Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಛಲಗಾರ್ತಿಯನ್ನು ಕಾಡುವ ಕ್ಯಾನ್ಸರ್ : ಬೇಕಾಗಿದೆ ನಿಮ್ಮೆಲ್ಲರ ಸಹಾಯ…

ಛಲಗಾರ್ತಿಯನ್ನು ಕಾಡುವ ಕ್ಯಾನ್ಸರ್ : ಬೇಕಾಗಿದೆ ನಿಮ್ಮೆಲ್ಲರ ಸಹಾಯ…

ಈಕೆ ನಾಗಶ್ರೀ ಶ್ರೀರಕ್ಷಾ. ಸುದಿನ ಕುಟುಂಬದ ಸದಸ್ಯೆಯೂ ಹೌದು. ಈ ತಂಡದಲ್ಲಿರುವ ನಾವುಗಳು ಜೊತೆಯಾಗಿ ಪತ್ರಿಕೋದ್ಯಮದ ತರಗತಿಗಳಲ್ಲಿ ಹರಟುತ್ತಾ, ಚರ್ಚಿಸುತ್ತಾ, ಬರೆಯುತ್ತಾ, ನಗುತ್ತಿದ್ದವರು. ನಾಗಶ್ರೀಗೆ ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅಗಾಧ ಓದು ಅವಳದ್ದು. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸದಾ ಮುಂದು. ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಯೂತ್ ಝೋನ್ ಫೆಸ್ಟಿವಲ್ ಗಳನ್ನು ಪದವಿಯ ಮೂರು ವರ್ಷಗಳಲ್ಲೂ ಭಾಗವಹಿಸುವ ಮೂಲಕ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಹೆಮ್ಮ ತಂದವಳು. ನಾಟಕ, ಮೈಮ್, ವೀರಗಾಸೆ, ಹಾಡುಗಾರಿಕೆ, ಕರಗ ನೃತ್ಯ ಎಲ್ಲದರಲ್ಲೂ ಅವಳಿರಲೇಬೇಕು.

ನಂತರ ಕೆಂಡಸಂಪಿಗೆ ವೆಬ್ ಸೈಟಿನಲ್ಲಿ ಕೆಲಕಾಲ ಉದ್ಯೋಗಿಯಾಗಿದ್ದವಳು ಅಲ್ಲಿ ಇನ್ನಷ್ಟು ಬರವಣಿಗೆಯಲ್ಲಿ ತೊಡಗಿಸಿಕೊಂಡಳು. ಅವಳ ಕವನ ಶಕ್ತಿಯ ಪರಿಚಯವಾಗಿದ್ದೇ ಅಲ್ಲಿ ಎನ್ನಬಹುದು. ಆಮೇಲೆ ಇತಿಹಾಸಜ್ಞ ಷ.ಶೆಟ್ಟರ್ ಜೊತೆಗೆ ಸಂಶೋಧನಾ ಕಾರ್ಯಗಳಲ್ಲಿ ಸಹಾಯಕಿಯಾಗಿದ್ದಳು. ಬ್ಯಾಗ್ ಏರಿಸಿ ಪ್ರಪಂಚ ಪರ್ಯಟನೆ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ ಅವಳಿಗೆ. ಹೋದ ಕಡೆಯ ನೋಟಗಳನ್ನು ನಾಗಶ್ರೀ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದ ರೀತಿ ಭಿನ್ನ ಮತ್ತು ಅಷ್ಟೇ ಚಂದ. ಈಕೆಯ ಕವನ ಸಂಕಲನ ‘ನಕ್ಷತ್ರ ಕವಿತೆಗಳು’ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಇಂತಹ ಜೀವನೋತ್ಸಾಹದ ಬುಗ್ಗೆಗೆ ನಾಲ್ಕರ ಮುದ್ದಾದ ಮಗಳೀಗ.

ಆದರೆ ಇಷ್ಟೆಲ್ಲಾ ತುಂಬು ಬದುಕನ್ನು ನೋಡಲಾಗದ ಕಾಣದ ಕೈಯೊಂದು ಅವಳ ಜೀವವನ್ನು ಹಿಂಡಿ ಹಿಪ್ಪೆ ಮಾಡಿದೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದ ಹುಡುಗಿ ಈಗ ಆಸ್ಪತ್ರೆಯ ಆಯತಾಕಾರದ ಬೆಡ್ ಗೆ ಅಂಟಿ ಮಲಗಿದ್ದಾಳೆ. ಅವಳಿಗೀಗ ಮಾರಕ ಕ್ಯಾನ್ಸರ್. ಸಾರ್ಕೋಮಾ ಕ್ಯಾನ್ಸರ್ ನಿಂದ ಬಳಲುತ್ತಿರುವ ನಾಗಶ್ರೀಯ ಒಂದು ಶ್ವಾಸಕೋಶ ಮತ್ತು ಧ್ವನಿಫಲಕವನ್ನು ಈಗಾಗಲೇ ತೆಗೆಯಲಾಗಿದೆ. ಮೇದೋಜೀರಕಾಂಗದ ಸುತ್ತ 6 ಕ್ಯಾನ್ಸರ್ ಟ್ಯೂಮರ್ ಗಳು ಹರಡಿವೆ. ಬದುಕುವ ಅದಮ್ಯ ಆಸೆಯ ನಾಗಶ್ರೀ ಕ್ಯಾನ್ಸರ್ ಮೆಟ್ಟಿ ನಿಲ್ಲುವ ಛಲದಿಂದ ಹೋರಾಡುತ್ತಿದ್ದಾಳೆ. ಅವಳ ಹೋರಾಟಕ್ಕೆ ನಾವೂ ಜೊತೆಯಾಗೋಣ. ಮುಂದಿನ ಆಪರೇಶನ್ ಸಿಂಗಾಪುರದ ಆಸ್ಪತ್ರೆಯಲ್ಲಿ ನಡೆಯಬೇಕಾಗಿದೆ. ಅದಕ್ಕೆ ತಗಲುವ ವೆಚ್ಚ ಸುಮಾರು 50 ಲಕ್ಷ ರೂಪಾಯಿ. ನಾಗಶ್ರೀ ಚಿಕಿತ್ಸೆಗೆ ಈಗಾಗಲೇ ಖರ್ಚಾದ ವೆಚ್ಚ ಕೋಟಿಗೂ ದಾಟಿದೆ. ಹೀಗಾಗಿ, ಅವರ ಕುಟುಂಬಕ್ಕೆ ನಮ್ಮ ಸಹಾಯದ ಅವಶ್ಯಕತೆ ಇದೆ. ದಯವಿಟ್ಟು ಕೈಲಾದಷ್ಟು ನೆರವು ನೀಡಿ. ಬ್ಯಾಂಕ್ ಖಾತೆಯ ವಿವರಗಳು ಕೆಳಗಿವೆ.

  • Account number: 8080811040450
  • Account name: Nagashri
  • IFSC code: YESB0CMSNOC

ಸಹಾಯ ಮಾಡಲಿಚ್ಚಿಸುವವರು ಇಲ್ಲಿ ಕ್ಲಿಕ್ ಮಾಡಿ : Help Nagashri Survive

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!