Saturday , November 17 2018
ಕೇಳ್ರಪ್ಪೋ ಕೇಳಿ
Home / News NOW / ಧಾರಾಕಾರ ಮಳೆ : ಹಾರಂಗಿಯಿಂದ ನೀರು ಹೊರಕ್ಕೆ : ಇಲ್ಲಿದೆ ಸುಂದರ ವೀಡಿಯೋ

ಧಾರಾಕಾರ ಮಳೆ : ಹಾರಂಗಿಯಿಂದ ನೀರು ಹೊರಕ್ಕೆ : ಇಲ್ಲಿದೆ ಸುಂದರ ವೀಡಿಯೋ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ, ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಲಾಯಶದ ನೀರನ್ನು ಕ್ರೆಸ್ಟ್ ಗೇಟ್‍ಗಳ ಮೂಲಕ ನದಿಗೆ ಹರಿಸಲಾಗಿದೆ. ಸದ್ಯ 24 ಸಾವಿರ ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ. ಮತ್ತೆ ಕೊಡಗಿನಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇರೋದ್ರಿಂದ ಜಲಾಶಯದ ಭದ್ರತಾ ದೃಷ್ಠಿಯಿಂದ ಜಲಾಶಯದಿಂದ ಕಾವೇರಿ ನದಿಗೆ 1200 ಕ್ಯೂಸೆಕ್ಸ್ ನೀgನ್ನು ಮೊನ್ನೆ ಸಂಜೆ ಹರಿಬಿಡಲಾಯಿತು.

ಹಾರಂಗಿ ಜಲಾಶಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಲಾಶಯದ ನಾಲ್ಕೂ ಕ್ರೆಸ್ಟ್ ಗೇಟ್‍ಗಳಿಗೆ ವಿಶೇಷ ಪೂಜೆ ಸಲ್ಲಿಸಿ ನದಿಗೆ ನೀರನ್ನು ಹರಿಬಿಟ್ಟರು. ನೀರು ನದಿಗೆ ಹರಿಸುವ ಮುನ್ನ ಮೂರು ಬಾರಿ ಸೈರನ್ ಬಾರಿಸುವ ಮೂಲಕ ನದಿ ಪಾತ್ರದಲ್ಲಿನ ಜನ-ಜಾನುವಾರುಗಳಿಗೆ ಎಚ್ಚರಿಕೆ ರವಾನಿಸಲಾಗಿತ್ತು. ಜಲಾಶಯದ ನಾಲ್ಕೂ ಕ್ರೆಸ್ಟ್ ಗೇಟ್‍ಗಳು ಓಪನ್ ಆಗುತ್ತಿದ್ದಂತೆ ಹಾಲ್ಗೊರೆ ಸೂಸುತ್ತಾ ದುಮ್ಮಿಕ್ಕಿದ ನೀರಿನ ಸೊಬಗನ್ನು ಕಂಡು ಜನ ಸಂಭ್ರಮಿಸಿದರು.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!