Sunday , February 17 2019
ಕೇಳ್ರಪ್ಪೋ ಕೇಳಿ
Home / Earth / ಮಾವುತ ಬಾರದ ನೋವು… ನೋವಲ್ಲೇ ಪ್ರಾಣ ತ್ಯಜಿಸಿದ ಆನೆ ಮರಿ…!

ಮಾವುತ ಬಾರದ ನೋವು… ನೋವಲ್ಲೇ ಪ್ರಾಣ ತ್ಯಜಿಸಿದ ಆನೆ ಮರಿ…!

ಶಿವಮೊಗ್ಗ : ಇದು ಮೂಕ ಜೀವವೊಂದರ ಮನಕಲಕುವ ಸುದ್ದಿ… ನೋವಲ್ಲಿ ಪ್ರಾಣ ತ್ಯಜಿಸಿದ ಅಮಾಯಕ ಮರಿಯ ನೋವು…! ಇದು ನಡೆದದ್ದು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆ ಬಿಡಾರದಲ್ಲಿ…

ಒಂದೂವರೆ ವರ್ಷದ ಹಿಂದೆ ದಾಂಡೇಲಿಯಲ್ಲಿ ಕೃಷಿ ಹೊಂಡದಲ್ಲಿ ಆನೆ ಮರಿಯೊಂದು ಬಿದ್ದಿತ್ತು. ಜೀವನ್ಮರಣ ಸ್ಥಿತಿಯಲ್ಲಿದ್ದ ಈ ಮರಿಯನ್ನು ರಕ್ಷಿಸಿ ಬಳಿಕ ಸಕ್ರೆಬೈಲಿಗೆ ತರಲಾಗಿತ್ತು. ಇದಕ್ಕೆ ಬಾಲಾಜಿ ಎಂದು ಹೆಸರಿಡಲಾಗಿತ್ತು. ಇಲ್ಲಿ ಮರಿಯ ಆರೈಕೆ ಮಾಡುತ್ತಿದ್ದವನು ಮುಬಾರಕ್. ಆನೆಯು ಮುಬಾರಕ್ ಜೊತೆ ತುಂಬಾ ಆತ್ಮೀಯವಾಗಿ ಬೆರೆತುಕೊಂಡಿತ್ತು. ಖುಷಿಯಾಗಿ ಇಲ್ಲಿನ ವಾತಾವರಣಕ್ಕೂ ಹೊಂದಿಕೊಂಡಿತ್ತು…

ಆದರೆ, ಕಳೆದ 15 ದಿನಗಳ ಹಿಂದೆ ಮುಬಾರಕ್ ತಾನು ಪ್ರೀತಿಸಿದ ಹುಡುಗಿಯೊಂದಿಗೆ ನಾಪತ್ತೆಯಾಗಿದ್ದ. ಆದರೆ, ಇತ್ತ, ತನ್ನ ಆಪ್ತ ಪಾಲಕ ಇಲ್ಲದೆ ಮರಿ ಬಾಲಾಜಿ ನೊಂದಿತ್ತು. ಈ ನೋವಿನಲ್ಲೇ ಆಹಾರವನ್ನೂ ತ್ಯಜಿಸಿತ್ತು. ಆನೆ ಬಿಡಾರದ ಇತರ ಸಿಬ್ಬಂದಿ ಆಹಾರ ತಿನ್ನಿಸಲು ಎಷ್ಟೇ ಪ್ರಯತ್ನಿಸಿದರೂ ಈ ಮರಿ ಹದಿನೈದು ದಿನಗಳಿಂದ ಏನೂ ತಿಂದೇ ಇಲ್ಲ. ಇದರಿಂದ ಮರಿ ತುಂಬಾ ಬಳಲಿತ್ತು ಮತ್ತು ಅನಾರೋಗ್ಯಕ್ಕೀಡಾಗಿತ್ತು. ಹೀಗಾಗಿ, ಆನೆ ಬಿಡಾರದ ವೈದ್ಯರು ಹೆಚ್ಚಿನ ನಿಗಾ ವಹಿಸಿ ಆನೆಯ ಆರೈಕೆಗೆ ಪ್ರಯತ್ನ ಪಟ್ಟಿದ್ದರು. ಆದರೆ, ಅದೂ ಸಾಧ್ಯವಾಗಲಿಲ್ಲ. ಮುಬಾರಕ್ ಗಾಗಿ ಕಾಯುತ್ತಲೇ ಇದ್ದ ಮರಿಯಾನೆ ಬಾಲಾಜಿ ಅದೇ ಕೊರಗಿನಲ್ಲಿ ಪ್ರಾಣವನ್ನೇ ಬಿಟ್ಟಿದೆ…

About sudina

Check Also

ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಮಡಿಕೇರಿ : ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣು ಕಾಡಾನೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆಗೆ ಸಮೀಪದ ಅಬ್ಬೂರುಕಟ್ಟೆ ಬಳಿಯ ಕಾಡ್ನೂರು ಬಳಿ …

Leave a Reply

Your email address will not be published. Required fields are marked *

error: Content is protected !!