Friday , September 21 2018
ಕೇಳ್ರಪ್ಪೋ ಕೇಳಿ
Home / Film News / ಬಾಲಿವುಡ್ ಎಂಟ್ರಿಗೆ ಮಹಮ್ಮದ್ ಶಮಿ ಪತ್ನಿ ರೆಡಿ…

ಬಾಲಿವುಡ್ ಎಂಟ್ರಿಗೆ ಮಹಮ್ಮದ್ ಶಮಿ ಪತ್ನಿ ರೆಡಿ…

ಮುಂಬೈ : ಪತ್ನಿ ಕ್ರಿಕೆಟಿಗ ಮಹಮ್ಮದ್ ಶಮಿ ಅವರಿಂದ ದೂರವಾಗಿರುವ ಹಸಿನ್ ಜಹಾನ್ ಈಗ ಮಾಡೆಲಿಂಗ್ ಕ್ಷೇತ್ರದತ್ತ ಜಾಸ್ತಿ ಗಮನ ಕೇಂದ್ರೀಕರಿಸುತ್ತಿದ್ದಾರೆ. ಜೊತೆಗೆ, ಬಾಲಿವುಡ್ ಪ್ರವೇಶಿಸುವುದಕ್ಕೂ ಸಿದ್ಧತೆ ನಡೆಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ನಿರ್ದೇಶಕ ಅಮ್ಜದ್ ಖಾನ್ ಅವರ ಮುಂದಿನ ಚಿತ್ರ `ಫತ್ವಾ’ದಲ್ಲಿ ನಟಿಸಲು ಹಸಿನ್ ಸೈನ್ ಮಾಡಿದ್ದಾರಂತೆ. `ಫತ್ವಾ’ ಚಿತ್ರದಲ್ಲಿ ಹಸಿನ್ ಅವರದ್ದು ಪತ್ರಕರ್ತೆಯ ಪಾತ್ರ. ಅಕ್ಟೋಬರ್ ವೇಳೆಗೆ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.


ಇದೇ ವರ್ಷ ಹಸಿನ್ ಪತಿ ಮಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮಾನಸಿಕ, ದೈಹಿಕ ಹಿಂಸೆ, ಕಿರುಕುಳ, ಮ್ಯಾಚ್ ಫಿಕ್ಸಿಂಗ್‍ನಂತರ ಆರೋಪವನ್ನು ಶಮಿ ಮೇಲೆ ಹೊರಿಸಿದ್ದ ಹಸಿನ್ ಸುದ್ದಿಯಾಗಿದ್ದರು. ಈ ಗಲಾಟೆ ಬಳಿಕ ದಂಪತಿ ಪರಸ್ಪರ ದೂರವಾಗಿದ್ದರು.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!