Friday , September 21 2018
ಕೇಳ್ರಪ್ಪೋ ಕೇಳಿ
Home / Film News / ಕಟ್ಟಡದಿಂದ ಜಿಗಿದು ಬಾಲಿವುಡ್ ಸ್ಕ್ರಿಪ್ಟ್ ರೈಟರ್ ಆತ್ಮಹತ್ಯೆ…

ಕಟ್ಟಡದಿಂದ ಜಿಗಿದು ಬಾಲಿವುಡ್ ಸ್ಕ್ರಿಪ್ಟ್ ರೈಟರ್ ಆತ್ಮಹತ್ಯೆ…

ಮುಂಬೈ : ತಾನು ವಾಸವಾಗಿರುವ ಅಪಾರ್ಟ್‍ಮೆಂಟ್‍ನಿಂದ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ. 32 ವರ್ಷದ ರವಿಶಂಕರ್ ಅಲೋಕ್ ಆತ್ಮಹತ್ಯೆಗೆ ಶರಣಾದ ಯುವಕ. ಅಂಧೇರಿ ವೆಸ್ಟ್‍ನಲ್ಲಿರುವ ಅಪಾರ್ಟ್‍ಮೆಂಟ್‍ನಿಂದ ಜಿಗಿದು ಇವರು ಸಾವಿಗೆ ಶರಣಾಗಿದ್ದಾರೆ.

ನಾನಾ ಪಟೇಕರ್ ಅಭಿನಯದ `ಅಬ್ ತಕ್ ಚಪ್ಪನ್’ ಚಿತ್ರದ ಬರವಣಿಗೆ ವಿಭಾಗದಲ್ಲಿ ಇವರು ಕೆಲಸ ಮಾಡಿದ್ದರು. ಇನ್ನು, ಆತ್ಮಹತ್ಯೆ ನಡೆದ ಸ್ಥಳದಲ್ಲಿ ಯಾವುದೇ ಡೆತ್‍ನೋಟ್‍ಗಳು ಸಿಕ್ಕಿಲ್ಲ. ಸದ್ಯದ ಮಾಹಿತಿ ಪ್ರಕಾರ ರವಿಶಂಕರ್ ಖಿನ್ನತೆಗೊಳಗಾಗಿದ್ದರು ಮತ್ತು ಮಾನಸಿಕ ಸಮಸ್ಯೆಯ ಕಾರಣದಿಂದ ಚಿಕಿತ್ಸೆಯೂ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ. ಸಬ್‍ಅರ್ಬನ್ ವಸೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!