Monday , January 21 2019
ಕೇಳ್ರಪ್ಪೋ ಕೇಳಿ
Home / Interval / ಅಕ್ಷಯ್ ಕುಮಾರ್ 18 ತಿಂಗಳು ಲೈಟ್ ಮನ್ ಆಗಿದ್ದರು…! : ಸ್ಟಾರ್ ಗಳ  ಫೋಟೋ ತೆಗೆದಿದ್ದರು…!

ಅಕ್ಷಯ್ ಕುಮಾರ್ 18 ತಿಂಗಳು ಲೈಟ್ ಮನ್ ಆಗಿದ್ದರು…! : ಸ್ಟಾರ್ ಗಳ  ಫೋಟೋ ತೆಗೆದಿದ್ದರು…!

ಅದು ಅಕ್ಷಯ್ ಕುಮಾರ್ ಕಷ್ಟದಲ್ಲಿದ್ದ ದಿನಗಳು.. ಬಾಂಕಾಂಕ್, ಥೈಲ್ಯಾಂಡ್‍ನಲ್ಲಿ ಮಾರ್ಷಲ್ ಆರ್ಟ್ ಕಲಿಯುತ್ತಿದ್ದ ಸಮಯವದು. ಆಗ ಬದುಕಿಗಾಗಿ ಅಕ್ಕಿ ಅನಿವಾರ್ಯವಾಗಿ ಶೆಫ್ ಮತ್ತು ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಮುಂಬೈಗೆ ಬಂದ ಅಕ್ಷಯ್ ಇಲ್ಲಿ ಮಾರ್ಷಲ್ ಆರ್ಟ್ ಕಲಿಸುತ್ತಿದ್ದರು. ಈ ನಡುವೆ, ಇವರ ವಿದ್ಯಾರ್ಥಿಗಳು ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗಲು ಅಕ್ಷಯ್‍ಗೆ ಸಲಹೆ ನೀಡಿದ್ದರು. ಅದರಂತೆ ಅಕ್ಕಿ ಗಮನ ಮಾಡೆಲಿಂಗ್ ಕ್ಷೇತ್ರದತ್ತ ಹರಿದಿತ್ತು.

ಛಾನ್ಸ್ ಸಿಗುವುದಕ್ಕೆ ಅದ್ಭುತ ಫೋಟೋಗಳು ಬೇಕಿತ್ತು. ಆದರೆ, ಆ ಅಕ್ಷಯ್ ಬಳಿ ಅಷ್ಟು ದುಡ್ಡಿರಲಿಲ್ಲ. ಹೀಗಾಗಿ, ಖ್ಯಾತ ಮಾಡೆಲಿಂಗ್ ಫೋಟೋಗ್ರಾಫರ್ ಜಯೇಶ್ ಶೇಟ್ ಜೊತೆ ಕೆಲಸಕ್ಕೆ ಸೇರಿದರು. ಬರೋಬ್ಬರಿ 18 ತಿಂಗಳು ಸಂಬಳವೇ ಇಲ್ಲದೆ ಲೈಟ್ ಮನ್ ಆಗಿ ದುಡಿದರು. ಈ ವೇಳೆ, ಹಲವು ಸ್ಟಾರ್‍ಗಳು ಜಯೇಶ್ ಅವರ ಬಳಿ ಫೋಟೋ ತೆಗೆಸಿಕೊಂಡಿದ್ದರು. ಜಾಕಿ ಶ್ರಾಫ್, ಗೋವಿಂದ, ಸಂಗೀತಾ ಬಿಜಲಾನಿ ಸೇರಿದಂತೆ ಇಲ್ಲೇ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ, ಇವರಿಗೆಲ್ಲಾ ಅಕ್ಷಯ್ ಲೈಟ್ ಹಿಡಿದಿದ್ದರು…! ಹೀಗೆ ಒಂದಷ್ಟು ತಿಂಗಳು ಕಳೆದ ಮೇಲೆ ಜಯೇಶ್ ಅವರಲ್ಲಿ ಅಕ್ಕಿ ಮನವಿ ಮಾಡಿಕೊಂಡರು. ನನ್ನದೂ ಮಾಡೆಲಿಂಗ್ ಫೋಟೋ ತೆಗೆಯಿರಿ ಎಂದು ಕೇಳಿಕೊಂಡರು. ಇವರ ಮಾತಿಗೆ ಕಟ್ಟು ಬಿದ್ದ ಜಯೇಶ್ ಉಚಿತವಾಗಿಯೇ ಅದ್ಭುತ ಫೋಟೋ ತೆಗೆದರು. ಈ ಫೋಟೋದಿಂದಲೇ ಅಕ್ಕಿಯ ಮಾಡೆಲಿಂಗ್ ಪಯಣ ಮತ್ತಷ್ಟು ಗಟ್ಟಿಯಾಗುತ್ತಾ ಸಾಗಿತು… ಈಗ ಅಕ್ಕಿ ಏರಿದ ಎತ್ತರ ಇತಿಹಾಸ.. ಆದರೆ, ಅಂದಿನ ಕಷ್ಟದ ದಿನಗಳನ್ನು ಅಕ್ಷಯ್ ಇನ್ನೂ ಮರೆತಿಲ್ಲ…

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!