Sunday , July 22 2018
ಕೇಳ್ರಪ್ಪೋ ಕೇಳಿ
Home / Film News / ಕಣ್ಸನ್ನೆ ಹುಡುಗಿಯ ಸಂಭಾವನೆ ಒಂದು ಕೋಟಿ…!

ಕಣ್ಸನ್ನೆ ಹುಡುಗಿಯ ಸಂಭಾವನೆ ಒಂದು ಕೋಟಿ…!

ತಿರುವನಂತಪುರಂ : ಪ್ರಿಯಾ ಪ್ರಕಾಶ್ ವಾರಿಯರ್… ಈ ಹೆಸರು ಹೇಳಿದರೆ ಹೆಚ್ಚಿನ ವಿವರಣೆಯೇ ಬೇಕಾಗಿಲ್ಲ. ತನ್ನ ಕಣ್ಸನ್ನೆ ಮೂಲಕವೇ ಇಂಟರ್‍ನೆಟ್‍ನಲ್ಲಿ ಹವಾ ಎಬ್ಬಿಸಿದ್ದ ಮಲಯಾಳಂ ಬೆಡಗಿ ಈ ಪ್ರಿಯಾ. `ಒರ್ ಅಡಾರ್ ಲವ್’ ಚಿತ್ರದ ಹಾಡಿನ ಮೂಲಕ ಈ ಹುಡುಗಿ ಒಂದೇ ಸಲಕ್ಕೆ ಸ್ಟಾರ್ ಪಟ್ಟಕ್ಕೇರಿದ್ದರುು. ಇಡೀ ಭಾರತ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಧೂಳೆಬ್ಬಿಸಿದ್ದ ಸುಂದರಿ ಈಕೆ.

ಹೀಗೆ ಒಂದೇ ಹಾಡಿನಲ್ಲಿ ಸ್ಟಾರ್ ಆದ ಪ್ರಿಯಾಗೆ ಸಿನಿಲೋಕದಲ್ಲಿ ಹಲವು ಆಫರ್‍ಗಳು ಬಂದವು. ಜಾಹೀರಾತಿನಲ್ಲೂ ಪ್ರಿಯಾ ಬ್ಯುಸಿಯಾಗಿದ್ದರು. ಸದ್ಯದ ಈ ಹುಡುಗಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಅದು ಸಂಭಾವನೆ ಮೂಲಕ. ಸಾಮಾನ್ಯವಾಗಿ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಪ್ರಿಯಾ 7.5 ಲಕ್ಷದಷ್ಟು ಸಂಭಾವನೆ ಪಡೆಯುತ್ತಿದ್ದರು. ಆದರೆ ಒಂದು ಕಂಪೆನಿ ಇವರಿಗೆ ಒಂದು ಕೋಟಿ ರೂಪಾಯಿ ಸಂಭಾವನೆ ನೀಡಿದೆ…! ಈ ಜಾಹೀರಾತಿನ ಶೂಟಿಂಗ್ ಕೂಡಾ ಆರಂಭವಾಗಿದೆ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಇನ್ನು, ಪ್ರಿಯಾರ ಒಂದು ಕೋಟಿ ಸಂಭಾವನೆ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!