಸೇನ್ ಮಾಡಿದ್ದರು ‘ಆ ಘೋರ’ ಆರೋಪ…!

ಡೈರೆಕ್ಟರ್ ಕಲ್ಪನಾ ಲಾಜ್ಮಿ ಒಂದು ಚಿತ್ರ ತೆಗೆದರು. ಅದೇ ‘ಚಿಂಗಾರಿ’. ಸುಶ್ಮಿತಾ ಸೇನ್ ಈ ಚಿತ್ರದ ನಾಯಕಿ. ಮಿಥುನ್ ಚಕ್ರವರ್ತಿಗೆ ನೆಗೆಟಿವ್ ರೋಲ್. ಶೂಟಿಂಗ್ ಶುರುವಾಯ್ತು. ಆದ್ರೆ, ಶೂಟಿಂಗ್​ನ ಮೊದಲ ದಿನವೇ ಇಬ್ಬರ ನಡುವೆ ಏನೋ ಮನಸ್ತಾಪ ಉಂಟಾಗಿತ್ತು. ನಿರ್ದೇಶಕರಾದ ಕಲ್ಪನಾ ಲಾಜ್ಮಿ ಹೇಗೋ ಪರಿಸ್ಥಿತಿ ನಿಭಾಯಿಸಿ ಶೂಟಿಂಗ್ ಮುಂದುವರಿಸಿದರು.

