Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಕೊನೆಗೂ ನಡೆಯಿತು ಮಿಥುನ್ ಚಕ್ರವರ್ತಿ ಪುತ್ರನ ಮದುವೆ…!

ಕೊನೆಗೂ ನಡೆಯಿತು ಮಿಥುನ್ ಚಕ್ರವರ್ತಿ ಪುತ್ರನ ಮದುವೆ…!

ಊಟಿ : ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಕೊನೆಗೂ ಮದುವೆ ಆಗಿದ್ದಾರೆ. ಮದಲಸಾ ಶರ್ಮಾ ಮಹಾಕ್ಷಯ್ ಬಾಳಸಂಗಾತಿಯಾಗಿ ಬಂದಿದ್ದಾರೆ. ಮಹಾಕ್ಷಯ್ ವಿರುದ್ಧ ಗೆಳತಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದರು. ಹೀಗಾಗಿ, ಇವರ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ, ಮೊನ್ನೆ ನಡೆಯಬೇಕಾದ ಮದುವೆ ರದ್ದಾಗಿತ್ತು. ಇನ್ನು, ಜುಲೈ 7 ರಂದೇ ಇವರಿಬ್ಬರು ರಿಜಿಸ್ಟರ್ ಮದುವೆ ಆಗಿದ್ದು, ಸಾಂಪ್ರದಾಯಿಕವಾಗಿ ಇಂದು ಊಟಿಯ ಐಷಾರಾಮಿ ಹೊಟೇಲ್‍ನಲ್ಲಿ ಇವರಿಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಆದರೆ, ಇವರ ವಿವಾಹ ಸಮಾರಂಭಕ್ಕೆ ಸಂಬಂಧಿಕರು ಮತ್ತು ಸ್ನೇಹಿತರಿಗೆ ಅಷ್ಟೇ ಆಹ್ವಾನ ಇತ್ತು.

ಮೊನ್ನೆ ಗೆಳತಿಯೊಬ್ಬರು ಮಹಾಕ್ಷಯ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಮದುವೆಯಾಗುವುದಾಗಿ ನಂಬಿಸಿ ಜ್ಯೂಸ್‍ನಲ್ಲಿ ಮತ್ತು ಬರುವ ಔಷಧಿ ಹಾಕಿ ನನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಇವರು ದೂರಿದ್ದರು. ಜೊತೆಗೆ, ಮಹಾಕ್ಷಯ್ ತಾಯಿ ಯೋಗಿತಾ ಬಾಲಿ ವಿರುದ್ಧವೂ ಬೆದರಿಕೆ ಆರೋಪ ಮಾಡಲಾಗಿತ್ತು. ಹೀಗಾಗಿ, ಈ ಇಬ್ಬರ ವಿರುದ್ಧವೂ ದೂರು ದಾಖಲಾಗಿತ್ತು.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!