Sunday , September 23 2018
ಕೇಳ್ರಪ್ಪೋ ಕೇಳಿ
Home / Interval / ತಮಗೆ ಬಂದಿದ್ದ ಪ್ರಶಸ್ತಿಯನ್ನು ಅಮೀರ್‍ಗೆ ಕೊಟ್ಟು ನಡೆದಿದ್ದರು ಅಕ್ಷಯ್…!

ತಮಗೆ ಬಂದಿದ್ದ ಪ್ರಶಸ್ತಿಯನ್ನು ಅಮೀರ್‍ಗೆ ಕೊಟ್ಟು ನಡೆದಿದ್ದರು ಅಕ್ಷಯ್…!

ಅದು 2009ರ ಮಾತು. `ಸ್ಟಾರ್ ಸ್ಕ್ರೀನ್ ಅವಾರ್ಡ್’ ಫಂಕ್ಷನ್ ನಡೆಯುತ್ತಿತ್ತು. ಎಲ್ಲರಿಗೂ ಪ್ರಶಸ್ತಿ ಘೋಷಣೆಯಾಯ್ತು. ಈ ವೇಳೆ, `ಸಿಂಗ್ ಇಸ್ ಕಿಂಗ್’ ಚಿತ್ರದ ಅಭಿನಯಕ್ಕೆ ಅಕ್ಷಯ್ ಕುಮಾರ್‍ಗೆ ಪ್ರಶಸ್ತಿ ನೀಡಲಾಯ್ತು. ಪ್ರಶಸ್ತಿ ಸ್ವೀಕರಿಸುವುದಕ್ಕೆ ಅಕ್ಷಯ್ ಸ್ಟೇಜ್‍ಗೆ ಬಂದರು. ಮೈಕ್ ತೆಗೆದುಕೊಂಡು ಮಾತು ಆರಂಭಿಸಿದರು. ಎಲ್ಲರಿಗೂ ಧನ್ಯವಾದ ಹೇಳಿದರು. ಆದರೆ, ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲಿಲ್ಲ… `ಈ ಪ್ರಶಸ್ತಿ ನನಗಿಂತಲೂ ನಟ ಅಮೀರ್ ಖಾನ್‍ಗೆ ಸಲ್ಲಬೇಕು’ ಎಂದು ಅಕ್ಷಯ್ ಹೇಳಿದಾಗ ಒಂದು ಕ್ಷಣ ಇಡೀ ಸಭಾಂಗಣವೇ ಅವಕ್ಕಾಗಿತ್ತು…! ಆದರೆ, ಅಕ್ಷಯ್ ಮಾತು ಮುಂದುವರಿಸಿದರು..

`ನಾನು ಇತ್ತೀಚೆಗೆ ಅಮೀರ್ ಖಾನ್ ನಟನೆಯ ಘಜನಿ ಚಿತ್ರ ನೋಡಿದೆ. ಈ ಚಿತ್ರ ನನ್ನನ್ನು ತುಂಬಾ ಸೆಳೆದಿತ್ತು. ಇದಾದ ಬಳಿಕ ನಾನು ನನ್ನ ಚಿತ್ರವನ್ನೂ ನೋಡಿದೆ. ಅದರಲ್ಲೂ ಸಿಂಗ್ ಇಸ್ ಕಿಂಗ್ ಅನ್ನೇ ನೋಡಿದೆ. ಆದರೆ, ನನ್ನ ಅಭಿನಯವನ್ನು ಅಮೀರ್ ಅಭಿನಯಕ್ಕೆ ಹೋಲಿಸಲು ಸಾಧ್ಯವೇ ಆಗಲಿಲ್ಲ. ಹೀಗಾಗಿ, ಈ ಪ್ರಶಸ್ತಿಗೆ ಅಮೀರ್ ಸೂಕ್ತ. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಗೆ ಅಮೀರ್ ಖಾನ್ ಸೂಕ್ತ ವ್ಯಕ್ತಿ ಅನ್ನುವುದರಲ್ಲಿ ಸಂಶಯವೇ ಇಲ್ಲ. ಘಜನಿ ಚಿತ್ರದಲ್ಲಿ ಅಮೀರ್ ತೋರಿದ ಅಭಿನಯ ಅದ್ಭುತ, ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡು ಅಮೀರ್ ಇಲ್ಲಿ ನಟಿಸಿದ್ದಾರೆ. ಹೀಗಾಗಿ, ಈ ಪ್ರಶಸ್ತಿ ಅಮೀರ್‍ಗೆ ಸಲ್ಲಬೇಕು. ನನಗೆ ಗೊತ್ತಿದೆ. ಇನ್ನೆಂದೂ ನನಗೆ ಇಂತಹ ಅವಕಾಶ ಬಾರದು. ಆದರೂ ನನಗೆ ಸಲ್ಲದ ವಸ್ತುವನ್ನು ನಾನು ತೆಗೆದುಕೊಳ್ಳುವುದಕ್ಕೆ ನನಗೆ ಮನಸ್ಸು ಒಪ್ಪುತ್ತಿಲ್ಲ’ ಎಂದು ಅಕ್ಷಯ್ ಹೇಳಿದ್ದರು. ಜೊತೆಗೆ ವೋಟ್ ಮಾಡಿದ ಎಲ್ಲಾ ಅಭಿಮಾನಿಗಳೂ ಹೃದಯ ತುಂಬಿದ ಧನ್ಯವಾದ ಹೇಳಿದರು. ನಿಮ್ಮಿಂದನೇ ನಾನಿಲ್ಲಿ ನಿಂತಿದ್ದೇನೆ ಎಂದೂ ಕೃತಜ್ಞತೆ ಸಲ್ಲಿಸಿದರು…

ಹೀಗೆ ಮಾತನಾಡುತ್ತಲೇ ಅಕ್ಷಯ್ ಪ್ರಶಸ್ತಿಯನ್ನು ಅಲ್ಲೇ ಬಿಟ್ಟು ಹೋದರು. ಆಗ ಇಡೀ ಸಭಾಂಗಣವೇ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿತು. ಪತ್ನಿ ಟ್ವಿಂಕಲ್ ಖನ್ನಾ ಕೂಡಾ ಪತಿಯ ಪ್ರಾಮಾಣಿಕತೆಗೆ ಮುಗುಳ್ನಗುವಲ್ಲೇ ಶಹಬ್ಬಾಸ್ ಹೇಳಿದರು.

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!