ಹೀಗೆ ಶೂಟಿಂಗ್ ಸಾಗುತ್ತಿರುವಾಗ ಒಂದು ಸೀನ್​ನಲ್ಲಿ ಸುಶ್ಮಿತಾ ಮತ್ತು ಚಕ್ರವರ್ತಿ ನಿಭಾಯಿಸುವ ಪಾತ್ರಗಳ ನಡುವೆ ರೊಮ್ಯಾನ್ಸ್ ಸೀನ್​ನ ದೃಶ್ಯದ ಶೂಟಿಂಗ್ ಇತ್ತು. ಅದ್ಯಾಕೋ ಈ ಶೂಟಿಂಗ್​ಗಿಂತ ಮುಂಚೆಯೇ ಸುಶ್ಮಿತಾರ ಮುಖದಲ್ಲೊಂದು ಭಯ ಆವರಿಸಿತ್ತು. ಶೂಟಿಂಗ್ ಶುರುವಾಯ್ತು. ಆದರೆ, ಟೇಕ್ ಮೇಲೆ ಟೇಕ್, ಟೇಕ್ ಮೇಲೆ ಟೇಕ್ ತಗೊಳ್ಳಬೇಕಾಯ್ತು. ಇದಾದ ಮೇಲೆ ಫೈನಲ್ ಟೇಕ್ ಆಗಿ ಡೈರೆಕ್ಟರ್ ಕಟ್ ಹೇಳಿದ್ರು. ಅಷ್ಟರಲ್ಲಿ ಈ ಸೀನ್ ಮುಗಿಸಿದ ಸುಶ್ಮಿತಾ ಕೋಪದಿಂದ ಬುಸುಗುಟ್ಟುತ್ತಾ ತಮ್ಮ ಕಾರಿನತ್ತ ಸಾಗುತ್ತಿದ್ದರು. ನಿರ್ದೇಶಕರಾದ ಕಲ್ಪನಾ ಕೂಡಾ ಹಿಂದಿನಿಂದಲೇ ಹೋದ್ರು. ಏನಾಯ್ತು ಅಂತ ಕೇಳಿದಾಗ ‘ಮಿಥುನ್ ಬೇಕೆಂದೇ ಹೇಗೋಗೋ ಟಚ್ ಮಾಡುತ್ತಿದ್ದರು’ ಅಂತ ಉತ್ತರಿಸಿದ್ರು ಸೇನ್. ಆಗ ನಿರ್ದೇಶಕರಾದ ಲಾಜ್ಮಿ ಇಂತಹ ಸೀನ್​ನಲ್ಲಿ ಗೊತ್ತಾಗದಂತೆ ಹೀಗೆ ನಡೆದಿರುವ ಸಾಧ್ಯತೆ ಇರುತ್ತದೆ ಎಂದು ಸುಶ್ಮಿತಾರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ರು. ಇನ್ನೊಂದ್ಕಡೆ, ಈ ಆರೋಪದಿಂದ ಮಿಥುನ್ ಕುಸಿದು ಹೋಗಿದ್ದರು. ಚಿತ್ರದಿಂದಲೇ ಹೊರಹೋಗುವುದಾಗಿ ಹೇಳುತ್ತಿದ್ದರು. ಸುಶ್ಮಿತಾ ಕೂಡಾ ಹಾಗೆಯೇ ಹೇಳುತ್ತಿದ್ದರು. ಆದ್ರೆ, ನಿರ್ದೇಶಕರಿಗೆ ಈ ಸಿನೆಮಾವನ್ನು ಮುಂದುವರಿಸಲೇಬೇಕಿತ್ತು. ಅಷ್ಟರಲ್ಲಿ ಈ ಸುದ್ದಿ ಮಾಧ್ಯಮಗಳಿಗೆ ಗೊತ್ತಾಯ್ತು. ಪತ್ರಿಕೆಗಳಲ್ಲೂ ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು. ಇದರಿಂದ ಮಿಥುನ್ ತುಂಬಾ ನೊಂದಿದ್ದರು. ಇಷ್ಟಾಗುವಾಗ ನಿರ್ದೇಶಕರಾದ ಕಲ್ಪನಾ ಲಾಜ್ಮಿ ಹಾಗೂ ಹೀಗೂ ಇಬ್ಬರನ್ನೂ ಸಮಾಧಾನ ಮಾಡಿ ಚಿತ್ರವನ್ನೇನೋ ಮುಗಿಸಿದರು..ಇಷ್ಟೆಲ್ಲಾ ರಾದ್ಧಾಂತ ಆದ ಮೇಲೆ ಸುಶ್ಮಿತಾ ಪತ್ರಿಕೆಗಳ ಮುಂದೆ ಬಂದು ‘ತಪ್ಪು ಗ್ರಹಿಕೆ’ಯಿಂದ ಈ ರೀತಿ ಆರೋಪ ಮಾಡಬೇಕಾಯ್ತು. ನಾನು ಈಗಲೂ ಮಿಥುನ್ ಚಕ್ರವರ್ತಿಯನ್ನು ನಂಬುತ್ತೇನೆ ಎಂದು ಹೇಳಿದರು. ಆದ್ರೆ, ಮಿಥುನ್ ಬದುಕಿನಲ್ಲಿ ಇದೊಂದು ಘಟನೆ ಕಪ್ಪು ಚುಕ್ಕೆಯಾಗಿಯೇ ಉಳಿಯಿತು… ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಅನ್ನುವುದು ಇದಕ್ಕೇ…

About sudina

Check Also

ಈ ಚಿತ್ರದಿಂದಲೇ ಮಾಧುರಿ ಸ್ಟಾರ್ ಆಗಿದ್ದು! : ಬೀದಿ ಬದಿಯಲ್ಲಿ ಬಾಲಕನಿಗೆ ಕೊಟ್ಟಿದ್ದೇ ದೀಕ್ಷಿತ್ ಫಸ್ಟ್ ಆಟೋಗ್ರಾಫ್!

ಮಾಧುರಿ ದೀಕ್ಷಿತ್ ಆಗ ಸ್ಟಾರ್ ಆಗಿರಲಿಲ್ಲ. ನಟಿಸಿದ ಏಳೆಂಟು ಚಿತ್ರಗಳೂ ತೋಪೆದ್ದು ಹೋಗಿದ್ದವು. ಆದರೂ ಮಾಧುರಿ ಪ್ರಯತ್ನ ಬಿಟ್ಟಿರಲಿಲ್ಲ. ಹೀಗೆ, …

Leave a Reply

Your email address will not be published. Required fields are marked *

error: Content is protected !!