Monday , July 23 2018
ಕೇಳ್ರಪ್ಪೋ ಕೇಳಿ
Home / Sudina Special / ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಕ್ಷಮಾಪನಾ ಪತ್ರದೊಂದಿಗೆ ಕದ್ದ ಚಿನ್ನ ಹಿಂದಿರುಗಿಸಿದ ಕಳ್ಳ…!

ಅಲಫ್ಫುಜಾ : ಕೇರಳದ ಅಲಫ್ಫುಜಾದಲ್ಲಿ ವಿಚಿತ್ರ ಕಳ್ಳತನ ನಡೆದಿದೆ. ಕಳ್ಳನೊಬ್ಬ ತಾನು ಕದ್ದ ಚಿನ್ನವನ್ನು ಮತ್ತೆ ಅದೇ ಮನೆಗೆ ಹಿಂದಿರುಗಿಸಿ ಕ್ಷಮೆಯನ್ನೂ ಕೇಳಿ ಪತ್ರ ಬರೆದಿದ್ದಾನೆ…! ಇಲ್ಲಿನ ಮಧು ಕುಮಾರ್ ಎಂಬುವವರು ಕುಟುಂಬದ ಕಾರ್ಯಕ್ರಮಕ್ಕೆಂದು ಬೇರೆ ಕಡೆ ತೆರಳಿದ್ದರು. ಆದರೆ, ಆವತ್ತು ಇವರು ಗೇಟ್ ಬಾಗಿಲು ಹಾಕಲು ಮರೆತಿದ್ದರು. ಇದನ್ನು ಗಮನಿಸಿದ್ದ ಕಳ್ಳ ಅದೇ ದಿನ ಮಧು ಕುಮಾರ್ ಮನೆಗೆ ನುಗ್ಗಿದ್ದ. ಜೊತೆಗೆ, ಚಿನ್ನಾಭರಣವನ್ನೂ ಕದ್ದು ಪರಾರಿಯಾಗಿದ್ದ.

ಇತ್ತ, ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಮಧು ಕುಮಾರ್ ಅವರಿಗೆ ತಮ್ಮ ಮನೆಯಲ್ಲಿ ಕಳ್ಳತನವಾದದ್ದು ಗೊತ್ತಾಗಿತ್ತು. ತಕ್ಷಣ ಇವರು ಪಕ್ಕದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕ ಗುರುವಾರ ಬೆಳಗ್ಗೆ ಮಧು ತಮ್ಮ ಮನೆ ಬಾಗಿಲು ತೆರೆಯುವಾಗ ಅಲ್ಲೇ ಕಳ್ಳತನವಾದ ಚಿನ್ನಾಭರಣ ಕಾಣಿಸಿತ್ತು. ಜೊತೆಗೆ, ಒಂದು ಪತ್ರವೂ ಇತ್ತು. ಅದು ಈ ಕಳ್ಳನೇ ಬರೆದಿದ್ದ ಪತ್ರ. `ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಹಣಕಾಸಿ ತೊಂದರೆ ಇದ್ದ ಕಾರಣ ನಾನು ನಿಮ್ಮ ಮನೆಯ ಚಿನ್ನಾಭರಣ ಕದ್ದಿದ್ದೆ. ಆದರೆ, ಇನ್ನು ಮುಂದೆ ಇಂತಹ ತಪ್ಪನ್ನು ಎಂದೂ ಮಾಡಲ್ಲ. ದಯವಿಟ್ಟು ನನ್ನ ವಿರುದ್ಧ ಪೊಲೀಸರಿಗೆ ದೂರು ನೀಡಬೇಡಿ’ ಎಂದೂ ಕಳ್ಳ ಪತ್ರದಲ್ಲಿ ಬರೆದಿದ್ದ.

ಇನ್ನು, ಈ ಬಗ್ಗೆ ಮಧು ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಈ ಕೇಸ್ ತನಿಖೆ ಕೈ ಬಿಟ್ಟಿದ್ದಾಗಿ ಪ್ರಖ್ಯಾತ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

About sudina

Check Also

96 ರ ಅಜ್ಜಿಯ ಓದುವ ಆಸೆ… : ನೂರು ವರ್ಷ ಆಗುವುದರೊಳಗೆ 10ನೇ ಕ್ಲಾಸ್ ಪೂರೈಸುವ ಹೆಬ್ಬಯಕೆ…!

ಅಳಪುಳಾ (ಕೇರಳ) : ದೇವರನಾಡು ಕೇರಳದಲ್ಲಿ ಈಗ ಅಜ್ಜಿಯೊಬ್ಬರು ಗಮನ ಸೆಳೆದಿದ್ದಾರೆ. ತಮ್ಮ ಓದುವ ಬಯಕೆಯಿಂದಲೇ ಇವರು ಸುದ್ದಿಯಾಗಿದ್ದಾರೆ…! ಇವರ …

Leave a Reply

Your email address will not be published. Required fields are marked *

error: Content is protected !!