Monday , July 23 2018
ಕೇಳ್ರಪ್ಪೋ ಕೇಳಿ
Home / Film News / ಜುಲೈ 20ಕ್ಕೆ `ನಾಗರಹಾವು’ ರಿಲೀಸ್

ಜುಲೈ 20ಕ್ಕೆ `ನಾಗರಹಾವು’ ರಿಲೀಸ್

ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಅವರಂತಹ ಅದ್ಭುತ ನಾಯಕ ನಟನನ್ನು ಕೊಟ್ಟ `ನಾಗರ ಹಾವು’ ಚಿತ್ರ ಹೊಸ ಅವತರಣಿಕೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಜುಲೈ 20ಕ್ಕೆ ನಾಗರ ಹಾವು ಬಿಡುಗಡೆಯಾಗಲಿದೆ. ರೆಬಲ್ ಸ್ಟಾರ್ ಅಂಬರೀಷ್ ಕೂಡಾ ಇದೇ ಚಿತ್ರದ ಮೂಲಕ ಗಮನ ಸೆಳೆದಿದ್ದರು.

ಕನ್ನಡ ಸಿನೆಮಾ ಲೋಕದ ದಿಗ್ದರ್ಶಕ ಪುಟ್ಟಣ ಕಣಗಾಲ್ ಈ ಚಿತ್ರ ನಿರ್ದೇಶಿಸಿದ್ದರು. ಖ್ಯಾತ ಸಾಹಿತಿ ತರಾಸು ಅವರ ಕಾದಂಬರಿ ಆಧರಿಸಿದ ಈ ಚಿತ್ರವನ್ನು ಕ್ರೇಝಿಸ್ಟಾರ್ ರವಿಚಂದ್ರನ್ ಅವರ ತಂದೆ ಎನ್.ವೀರಾಸ್ವಾಮಿ ನಿರ್ಮಿಸಿದ್ದರು. 1973ರಲ್ಲಿ ಈ ಸಿನಿಮಾ ನಿರ್ಮಾಣವಾಗಿತು. ಇದೀಗ ಇದೇ ಚಿತ್ರಕ್ಕೆ ತಂತ್ರಜ್ಞಾನದಿಂದ ಹೊಸ ರೂಪ ನೀಡಲಾಗಿದ್ದು, ವಿಷ್ಣು ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!