Wednesday , August 15 2018
ಕೇಳ್ರಪ್ಪೋ ಕೇಳಿ
Home / Sudina Special / ಜೀವನೋತ್ಸಾಹಕ್ಕೆ ಸಾಕ್ಷಿ : ವೈರಲ್ ಆಗುತ್ತಿದೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಯುವಕನ ಹಾಡು…

ಜೀವನೋತ್ಸಾಹಕ್ಕೆ ಸಾಕ್ಷಿ : ವೈರಲ್ ಆಗುತ್ತಿದೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಯುವಕನ ಹಾಡು…

ತಿರುವನಂತಪುರ : ಜೀವನೋತ್ಸಾಹ ಅಂದರೆ ಇದು… ಇದೊಂದು ಯುವಕನೊಬ್ಬನ ನೋವಿನ ಕತೆ… ಈ ನೋವಿನಲ್ಲೂ ಈ ಯುವಕ ಮಾದರಿ ಜೀವನ ಮಾಡುತ್ತಿದ್ದಾರೆ. ಹೆಸರು ನಂದು ಮಹಾದೇವ. ರಾತ್ರೋರಾತ್ರಿ ಇವರೀಗ ಸ್ಟಾರ್ ಆಗಿದ್ದಾರೆ.

ಸಂದು ಕ್ಯಾನ್ಸರ್ ವಿರುದ್ಧ ಸೆಣಸಾಡುತ್ತಿರುವ ಯುವಕ. ಕಿಮೊಥೆರಪಿ ಪಡೆಯುತ್ತಿದ್ದಾರೆ. ಇಂತಹ ಸ್ಥಿತಿಯಲ್ಲೂ ಇವರು ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ಹಾಡಿದ್ದಾರೆ. ಈ ಹಾಡು ಈಗ ಸಖತ್ ವೈರಲ್ ಆಗುತ್ತಿದೆ. ಫೇಸ್‍ಬುಕ್‍ನಲ್ಲಿ ಇವರ ಹಾಡುವ ದೃಶ್ಯವನ್ನು ಎಲ್ಲರೂ ಕೊಂಡಾಡಿದ್ದಾರೆ. ಜೊತೆಗೆ, ಶೀಘ್ರ ಗುಣಮುಖರಾಗುವಂತೆಯೂ ಹಾರೈಸಿದ್ದಾರೆ. ಇನ್ನು, ವೀಡಿಯೋ ಪೋಸ್ಟ್ ಮಾಡಿದರ ಜೊತೆಗೆ ಒಂದಷ್ಟು ಪದಗಳನ್ನೂ ನಂದು ಕಟ್ಟಿಕೊಟ್ಟಿದ್ದಾರೆ. ` ದೈಹಿಕವಾಗಿ ಇಂತಹ ಸಮಸ್ಯೆ ಇದ್ದಾಗಲೂ ಬಂದು ನಾನು ನನ್ನ ಶಕ್ತಿಯಾನುಸಾರ ಹಾಡಿದ್ದೇನೆ. ನನ್ನಂದಿ ತಪ್ಪಾಗಿದ್ದರೆ ಕ್ಷಮಿಸಿ’ ಎಂದು ಕೇಳಿಕೊಂಡು ನಂದು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ…

About sudina

Check Also

ಮಾಲಕನಿಗೆ ಆಸರೆಯಾದ ಶ್ವಾನ… : ಹೃದಯವೇ ಭಾರವಾಗಿಸುತ್ತದೆ ಮಮತೆಯ ಈ ವೀಡಿಯೋ…

ಪಿಲಿಫೇನ್ಸ್ : ಶ್ವಾನ ನಿಯತ್ತಿಗೆ ಮತ್ತೊಂದು ಹೆಸರು… ಅನ್ನ ಇಟ್ಟ ಮನೆಗೆ ಯಾವತ್ತೂ ದ್ರೋಹ ಬಗೆಯುವ ಪ್ರಾಣಿ ನಾಯಿಯಲ್ಲ… ಇದೂ …

Leave a Reply

Your email address will not be published. Required fields are marked *

error: Content is protected !!