Tuesday , November 20 2018
ಕೇಳ್ರಪ್ಪೋ ಕೇಳಿ
Home / Film News / ವಿಜಯ್ ಚಿತ್ರದ ವಿವಾದ : 10 ಕೋಟಿ ಪರಿಹಾರಕ್ಕೆ ಕೋರ್ಟ್‍ಗೆ ಅರ್ಜಿ…

ವಿಜಯ್ ಚಿತ್ರದ ವಿವಾದ : 10 ಕೋಟಿ ಪರಿಹಾರಕ್ಕೆ ಕೋರ್ಟ್‍ಗೆ ಅರ್ಜಿ…

ಚೆನ್ನೈ : ತಮಿಳು ನಟ ವಿಜಯ್ ಚಿತ್ರದ `ಸರ್ಕಾರ್’ನ ಪೋಸ್ಟರ್ ರಿಲೀಸ್ ಆದ ದಿನದಿಂದಲೂ ವಿವಾದಗಳು ಭುಗಿಲೇಳುತ್ತಲೇ ಇದೆ. ಈ ಚಿತ್ರದ ಫಸ್ಟ್ ಲುಕ್‍ನಲ್ಲಿ ವಿಜಯ್ ಸಿಗರೇಟ್ ಎಳೆಯುವ ಫೋಟೋ ಇದೆ. ಈ ಫೋಟೋಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೆ, ಸಾರ್ವಜನಿಕ ಆರೋಗ್ಯ ಇಲಾಖೆ ಈ ಪೋಸ್ಟರ್ ಅನ್ನು ತೆಗೆಯುವಂತೆ ನಿರ್ಮಾಪಕರಾದ ಸನ್ ಪಿಕ್ಚರ್ಸ್ ಪ್ರೊಡಕ್ಷನ್ ಕಂಪೆನಿಗೆ ಒತ್ತಾಯಿಸಿತ್ತು. ಇದೀಗ ಈ ಪೋಸ್ಟರ್ ವಿರುದ್ಧ ನಟ, ನಿರ್ಮಾಪಕ, ನಿರ್ದೇಶಕರ ವಿರುದ್ಧ ವಕೀಲರೊಬ್ಬರು ಚೆನ್ನೈ ಹೈಕೋರ್ಟ್‍ನ ಮೊರೆ ಹೋಗಿದ್ದಾರೆ.

ಈ ಪೋಸ್ಟರ್ ಹಾಕಿದ ತಪ್ಪಿಗಾಗಿ ನಟ ವಿಜಯ್, ನಿರ್ದೇಶಕ ಮುರುಘದಾಸ್ ಮತ್ತು ನಿರ್ಮಾಪಕರಾದ ಸನ್ ಪಿಕ್ಚರ್ಸ್ ಕಂಪೆನಿ ತಲಾ 10 ಕೋಟಿಯಷ್ಟು ಪರಿಹಾರ ನೀಡಬೇಕು ಎಂದು ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಚೆನ್ನೈ ಹೈಕೋರ್ಟ್‍ಗೆ ಸಲ್ಲಿಸಿದ್ದಾರೆ. ಜೊತೆಗೆ, ಈ ಪರಿಹಾರದ ಮೊತ್ತವನ್ನು ಅಡಿಯಾರ್ ಕ್ಯಾನ್ಸರ್ ಇನ್ಸ್‍ಟ್ಯೂಟ್‍ಗೆ ನೀಡುವಂತೆಯೂ ಅರ್ಜಿದಾರರು ಕೋರಿಕೊಂಡಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ವಿಜಯ್, ಮುರುಘಾದಾಸ್ ಮತ್ತು ನಿರ್ಮಾಪಕರಿಗೆ ನೊಟೀಸ್ ನೀಡಿದೆ. ಜೊತೆಗೆ, ಎರಡು ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!