Saturday , January 19 2019
ಕೇಳ್ರಪ್ಪೋ ಕೇಳಿ
Home / News NOW / ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ವೇಳೆ ದುರಂತ : ಕಾಲೇಜು ವಿದ್ಯಾರ್ಥಿನಿ ಸಾವು

ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ವೇಳೆ ದುರಂತ : ಕಾಲೇಜು ವಿದ್ಯಾರ್ಥಿನಿ ಸಾವು

ಕೊಯಮತ್ತೂರು : ತಮಿಳುನಾಡಿನ ಕೊಯಮತ್ತೂರಿನ ಕಾಲೇಜಿನಲ್ಲೊಂದು ದುರಂತ ಸಂಭವಿಸಿದೆ. ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ವೇಳೆ ಕಟ್ಟಡದ ಮೇಲಿನಿಂದ ಬಿದ್ದು ವಿದ್ಯಾರ್ಥಿನಿಯೊಬ್ಬಳುಜ ಸಾವನ್ನಪ್ಪಿದ್ದಾಳೆ. 19 ವರ್ಷದ ಲೋಕೇಶ್ವರಿ ಮೃತ ವಿದ್ಯಾರ್ಥಿನಿ.

ಕಲೈ ಮಗಲ್ ಆಟ್ರ್ಸ್ ಆಂಡ್ ಸೈನ್ಸ್ ಕಾಲೇಜಿನ ಬಿಬಿಎ ದ್ವಿತೀಯ ವರ್ಷ ಓದುತ್ತಿದ್ದ ಲೋಕೇಶ್ವರಿ ವಿಪತ್ತು ನಿರ್ವಹಣೆಯ ಬಗೆಗಿನ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಳು. ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಯಾವ ರೀತಿ ತಪ್ಪಿಸಿಕೊಳ್ಳಬೇಕು ಎಂದು ತೋರಿಸಲಾಗುತ್ತಿತ್ತು. ಈ ವೇಳೆ, ಎರಡನೇ ಮಹಡಿಯ ಬಳಿ ನಿಂತಿದ್ದ ಲೋಕೇಶ್ವರಿಯ ಕಾಲು ಜಾರಿದ್ದರಿಂದ ಆಕೆ ಕೆಳಗೆ ಬಿದ್ದಿದ್ದಾಳೆ. ಇವಳ ಪಕ್ಕದಲ್ಲೇ ನಿಂತಿದ್ದ ಟ್ರೈನರ್ ಅರುಮುಗನ್ ಕೆಳಗೆ ಜಂಪ್ ಮಾಡಲು ಹೇಳಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಟ್ರೈನರ್ ತಳ್ಳಿದರಾ…? : ಇನ್ನು, ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಲೋಕೇಶ್ವರಿ ಕೆಳಗೆ ಹಾರಲು ಹೆದರಿದ್ದಳು. ಹೀಗಾಗಿ, ಟ್ರೈನರ್ ಅರುಮುಗನ್ ಅವಳನ್ನು ತಳ್ಳಿದ್ದಾರೆ ಎಂದು ಹೇಳಿದ್ದಾರೆ. ಹೀಗೆ ತಳ್ಳಿದ್ದರಿಂದ ಲೋಕೇಶ್ವರಿ ಆಯತಪ್ಪಿ ನೆಲಕ್ಕೆ ಬಿದ್ದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿ ಅಸುನೀಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಳಗೆ ಬಿದ್ದವರನ್ನು ಹಿಡಿಯಲು ಜನ ನಿಂತಿದ್ದರೂ ಲೋಕೇಶ್ವರಿ ಬೇರೆ ಕಡೆ ಬಿದ್ದಿದ್ದರಿಂದ ಅವಳನ್ನು ಹಿಡಿಯಲು ಸಾಧ್ಯವಾಗಲಿಲ್ಲ. ತಕ್ಷಣ ಈಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಈಕೆ ಕೊನೆಯುಸಿರೆಳೆದಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರೈನರ್ ಅರುಮುಗನ್ ವಿರುದ್ಧ ನಿರ್ಲಕ್ಷ್ಯದ ಕೇಸ್ ದಾಖಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!